ಹಸ್ತ ಸಾಮುದ್ರಿಕ ಶಾಸ್ತ್ರ ಪ್ರಕಾರ ನೀವು ಅದೃಷ್ಟವಂತರೇ ತಿಳಿಯುವುದು ಹೇಗೆ ನೋಡಿ

ಹಸ್ತ ಸಾಮುದ್ರಿಕ ಶಾಸ್ತ್ರ ಎಲ್ಲರಿಗೂ ತಿಳಿದಿರುವುದಿಲ್ಲ. ಹಾಗೆಯೇ ಈ ವಿದ್ಯೆ ಎಲ್ಲರಿಗೂ ಲಭಿಸುವುದಿಲ್ಲ. ಇದು ಬಹಳ ವೈಜ್ಞಾನಿಕವಾದ ಶಾಸ್ತ್ರವಾಗಿದೆ. ಹೇಗೆ ಜ್ಯೋತಿಷ್ಯಶಾಸ್ತ್ರ ಇದೆಯೋ ಹಾಗೆಯೇ ಹಸ್ತ ಸಾಮುದ್ರಿಕ ಶಾಸ್ತ್ರವೂ ಒಂದು. ಇದು ಕೈ ಗೆರೆಗಳನ್ನು ನೋಡಿ ಹೇಳುವ ಜ್ಯೋತಿಷ್ಯವಾಗಿದೆ. ನಾವು ಇಲ್ಲಿ ಧನರೇಖೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಜಾತಕ ನೋಡಿ ಭವಿಷ್ಯವನ್ನು ಹೇಳುತ್ತಾರೆ. ಹಾಗೆಯೇ ಹಸ್ತದ ರೇಖೆಗಳನ್ನು ನೋಡಿ ಭವಿಷ್ಯ ಹೇಳಬಹುದು. ಇದರ ಬಗ್ಗೆ ಬೇಕಾದಷ್ಟು ಸಂಶೋಧನೆಗಳು ನಡೆದಿವೆ. ಕೈ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಅದರಿಂದಲೇ ನಾವು ನಮಸ್ಕಾರ ಮಾಡುತ್ತೇವೆ, ಹಸ್ತಲಾಘವ ಮಾಡುತ್ತೇವೆ. ಒಬ್ಬರ ಬೆರಳಿನ ಗೆರೆಗಳ ಹಾಗೆ ಇನ್ನೊಬ್ಬರ ಬೆರಳಿನ ಗೆರೆಗಳು ಇರುವುದಿಲ್ಲ. ಹಸ್ತದಲ್ಲಿ ಧನರೇಖೆ ಎನ್ನುವುದು ರವಿಪರ್ವದಲ್ಲಿ ಇರುತ್ತದೆ. ಹಸ್ತದ ಬುಡದಿಂದ ತುದಿಯವರೆಗೆ ಧನರೇಖೆ ಇರುತ್ತದೆ.

ಈ ಗೆರೆಯಿಂದ ವ್ಯಕ್ತಿಯ ಹಣದ ಏರುಪೇರಿನ ಬಗ್ಗೆ ತಿಳಿಯಬಹುದು. ಕೆಲವರು ಇದು ಉದ್ದ ಇದ್ದಷ್ಟು ಒಳ್ಳೆಯದು ಎಂದು ಹೇಳುತ್ತಾರೆ. ಹೀಗಿದ್ದಾಗ ವ್ಯಕ್ತಿ ತನ್ನ ಸ್ವಂತ ಶಕ್ತಿಯಿಂದ ಹಣವನ್ನು ಗಳಿಸುತ್ತಾನೆ. ಹಾಗೆಯೇ ಅದರ ಜೊತೆ ಅಡ್ಡ ಗೆರೆಗಳು ಇರುತ್ತವೆ. ಆಗ ವ್ಯಕ್ತಿಯು ಏನೇ ಸಮಸ್ಯೆ ಬಂದರೂ ಎದುರಿಸಿ ಹಣವನ್ನು ಸಂಪಾದಿಸುತ್ತಾರೆ. ಹಾಗೆಯೇ ಅದರ ಜೊತೆಗೆ ಬಲಕ್ಕೆ ಒಂದು ಗೆರೆ ಹೋಗಿದ್ದರೆ ಪ್ರಾಮಾಣಿಕವಾಗಿ ದುಡಿಯುತ್ತಾರೆ ಎಂಬ ಅರ್ಥವನ್ನು ನೀಡುತ್ತದೆ. ಇಲ್ಲಿ ಹೆಚ್ಚು ಎಂದರೆ ಮೂರು ಗೆರೆ ಇರಬೇಕು. ಹೆಚ್ಚಿನ ಗೆರೆಗಳು ಇದ್ದರೆ ಒಳ್ಳೆಯದಲ್ಲ.

ಧನರೇಖೆ ಇದ್ದಾಗ ಅಡ್ಡವಾದ ಗೆರೆಗಳು ಹೆಚ್ಚಾಗಿ ಇದ್ದರೆ ಖರ್ಚುಗಳು ಬಹಳ ಇರುತ್ತವೆ. ಈ ರೇಖೆಯ ಮೇಲೆ ಒಂದು ತ್ರಿಭುಜ ನಿರ್ಮಾಣವಾಗಿದೆ ಗೃಹ ನಿರ್ಮಾಣದ ಯೋಗ ಇರುತ್ತದೆ. ಹಾಗೆಯೇ ಒಂದು ಚೌಕ ಇದ್ದರೆ ಅವರು ಬಹಳ ಅದೃಷ್ಟವಂತರು. ಅವರು ಯಾರ ಹತ್ತಿರವೂ ಹಣಕ್ಕಾಗಿ ಕೈ  ಚಾಚುವುದಿಲ್ಲ. ಹಾಗಾಗಿ ಕೊನೆಯದಾಗಿ ಹೇಳುವುದೇನೆಂದರೆ ಎಲ್ಲರೂ ಇದನ್ನು ನಂಬುವುದಿಲ್ಲ. ಆದರೆ ಕೆಲವು ಸತ್ಯಗಳೇ ಆಗಿರುತ್ತವೆ.

Leave a Comment

error: Content is protected !!