ವಾರದಲ್ಲಿ ಈ ದಿನದಂದು ಕೂದಲು ಉಗುರು ಕತ್ತರಿಸಬಾರದು ಯಾಕೆ ಗೊತ್ತೇ? ಶಾಸ್ತ್ರ ಏನ್ ಹೇಳುತ್ತೆ ಓದಿ..

ನಮ್ಮ ಮನೆಯಲ್ಲಿರುವ ಹಿರಿಯರು ವಾರದಲ್ಲಿ ಕೆಲವೊಂದು ದಿನ ಕೂದಲು ಮತ್ತು ಉಗುರು ಕತ್ತರಿಸಲು ಬೇಡ ಎನ್ನುತ್ತಾರೆ. ಇವತ್ತು ಕಟ್ ಮಾಡಬೇಡ ನಾಳೆ ಕಟ್ ಮಾಡಬೇಡ, ಇಂಥಾ ದಿನವೇ ಕಟ್ ಮಾಡಬೇಕು ಅಂತ ಹೇಳ್ತಾರೆ. ಇದರಿಂದಾಗಿ ನಮ್ಮ ಮೇಲೆ ಕೆಲವೊಂದು ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಯಾವ ವಾರ ಉಗುರು ಮತ್ತು ಕೂದಲನ್ನು ಕತ್ತರಿಸಬೇಕು ಮತ್ತು ಯಾವ ವಾರ ಉಗುರು ಮತ್ತು ಕೂದಲನ್ನು ಕತ್ತರಿಸಬಾರದು ಎಂದು ಕೆಲವರಿಗೆ ಗೊಂದಲ ಇರುತ್ತದೆ. ಹಾಗಾಗಿ ಈ ಲೇಖನದಲ್ಲಿ ಅದರ ಬಗ್ಗೆ ಸಮೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೀವಿ.

ಯಾವುದೇ ವಿಶೇಷ ಅಥವಾ ಹಬ್ಬ ಇರುವ ದಿನಗಳಲ್ಲಿ ಉಗುರು ಮತ್ತು ಕೂದಲು ಕಟ್ ಮಾಡಬಾರದು. ಇದಲ್ಲದೆ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಕೂಡಾ ಕತ್ತರಿಸಬಾರದು ಎಂಬುದು ನಮ್ಮ ಹಿರಿಯರು ಹೇಳುತ್ತಾರೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ವಾರವನ್ನು ಕೂಡ ಒಂದೊಂದು ಗುಣದಿಂದ ಗುರುತಿಸುತ್ತಾರೆ. ಅದರಲ್ಲಿ ಗೃಹ, ನೀತಿ ನಿಯಮಗಳನ್ನು ಅನುಸರಿಸುತ್ತಾರೆ. ಸೋಮವಾರ ಶಿವನ ವಾರ ಎಂದೂ, ಮಂಗಳ ವಾರ ಮಂಗಳ ಗ್ರಹದ ಹನುಮಾನ್ ವಾರವೆಂದು ಪರಿಗಣಿಸಲಾಗುತ್ತದೆ. ಬುಧವಾರ ಕೃಷ್ಣ ವಾರ ಬುಧ ಗ್ರಹದ ಪ್ರಭಾವ ಎಂದು ಪರಿಗಣಿಸಲಾಗುತ್ತದೆ. ಗುರುವಾರ ವಿಷ್ಣುವಿನ ವಾರ ಮತ್ತು ಗುರುವಿನ ಅಧಿಪತ್ಯದ ವಾರ ಎಂದೂ ಪರಿಗಣಿಸಲಾಗುತ್ತದೆ. ಶುಕ್ರವಾರವೂ ದುರ್ಗೆಯ ವಾರ ಆಗಿದ್ದು ಶುಕ್ರನ ಅಧಿಪತ್ಯದ ವಾರ ಎಂದೂ ಪರಿಗಣಿಸಲಾಗುತ್ತದೆ. ಶನಿವಾರವನ್ನು ಶನಿವಾರ ಎಂದೂ, ಭಾನುವಾರವನ್ನು ಸೂರ್ಯನ ವಾರ ಎಂದು ಕರೆಯುತ್ತಾರೆ..

