ಈ ಯುಗಾದಿಯಿಂದ ಈ ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗವಿದೆ

ಈ ಬಾರಿಯ ಯುಗಾದಿಯ ನಂತರದ ಗಜಕೇಸರಿ ಯೋಗದಿಂದ ಒಳ್ಳೆಯ ಜೀವನ ಹೊಂದಬಹುದಾಗಿದೆ. ಏಪ್ರಿಲ್ ರಿಂದ ಜೂನ್ ವರೆಗೆ ಈ ಗಜಕೇಸರಿ ಯೋಗವಿದೆ. ಗಜಕೇಸರಿಯ ಅರ್ಥವೆನೆಂದರೆ ಗಜ ಎಂದರೆ ಆನೆ , ಕೇಸರಿ ಎಂದರೆ ಸಿಂಹ. ಇಂತಹ ಶಕ್ತಿ ಈ ಬಾರಿ ನಾಲ್ಕು ರಾಶಿಯವರಿಗೆ ಲಭಿಸಲಿದೆ. ಗಜಕೇಸರಿ ಯೋಗದಿಂದ ಧನ ಪ್ರಾಪ್ತಿಯಾಗುತ್ತದೆ.

ಗಜಕೇಸರಿ ಯೋಗ ಯಾವ ರಾಶಿಯವರಿಗೆ ಬರಲಿದೆ ಎಂಬುದನ್ನು ನೋಡುವುದಾದರೆ, ಮಕರ ರಾಶಿಯವರಿಗೆ ಗಜಕೇಸರಿ ಯೋಗವಿದೆ. ಈ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದೆ, ಅಲ್ಲದೆ ಕೆಲಸದಲ್ಲಿ ಅಡೆತಡೆಗಳಿರುತ್ತವೆ. ಈಗ ಈ ರಾಶಿಗೆ ಗುರು ಸಂಚರಿಸುವುದರಿಂದ ಯುಗಾದಿ ನಂತರ ಮಕರ ರಾಶಿಗೆ ಗಜಕೇಸರಿ ಯೋಗ ಲಭಿಸಲಿದೆ.

ಇನ್ನು ಕಟಕ ರಾಶಿಗೂ ಹಂಸ ಯೋಗ ಅಥವಾ ಗಜ ಕೇಸರಿ ಯೋಗಪ್ರಾಪ್ತಿಯಾಗುತ್ತೆ. ವಿವಾಹವಾಗುವಂತಹ ಕಾಲ ಕಟಕ ರಾಶಿಯವರಿಗೆ. ವಯಸ್ಸಿಗೆ ಬಂದರೂ ಇನ್ನು ವಿವಾಹವಾಗಿಲ್ಲ ಅವರಿಗೆ ಗಜ ಕೇಸರಿ ಯೋಗದಿಂದ ವಿವಾಹ ಭಾಗ್ಯ ದೊರೆಯಲಿದೆ. ಅಲ್ಲದೆ ವಿನಯ ಪೂರ್ವಕವಾಗಿ ಬಡ್ತಿ ಪಡೆದು ಕೊಳ್ಳುತ್ತೀರಿ. ವಿದ್ಯೆಯಲ್ಲಿ ಯಶಸ್ಸು ಗಳಿಸುತ್ತೀರಿ.

ರಾಶಿ ಚಕ್ರದಲ್ಲಿನ 7 ನೇ ರಾಶಿಯಾದ ತುಲಾ ರಾಶಿಗೆ ಗಜ ಕೇಸರಿ ಯೋಗ ಲಭಿಸಲಿದೆ. ನಿಮ್ಮ ರಾಶಿ ಫಲದಲ್ಲಿ ಗುರು ಸಂಚಾರವಿದ್ದು, ಯುಗಾದಿಯ ನಂತರ 3 ತಿಂಗಳಲ್ಲಿ ರಾಜಯೋಗ ಫಲಿಸಲಿದೆ. ಉತ್ತಮ ವಸ್ತ್ರ, ರತ್ನಗಳನ್ನ ಸಂಗ್ರಹ ಮಾಡುತ್ತೀರಿ , ಉನ್ನತವಾದ ವಿದ್ಯೆ ಪ್ರಾಪ್ತಿ ಮಾಡಿಕೊಳ್ಳುತ್ತೀರಾ ಇತರರಿಂದ ನಿಮ್ಮ ಕೆಲಸಗಳಿಗೆ ಹೋಗಳಿಕೆ ಪಡೆಯುತ್ತೀರಾ ಅಲ್ಲದೆ ಅನೇಕ ಅನುಕೂಲಗಳನ್ನು ಈ ರಾಶಿ ಯವರು ಗಳಿಸಲಿದ್ದಾರೆ.

ಮೇಷರಾಶಿಯವರು ಈ ಬಾರಿಯ ಯುಗಾದಿಯ ನಂತರ ಗಜ ಕೇಸರಿ ಯೋಗವಿದೆ. ಇದರಿಂದ ಧನ ಪ್ರಾಪ್ತಿ, ವಿದ್ಯಾ ಪ್ರಾಪ್ತಿ, ವಿವಾಹ, ಮನೆಕೆಲಸ, ಉತ್ತಮ ಜೀವನ ನಿಮ್ಮದಾಗುತ್ತದೆ. ಮೂರು ತಿಂಗಳು ಗುರು ಬಲದೊಂದಿಗೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಸಲಿದೆ.

Leave a Comment

error: Content is protected !!