ಕಾಲಿನ ಎರಡನೇ ಬೆರಳು ಉದ್ದ ಇರೋ ಹುಡುಗಿಯರನ್ನ ಮದುವೆ ಯಾದ್ರೆ ಏನಾಗುತ್ತೆ

ಈಗಿನ ಸಂಪ್ರದಾಯದಲ್ಲಿ ಬಹಳಷ್ಟು ಜನರು ಮದುವೆಯಾಗುವ ಹುಡುಗಿ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಹುಡುಗಿ ವಿನಮ್ರವಾಗಿ ಇರಬೇಕು, ಸುಂದರವಾಗಿ ಇರಬೇಕು ಎಲ್ಲ ಬಗೆಯಲ್ಲಿಯೂ ಸರ್ವಾಲಂಕಾರ ಆಗಿ ಇರಬೇಕು ಎಂದು ಬಯಸುತ್ತಾರೆ. ಅದೇ ರೀತಿ ಕೆಲವರು ಮದುವೆಯ ವಿಚಾರದಲ್ಲಿ ಶಾಸ್ತ್ರ ಸಂಪ್ರದಾಯಗಳನ್ನು ಬಹಳಷ್ಟು ಗೌರವಿಸಿ ಮದುವೆ ಆಗುವವರೂ ಇರುತ್ತಾರೆ ಅಂತವರಿಗಾಗಿ ಈ ಲೇಖನದಲ್ಲಿ ನಾವು ಕಾಲಿನ ಎರಡನೇ ಬೆರಳು ಉದ್ದವಾಗಿರುವ ಮಹಿಳೆಯರನ್ನು ವಿವಾಹ ಆದರೆ ಅವರ ಜೀವನ ಹೇಗೆ ಯಾವ ರೀತಿಯಲ್ಲಿ ಇರುತ್ತದೆ ಎನ್ನುವುದನ್ನು ನಾವಿಲ್ಲಿ ನೋಡೋಣ.

ಕಾಲಿನ ಹೆಬ್ಬೆರಳು ಒಂದಕ್ಕಿಂದ ವಿಭಿನ್ನವಾಗಿ ಬೇರೆ ಬೇರೆಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಕಾಲಿನ ಎರಡನೇ ಬೆರಳು ಮಧ್ಯದ ಬೆರಳಿಗಿಂತ ಅಥವಾ ಹೆಬ್ಬೆರಳಿಗಿಂತಲೂ ಉದ್ದವಾಗಿ ಇದ್ದರೆ ಅದರ ಅರ್ಥ ಏನು? ಎನ್ನುವ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ಯಾರಿಗಾದರೂ ಹೆಬ್ಬೆರಳು ಬಹಳಷ್ಟು ಉದ್ದವಾಗಿ ಇದ್ದರೆ ಅಂತಹ ಹೆಣ್ಣು ಮಕ್ಕಳು ಬಹಳಷ್ಟು ಬುದ್ಧಿವಂತರಾಗಿರುತ್ತಾರೆ. ಅಷ್ಟೇ ಅಲ್ಲದೇ ಅವರಲ್ಲಿ ಸೃಜನಾತ್ಮಕತೆ ಹೆಚ್ಚಾಗಿ ಇರುತ್ತದೆ. ಇನ್ನು ಎಲ್ಲಾ ಬೆರಳಿಗಿಂತಲೂ ಹೆಬ್ಬೆರಳು ದೊಡ್ಡದಾಗಿ ಇದ್ದರೆ ಅವರಲ್ಲಿ ನಾಯಕತ್ವದ ಗುಣ ಹೆಚ್ಚಾಗಿ ಇರುತ್ತದೆ.

ಇನ್ನು ಹೆಬ್ಬೆರಳಿನ ಪಕ್ಕದ ಬೆರಳು ಬಹಳಷ್ಟು ಉದ್ದವಾಗಿ ಇದ್ದರೆ ಅಂತಹ ಹುಡುಗಿಯರು ಬಹಳಷ್ಟು ಬುದ್ಧಿವಂತರಾಗಿರುತ್ತಾರಂತೆ. ಹಾಗೆಯೇ ಇವರೂ ಕೂಡ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತಾರಂತೇ. ಇಂತಹ ಹುಡುಗಿಯರು ಬಹಳ ಶಕ್ತಿವಂತ ಹುಡುಗಿ ಆಗಿದ್ದು ಬಹಳ ಧೃಢತೆಯಿಂದ ಇರುತ್ತಾರೆ. ಎಲ್ಲರಿಗಿಂತಲೂ ಈ ಹುಡುಗಿಯರಲ್ಲಿ ಊಹಿಸಲು ಆಗದಂತಹ ಶಕ್ತಿ ಇರುತ್ತದೆ. ಅಷ್ಟೇ ಅಲ್ಲದೆ ಅಂತಹ ಹುಡುಗಿಯರು ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಾರಂತೆ. ತನ್ನ ಪತಿಯನ್ನು ದೇವರಿಗಿಂತ ಹೆಚ್ಚಾಗಿ ಪೂಜಿಸುತ್ತಾರೆ ಮತ್ತು ಅಷ್ಟೇ ಬೆಲೆ ಗೌರವ ಕೊಟ್ಟು ಮಾತನಾಡಿಸುತ್ತಾರೆ. ಇನ್ನು ಹೆಬ್ಬೆರಳಿನ ಪಕ್ಕದ ಬೆರಳು ಚಿಕ್ಕದಾಗಿದ್ದರೆ ಅಂತಹ ಹುಡುಗಿಯರು ಬಹಳಷ್ಟು ಹೊಂದಾಣಿಕೆಯ ಸ್ವಭಾವವನ್ನು ಹೊಂದಿರುತ್ತಾರೆ.

Leave a Comment

error: Content is protected !!