ಗುರುವಾರದ ದಿನ ಭವಿಷ್ಯ: ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಈ ರಾಶಿಯವರಿಗಿಂದು ಅದೃಷ್ಟ,

Daily Horoscope 30 November: ಮೇಷ ರಾಶಿ: ಸಹೋದರರ ಮಧ್ಯೆ ಮುಡಿದಂತಹ ಭಿನ್ನಾಭಿಪ್ರಾಯಗಳು ಬಗೆ ಹರಿದು ನಿಮ್ಮ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ, ಈ ದಿನ ಹೆಚ್ಚು ಆರಾಮದಾಯಕ ಸಮಯವನ್ನು ಕಲಿಯುವಿರಿ, ಧಾರ್ಮಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ ಹಾಗೂ ಮನೆಯಲ್ಲಿ ಹೋಮ ಹವನದ ಮಂಗಳ ಕಾರ್ಯಗಳು ಜರುಗುತ್ತದೆ. ಇದರಿಂದ ನಿಮ್ಮೊಳಗೆ ಸಕಾರಾತ್ಮಕತೆ ಹೆಚ್ಚಾಗುವುದು ನಿಮ್ಮ ಪ್ರೀತಿ ಪಾತ್ರರಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಬೆಂಬಲ ವ್ಯಕ್ತವಾಗುತ್ತದೆ.

ವೃಷಭ ರಾಶಿ: ಇಂದು ವ್ಯಾಪಾರಿಗಳು ಗ್ರಾಹಕರೊಂದಿಗೆ ವಿಶ್ವಾಸವನ್ನು ಬೆಳೆಸಿಕೊಳ್ಳುವರು ಇದರಿಂದ ಇನ್ನು ಹೆಚ್ಚಿನ ಅಭಿವೃದ್ಧಿಯಾಗಲಿದೆ, ಯಾವುದೇ ವಿಚಾರದಲ್ಲಿಯೂ ನಿರ್ಣಯ ತೆಗೆದುಕೊಳ್ಳುವ ಮುನ್ನ ಸಹನೆಯಿಂದ ಯೋಚಿಸುವುದು ಅಗತ್ಯ. ಈ ದಿನ ಅಷ್ಟು ಸುಗಮವಾಗಿಲ್ಲದ ಕಾರಣ ಕಾಗದ ಪತ್ರಗಳಿಗೆ ಸಹಿ ಹಾಕುವಂತಹ ಯೋಜನೆಯನ್ನು ನಡೆಸಬೇಡಿ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮನೆಯ ಹಿರಿಯರ ಬಳಿ ಕುಳಿತು ಚರ್ಚಿಸುವುದು ಅಗತ್ಯ.

ಮಿಥುನ ರಾಶಿ: ಪೂರ್ವಾ ನಿಯೋಜಿತ ಕೆಲಸಗಳನ್ನು ಮಾಡಲು ಹಿಂದೆಟಾಕುತ್ತೀರಾ ಹಲವು ದಿನಗಳಿಂದ ಭಾದಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಯು ಜನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತದೆ ಹೀಗಾಗಿ ಆರೋಗ್ಯದ ಕಡೆಗೆ ಗಮನವಹಿಸುವುದು ಅಗತ್ಯ. ಸಹದ್ಯೋಗಿಗಳೊಂದಿಗೆ ಮಾತಿನ ಚಖಮಕಿಗೆ ಇಳಿಯುವಿರಿ ಸುಖ ಸುಮ್ಮನೆ ಕಿರಿಕಿರಿ ಮನಸ್ತಾಪ ಮೂಡಲಿದೆ.

ಕಟಕ ರಾಶಿ: ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಸಹೋದರರ ಮಧ್ಯೆ ಜಗಳ ಸೃಷ್ಟಿಯಾಗಬಹುದು ಮಾತಿನಿಂದ ಬಗೆಹರಿಸಿಕೊಳ್ಳಬಹುದಾದಂತಹ ವಿಚಾರಗಳನ್ನು ಮೌನವಹಿಸಿ ಹೆಚ್ಚು ಮಾಡುತ್ತೀರಾ, ಉದರಕ್ಕೆ ಸಂಬಂಧಿಸಿದಂತಹ ನೋವು ಬಾದೆ ಇಂದು ನಿಮ್ಮನ್ನು ಕಾಡುತ್ತದೆ, ನಿಮಗೆ ವಹಿಸಿದ್ದಂತಹ ಕೆಲಸವನ್ನು ಪೂರ್ಣಗೊಳಿಸಲಾಗದೆ ವೃತ್ತಿ ಕ್ಷೇತ್ರದಲ್ಲಿ ಅವಮಾನಕ್ಕೆ ಒಳಗಾಗಬಹುದು.

