ವಾಸ್ತು ಪ್ರಕಾರ ದೇವರ ಕೋಣೆ ಮನೆಯ ಯಾವ ದಿಕ್ಕಿನಲ್ಲಿದ್ದರೆ ಶುಭ?

ಮನೆಯನ್ನು ಕಟ್ಟಿ ಸುಂದರ ಬದುಕು ಕಟ್ಟಿಕೊಳ್ಳುವ ಅಸೆ ಎಲ್ಲರಲ್ಲೂ ಇರುತ್ತದೆ, ಆದ್ರೆ ಕೆಲವೊಮ್ಮೆ ಯಲ್ಲಿ ವಾಸ್ತು ದೋಷವಿದ್ದರೆ ಅಥವಾ ಮನೆಯಲ್ಲಿ ದೇವರ ಕೋಣೆ ಯಾವ ದಿಕ್ಕಿನಲ್ಲಿ ಇಅರಬೇಕು ಅನ್ನೋದನ್ನ ತಿಳಿಯದೆ ಹೇಗೆ ಬೇಕೋ ಹಾಗೆ ದೇವರ ಮನೆಯನ್ನು ನಿರ್ಮಿಸಲು ಆಗೋದಿಲ್ಲ, ಅದಕ್ಕೆ ಯಾವ ದಿಕ್ಕು ಸೂಕ್ತ ಅನ್ನೋದನ್ನ ತಿಳಿದು ಮನೆಯಲ್ಲಿ ದೇವರ ಕೋಣೆಯನ್ನು ನಿರ್ಮಿಸಬೇಕು.

ದೇವರ ಕೋಣೆ ಯಾವ ದಿಕ್ಕಿನಲ್ಲಿ ಇದ್ದರೆ ಉತ್ತಮ ಅನ್ನೋದನ್ನ ತಿಳಿಯುವುದಾದರೆ ಮನೆಯಲ್ಲಿ ಯಾವ ಕೋಣೆಗಳು ಯಾವ ದಿಕ್ಕಿನಲ್ಲಿದ್ದರೆ ಸೂಕ್ತ ಅನ್ನೋದು ತಿಳಿದಿರುತ್ತದೆ, ಅದೇ ನಿಟ್ಟಿನಲ್ಲಿ ಮನೆಯಲ್ಲಿ ದೇವರ ಪೂಜಾಮಂದಿರವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸಬೇಕು. ಪೂರ್ವ, ಉತ್ತರ ದಿಕ್ಕುಗಳ ನಡುವೆ ಇರುವ ಪ್ರದೇಶವೇ ಈಶಾನ್ಯ. ಪೂಜಾಕೋಣೆ ನಿರ್ಮಾಣಕ್ಕೆ ಇದೇ ಅತ್ಯತ್ತಮವಾದ ಜಾಗ ಅನ್ನೋದನ್ನ ಪಡಿತರು ಹೇಳುತ್ತಾರೆ.

ಇನ್ನು ಮನೆಯಲ್ಲಿ ದೇವರ ಕೋಣೆ ಹೇಗಿರಬೇಕು ಅನ್ನೋದನ್ನ ನೋಡುವುದಾದರೆ ಈ ಕೋಣೆಯಲ್ಲಿ ಬೆಳಗ್ಗೆ ಸೂರ್ಯಕಿರಣಗಳು ಪಸರಿಸುವ ಕಾರಣ ಅಲ್ಲಿ ಮಾಡುವ ಧ್ಯಾನ, ಪೂಜೆಗಳು ಶಾಂತವಾಗಿ ಸಾಗುತ್ತವೆ. ಈ ಕೋಣೆಯಲ್ಲಿ ಪೂಜೆ ಮಾಡಿಕೊಳ್ಳುವವರು ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆಗೆ ಕುಳಿತುಕೊಳ್ಳುವುದು ಒಳಿತು. ಅಂದರೆ ದೇವರನ್ನು ಪಶ್ಚಿಮದ ಕಡೆ ಆಗಲಿ, ದಕ್ಷಿಣದ ಕಡೆ ಆಗಲಿ ಪ್ರತಿಷ್ಠಾಪಿಸಬೇಕು. ಮನೆಯ ವಿಸ್ತೀರ್ಣಕ್ಕೆ ತಕ್ಕಂತೆ ಅಥವಾ ಅಲ್ಮೆರಾದಂತಹವು ಇಟ್ಟುಕೊಳ್ಳಬಹುದು, ಆದರೆ ಕನಿಷ್ಠ ಒಂದು ಪ್ರತಿಮೆ ಅಥವಾ ಫೋಟೋ ಆದರೂ ಈಶಾನ್ಯ ದಿಕ್ಕಿಗೆ ಕಡೆಗೆ ಇಡಬೇಕು.

ಮನೆಯಲ್ಲಿನ ದೇವರ ಪೂಜಾಕೋಣೆಗೆ ಕಡ್ಡಾಯವಾಗಿ ಹೊಸಿಲು ಇರಬೇಕು ಹಾಗೂ ಪೂಜಾ ಮಂದಿರಕ್ಕೆ ಬಾಗಿಲು ಹೇಗಿರಬೇಕು ಅನ್ನೋದನ್ನ ನೋಡುವುದಾದರೆ, ಗಂಟೆಗಳುಳ್ಳ ಬಾಗಿಲನ್ನು ವ್ಯವಸ್ಥೆ ಮಾಡಿದರೆ ಒಳಿತು. ಅಷ್ಟೇ ಅಲ್ಲದೆ ನೈರುತ್ಯ, ಆಗ್ನೇಯ ಮೂಲೆಗಳಲ್ಲಿ ಪೂಜಾಕೋಣೆಯನ್ನು ಯಾವುದೆ ಕಾರಣಕ್ಕೂ ಇಟ್ಟುಕೊಳ್ಳಬಾರದು ಎಂದು ಶಾಸ್ತ್ರಗಳು ಹೇಳುತ್ತವೆ

Leave a Comment

error: Content is protected !!