ಹಾಗಾದ್ರೆ ಕೂದಲು ಮತ್ತು ಉಗುರನ್ನು ಯಾವಾಗ ಯಾವ ವಾರ ಕತ್ತರಿಸಬೇಕು ಎಂದು ನೋಡುವುದಾದರೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ನಿತ್ಯವೂ ಒಂದೊಂದು ಸಂಪ್ರದಾಯವನ್ನು ಪಾಲನೆ ಮಾಡಲಾಗುತ್ತದೆ. ಕೂದಲು ಮತ್ತು ಉಗುರನ್ನು ಕತ್ತರಿಸಲು ಕೆಲವು ಕಡೆ ನಗಳು ನಿಷೇಧಿಸಲಾಗಿದೆ. ಸೋಮವಾರವೂ ಚಂದ್ರನಿಗೆ ಸಂಬಂಧಿಸಿದ್ದು ಇದು ಮಾನವನ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ವಾರ ಉಗುರು ಕತ್ತರಿಸಿದರೆ ಮಾ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಹಾಗೂ ಮಕ್ಕಳ ಮಾನಸಿಕ ಸ್ಥಿತಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತೆ ಎಂದು ನಮ್ಮ ಹಿರಿಯರು ಹೇಳುತ್ತಾರೆ.

ಮಂಗಳವಾರ ಕೂದಲು ಕತ್ತರಿಸಲು ನಿಷೇಧವಿದೆ ಯಾಕೆ ಅಂದ್ರೆ ಆ ದಿನವೂ ಕೂಡ ಮಾನವನ ಶರೀರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬುಧವಾರ ಸಾಮಾನ್ಯವಾಗಿ ಎಲ್ಲರಿಗೂ ನೆಚ್ಚಿನ ವಾರ. ಈ ವಾರ ಉಗುರು ಮತ್ತು ಕೂದಲು ಕಟ್ ಮಾಡಿದರೆ ಯಾವುದೇ ನಕಾರಾತ್ಮಕ ಪರಿಣಾಮ ಆಗುವುದಿಲ್ಲ. ಹಾಗಾಗಿ ಈ ವಾರ ಅತಿ ಸೂಕ್ತವಾದ ವಾರ. ಗುರುವಾರ ವಿಷ್ಣುವಿನ ವಾರ ಆಗಿರುವುದರಿಂದ ಈ ದಿನ ಉಗುರು ಮತ್ತು ಕೂದಲು ಕಟ್ ಮಾಡಿದರೆ ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತೆ ಎನ್ನುತ್ತವೆ ನಮ್ಮ ಶಾಸ್ತ್ರಗಳು. ಇನ್ನು ಶುಕ್ರವಾರ ಶುಕ್ರನ ವಾರ. ಇದನ್ನ ಶುಕ್ರನಿಗೆ ಸಂಬಂಧಿಸಿದ ವಾರ ಎನ್ನುತ್ತಾರೆ. ಶುಕ್ರ ಸೌಂದರ್ಯದ ಪ್ರತೀಕ ಆಗಿರುವುದರಿಂದ ಈ ದಿನ ಕೂದಲು ಮತ್ತು ಉಗುರು ಕಟ್ ಮಾಡುವುದು ಮಂಗಳಕರ ಎನ್ನುತ್ತಾರೆ. ಶನಿವಾರ, ಶನಿಯವಾರ ಆಗಿದ್ದರಿಂದ ಈ ದಿನ ಉಗುರು ಮತ್ತು ಕೂದಲು ಕಟ್ ಮಾಡಿದರೆ ಅಮಂಗಳ ಎನ್ನುತ್ತಾರೆ. ಇದರಿಂದ ಸಾವಿನ ಸಂಭವ ಹೆಚ್ಚು ಎಂದು ಹೇಳಲಾಗುತ್ತದೆ. ಭಾನುವಾರ ಸೂರ್ಯನ ಅಧಿಪತ್ಯದ ವಾರ ಎನ್ನಲಾಗುತ್ತದೆ. ಈ ದಿನ ಕೂದಲು ಮತ್ತು ಉಗುರು ಕತ್ತರಿಸುವುದು ಅಮಂಗಳಕರ ಎನ್ನುತ್ತಾರೆ. ಈ ದಿನ ಇಂತಹ ಕೆಲಸ ಮಾಡುವುದು ವಿನಾಶಕ್ಕೆ ಕಾರಣ ಎನ್ನುತ್ತವೆ ನಮ್ಮ ಶಾಸ್ತ್ರಗಳು. ಹಾಗಾಗಿ ಬುಧವಾರ ಮತ್ತು ಶುಕ್ರವಾರ ಈ ಎರಡು ದಿನಗಳು ಕೂದಲು ಮತ್ತು ಉಗುರು ಕತ್ತರಿಸಲು ಒಳ್ಳೆಯ ದಿನ ಆದ್ದರಿಂದ ಈ ದಿನಗಳಲ್ಲಿ ಕೂದಲು ಮತ್ತು ಉಗುರು ಕತ್ತರಿಸುವುದು ಸೂಕ್ತ ಎಂದು ನಮ್ಮ ಹಿರಿಯರು ಹೇಳುತ್ತಾರೆ.

Leave a Comment

error: Content is protected !!