ತಂಗಿ ಮಗಳ ಮದುವೆ ಸಂಭ್ರಮದಲ್ಲಿ ಅದ್ದೂರಿಯಾಗಿ ಮಿಂಚಿದ DK ಬ್ರದರ್ಸ್

ಸ್ನೇಹಿತರೆ ಕಳೆದೆರಡು ದಿನಗಳ ಹಿಂದೆ ಡಿಕೆ ಸಹೋದರರ ಕುಟುಂಬದಲ್ಲಿ ಮಂಗಳ ಕಾರ್ಯಗಳು ಬಹಳ ಅದ್ದೂರಿಯಾಗಿ ನಡೆದವು. ಇಡೀ ರಾಜಕೀಯ ರಂಗವೇ ತಮ್ಮತ್ತ ತಿರುಗಿ ನೋಡುವಂತಹ ವೈಭವೋ ಪೂರಿತ ಮದುವೆಯನ್ನು ಡಿಕೆ ಶಿವಕುಮಾರ್ ಕುಟುಂಬಸ್ಥರು ನಡೆಸಿ ಕೊಟ್ಟಿದ್ದು ಇದರ ಕೆಲ ಸುಂದರ ಫೋಟೋಗಳನ್ನು ಡಿಕೆ ಪುತ್ರಿ ಐಶ್ವರ್ಯ(Aishwarya) ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮ ಆಗಿ ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಅವರು ತಮ್ಮ ಮಗಳ ಮದುವೆಯಷ್ಟೇ ಅದ್ದೂರಿಯಾಗಿ ತಂಗಿ ಮಗಳ ಮದುವೆಯನ್ನು ನೆರವೇರಿಸಿ ಕೊಟ್ಟಿದ್ದು ಫೋಟೋದಲ್ಲಿ ಡಿಕೆ ಶಿವಕುಮಾರ್ ಬಹಳ ರಾಯಲ್ ಆಗಿ ಹೊಸ ಉಡುಪುಗಳನ್ನು ಧರಿಸಿ ಕಾಣಿಸಿಕೊಂಡರೆ ಮಗಳು ಐಶ್ವರ್ಯ ಅಪ್ಸರೆಯನ್ನೇ ನಾಚಿಸುವಂತೆ ಸಿದ್ಧವಾಗಿ ಫೋಟೋ ತೆಗೆಸಿಕೊಂಡಿದ್ದಾರೆ.

ಈ ಎಲ್ಲಾ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಐಶ್ವರ್ಯ “ಹೃದಯದಲ್ಲಿ ಕೆತ್ತಿದ ದಿನ! ಕುಟುಂಬದ ಮಾಂತ್ರಿಕ ಪ್ರೀತಿಯಿಂದ ಶಾಶ್ವತವಾಗಿ ಬಂದವಾಗಿದೆ. ಅವರ ಪಯಣವು ಸ್ನೇಹ ನಗು ಮತ್ತು ಪ್ರೀತಿಯಿಂದ ತುಂಬಿರಲಿ” ಎಂದು ತಮ್ಮ ಸಹೋದರಿಗೆ ಐಶ್ವರ್ಯ ಡಿಕೆ ಶಿವಕುಮಾರ್ ಅವರು ಪೋಸ್ಟ್ ಮೂಲಕ ಶುಭ ಹಾರೈಸಿದರು. ಈ ಮದುವೆ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾರಂಗದ ತಾರೆಯರು, ರಾಜಕೀಯ

ರಂಗದ ಮಿತ್ರರು, ಕುಟುಂಬಸ್ಥರು ಮತ್ತು ಆತ್ಮೀಯರು ಆಗಮಿಸಿ ನವ ವಧು ವರರಿಗೆ ಶುಭಕೋರಿದ್ದಾರೆ. ಬಹಳ ಐಷಾರಾಮಿಯಾದ ಕನ್ವೆನ್ಷನ್ ಹಾಲ್ ನಲ್ಲಿ ಡಿಕೆ ಶಿವಕುಮಾರ್ ಅವರ ತಂಗಿ ಮಂಜುಳಾ ಶಾಂತ ಚಂದ್ರ (Manjula Shantha Chandra) ಅವರ ಮಗಳ ಅದ್ದೂರಿ ಮದುವೆ ಕಾರ್ಯಕ್ರಮಗಳು ಜರುಗಿದ್ದು, ವೈಭವ ಪೂರಿತವಾದ ಹೂಗಳ ಅಲಂಕಾರ, ರಮಣೀಯವಾದ ಚಿತ್ರಣಗಳು ನೋಡುಗರ ಕಣ್ಸೆಳೆದವು.

ಇನ್ನು ಮದುವೆ ತುಂಬಾ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್(DK Suresh) ಇಬ್ಬರು ಬಹಳ ಅನ್ಯೂನ್ಯವಾಗಿ ಓಡಾಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ಇನ್ನು ತಮ್ಮ ಮನೆಯ ಮದುವೆಯಲ್ಲಿ ಐಶ್ವರ್ಯ ಡಿಕೆ ಶಿವಕುಮಾರ್(DK Shivakumar) ಕೂಡ ಬಹಳ ಸುಂದರವಾಗಿ ಕಂಗಳಿಸಿದ್ದು, ಪ್ರತಿಯೊಂದು ಶಾಸ್ತ್ರಕ್ಕೂ ವಿಭಿನ್ನವಾದ ಉಡುಪು ಧರಿಸಿ ಮದುವೆ ಹೆಣ್ಣು ಮಗಳಷ್ಟೇ ಮೋಹಕವಾಗಿ ಎಲ್ಲರ ಗಮನಸೆಳೆದರು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!