ಸಿಂಹ ರಾಶಿ: ಗುರು ರಾಘವೇಂದ್ರಾ ರಾಯರ ಕೃಪಾಶೀರ್ವಾದ ಈ ದಿನ ನಿಮ್ಮ ಮೇಲಿರುವದರಿಂದ ಅಂದುಕೊಂಡಂತಹ ಕೆಲಸವನ್ನು ನಿಗದಿತ ಅವಧಿಯಲ್ಲಿ ಮಾಡಿ ಮುಗಿಸುತ್ತೀರಾ ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ಇಂದು ನಿಮ್ಮ ಕೈ ಸೇರುತ್ತದೆ ಸಂಜೆಯ ಸಮಯದಲ್ಲಿ ಅಮೂಲ್ಯವಾದಂತ ವಸ್ತುವನ್ನು ಕಳೆದುಕೊಂಡು ಚಿಂತೆಗೆ ಈಡಾಗುವಿರಿ, ವ್ಯಾಪಾರದಲ್ಲಿ ಮಧ್ಯಮವರ್ತಿಗಳಿಂದ ನಷ್ಟ ಉಂಟಾಗಬಹುದು ಎಚ್ಚರ.

ಕನ್ಯಾ ರಾಶಿ: ಸಿಹಿ ಪದಾರ್ಥಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಆದಾಯ ಉಂಟಾಗುತ್ತದೆ, ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆಂದು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿರುವವರಿಗೆ ಆಕಾಂಕ್ಷೆಗೂ ಮೀರಿದಂತಹ ಫಲಿತಾಂಶ ದೊರಕುತ್ತದೆ ಮನೆಯಲ್ಲಿ ಶಾಂತಿ ಹಾಗೂ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರುವುದು.

ತುಲಾ ರಾಶಿ: ಈ ದಿನದ ಪೂರ್ವಾರ್ಧದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುತ್ತೀರಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡು ಬರಲಿದೆ. ಹೊಸಮನೆ ನಿರ್ಮಾಣದ ಕಾರ್ಯಗಳು ಮಂದಗತಿಯಿಂದ ಸಾಗುತ್ತದೆ ತಾಯಿಯ ಆರೋಗ್ಯದಲ್ಲಿ ಏರುಪೇರು ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಾಡುವವರಿಗೆ ಈ ದಿನ ಮಿಶ್ರ ಫಲ ಇರಲಿದೆ.

ವೃಶ್ಚಿಕ ರಾಶಿ: ಬಣ್ಣದ ಬದುಕಿನಲ್ಲಿ ಕೆಲಸ ಮಾಡುವವರಿಗೆ ಅವಕಾಶಗಳು ಹರಸಿ ಬರುತ್ತದೆ ನಿಮ್ಮ ಅದ್ಭುತ ಸೌಂದರ್ಯ ಪ್ರಜ್ಞೆಯು ಇತರರಿಗೆ ಮುದವನ್ನು ನೀಡುತ್ತದೆ ಮುಂದಾಲೋಚನೆ ಮಾಡದೆ ಕೆಲ ನಿರ್ಧಾರಗಳನ್ನು ತೆಗೆದುಕೊಂಡು ಸಮಸ್ಯೆಗೆ ಸಿಲುಕಿ ಕೊಳ್ಳುವಿರಿ, ಹೊಸ ವಾಹನವನ್ನು ಖರೀದಿಸುವಂತಹ ಯೋಜನೆಯನ್ನು ಸಾಯಂಕಾಲದ ವೇಳೆ ಕಾರ್ಯರೂಪಕ್ಕೆ ತರುವುದು ಒಳ್ಳೆಯದು.

