ವಾಸ್ತು ಪ್ರಕಾರ ಮನೆಯಲ್ಲಿ ಬಿರು ಯಾವ ಸ್ಥಳದಲ್ಲಿದ್ದರೆ ಶುಭಕರ?

ಮನೆಯಲ್ಲಿನ ಹಣ, ಒಡವೆ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಇಡುವ ಬಿರುವನ್ನು ವಾಸ್ತು ಶಾಸ್ತ್ರದ ಪ್ರಕಾರ ಎಲ್ಲೆದರಲ್ಲಿ ಇಟ್ಟರೆ ನಿಮಗೆ ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ.ಹಾಗಾದರೆ ಬಿರುವನ್ನು ಮನೆಯಲ್ಲಿ ಯಾವ ಭಾಗದಲ್ಲಿ ಇಡಬೇಕು, ಇದರಿಂದ ನಿಮ್ಮ ಸಂಪತ್ತು ಹೇಗೆ ವೃದ್ಧಿಸುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ದಿನಮಾನಗಳಲ್ಲಿ ಮನೆ ಹಾಗೂ ಕಟ್ಟಡಗಳನ್ನ ವಾಸ್ತು ಪ್ರಕಾರವೇ ಕಟ್ಟುತ್ತಾರೆ. ಇದರಲ್ಲಿ ಬಹಳಷ್ಟು ನಂಬಿಕೆಗಳನ್ನು ಹೊಂದಿರುತ್ತಾರೆ.ವಾಸ್ತುಶಾಸ್ತ್ರದ ಪ್ರಕಾರ ಮನೆಯನ್ನ ಕಟ್ಟದಿದ್ದರೆ ಮನೆಗೆ ದರಿದ್ರ ಅನ್ನುವ ಅಪಾರ ನಂಬಿಕೆ ಇದೆ.ಇದಲ್ಲದೆ ಆರೋಗ್ಯ, ಹಣದ ಸಮಸ್ಯೆ ಬಹುವಾಗಿ ಕಾಡುತ್ತದೆ.

ಮನೆಯಲ್ಲಿನ ವಸ್ತುಗಳನ್ನು ವಾಸ್ತು ಪ್ರಕಾರವೇ ಇಡಿ. ಇಲ್ಲದಿದ್ದರೆ ಧನ ಲಕ್ಷ್ಮೀ ನಿಮ್ಮ ಮನೆಯಲ್ಲಿ ನೆಲೆಸೋದಿಲ್ಲ.ಹಾಗಾಗಿ ವಸ್ತುಗಳನ್ನು ಸಂಪ್ರದಾಯ ಬದ್ಧವಾಗಿ ವಾಸ್ತುವಿಗೆ ಹೊಂದುವಂತೆ ಇಡಿ.
ಮನೆಯಲ್ಲಿನ ಬಿರುವನ್ನು ಉತ್ತರ ಭಾಗದಲ್ಲೇ ಇಡಬೇಕು ಇದರಿಂದ ನಿಮ್ಮ ಹಣ ದುಪ್ಪಟ್ಟಾಗುತ್ತದೆ ಅಲ್ಲದೆ ಲಕ್ಷ್ಮೀ ನಿಮ್ಮ ಮನೆಯಲ್ಲಿ ಭದ್ರವಾಗಿ ನೆಲೆಸಿರುತ್ತಾಳೆ.ಮನೆಯಲ್ಲಿ ಬಿರು ದಕ್ಷಿಣ ಭಾಗದಲ್ಲಿ ಇದ್ರೆ ಸುರಕ್ಷಿತವಲ್ಲ. ದಕ್ಷಿಣ ಮುಖವಾಗಿ ಬಿರುವನ್ನು ಎಂದಿಗೂ ಇಡಬೇಡಿ. ಲಕ್ಷ್ಮೀ ಯು ದಕ್ಷಿಣದಿಂದ ಪ್ರಯಾಣ ಬೆಳಸಿ ಉತ್ತರ ದಿಕ್ಕಿಗೆ ಬಂದು ನೆಲೆಸುತ್ತಾಳೆ ಹಾಗಾಗಿ.ಉತ್ತರಕ್ಕೆ ಬಿರುವನ್ನು ಇಡುವುದು ಸೂಕ್ತ.

ಬಿರುವನ್ನು ಉತ್ತರ ಭಾಗದಲ್ಲಿ ಇಡಲಾಗದಿದ್ದರೆ ಪೂರ್ವ ಭಾಗದಲ್ಲೂ ಇಡಬಹುದು.ಇದರಿಂದ ಯಾವುದೇ ಲೋಪವಿರುವುದಿಲ್ಲ. ಈ ರೀತಿ ನೀವು ವಾಸ್ತು ಸೂತ್ರಗಳನ್ನು ಅಳವಡಿಸಿಕೊಂಡು ಬಿರುವನ್ನು ವಾಸ್ತು ಪ್ರಕಾರ ಇಡುವುದರಿಂದ ಅದೃಷ್ಟ ನಿಮ್ಮ ಮನೆಗೆ ಬಂದು ಬೇಗನೆ ಸಿರಿವಂತರಾಗುತ್ತೀರ.

Leave A Reply

Your email address will not be published.

error: Content is protected !!