ಧನು ರಾಶಿ: ವಾಹನ ಚಲಾಯಿಸುವಾಗ ಎಚ್ಚರದಿಂದ ಇರಬೇಕು, ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ, ಹಲವು ದಿನಗಳಿಂದ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಇಂದು ನೀವು ಅಂದುಕೊಂಡಂತಹ ಕೆಲಸ ದೊರಕುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬಂದಿದೆ. ಮನ ಶಾಂತಿಗಾಗಿ ಒಬ್ಬರೇ ದೂರ ಪ್ರಯಾಣಕ್ಕೆ ಹೊರಡಬಹುದಾದ ಸಾಧ್ಯತೆ ವೃತ್ತಿ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿಯನ್ನು ಕಾಣುತ್ತೀರಾ.

ಮಕರ ರಾಶಿ: ಸ್ವಾವಲಂಬಿಗಳಾಗಿ ನಿರ್ಧಾರ ತೆಗೆದುಕೊಳ್ಳುವುದನ್ನು ಅಭ್ಯಾಸಿಸಿ, ಬೆನ್ನಿಗೆ ಚೂ.ರಿ ಹಾಕಬಹುದಾದಂತಹ ಹಿತಶತ್ರುಗಳು ಹೆಚ್ಚಿದ್ದಾರೆ ಗಮನವಿರಲಿ ಗಣ್ಯ ವ್ಯಕ್ತಿಗಳ ಪರಿಚಯದಿಂದ ನಿಮ್ಮ ಕೆಲಸಗಳನ್ನು ಸುಗಮ ಮಾಡಿಕೊಳ್ಳುತ್ತೀರಾ ಸಂಗಾತಿಯೊಂದಿಗೆ ಹೆಚ್ಚಿನ ಪ್ರೀತಿ ಸಾಯಂಕಾಲದ ವೇಳೆ ಅವರೊಂದಿಗೆ ವಿಶೇಷವಾದ ಸ್ಥಳಕ್ಕೆ ಭೇಟಿ ನೀಡಿ ಸಮಯ ಕಳೆಯುವಿರಿ.

ಕುಂಭ ರಾಶಿ: ಶ್ರೀ ಗುರು ರಾಘವೇಂದ್ರ ರಾಯರ ಮಂಗಳಕರವಾದ ಅನುಗ್ರಹ ನಿಮ್ಮ ರಾಶಿ ಚಕ್ರದ ಮೇಲೆ ಇರುವುದರಿಂದ ಈ ದಿನ ನೀವು ಮಾಡುವಂತಹ ಎಲ್ಲಾ ಕೆಲಸದಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಲಾಭ ಹಾಗೂ ಆದಾಯವನ್ನು ಪಡೆಯುವಿರಿ, ಹಲವು ದಿನಗಳಿಂದ ಬರಬೇಕೆಂತಹ ಹಣವು ನಿಮ್ಮ ಕೈ ಸೇರಲಿದೆ ಇದರಿಂದ ಮನೆಯಲ್ಲಿ ಸಂತಸ ಕರವಾದ ವಾತಾವರಣ ಸೃಷ್ಟಿಯಾಗುವುದು, ವಿದೇಶದಲ್ಲಿ ಇರುವಂತಹ ನೆಂಟರು ಮನೆಗೆ ಬರುವರು ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಜರುಗುತ್ತವೆ.

ಮೀನ ರಾಶಿ: ಸ್ವಂತ ಉದ್ಯಮ ನಡೆಸುವ ಯೋಜನೆ ಇದ್ದರೆ ಅದಕ್ಕೆ ನಿಮ್ಮ ತಾಯಿಯ ಸಹಾಯಧನ ದೊರಕಲಿದೆ, 15 ವರ್ಷದ ಹಿಂದಿನ ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಸಮಾಧಾನಕರವಾಗಿರಲಿದೆ. ಸುಖ ಸುಮ್ಮನೆ ಬೇಡದ ವಸ್ತುಗಳನ್ನು ಖರೀದಿ ಮಾಡಿ ಹಣವ್ಯಯ ಮಾಡುವಿರಿ ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಎದುರಿಸ ಬಹುದು ಎಚ್ಚರ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!