ಮನೆಯ ಎಂತಹ ವಾಸ್ತು ದೋಷ ಇದ್ರೂ ನಿವಾರಿಸುತ್ತೆ ಈ ಗಿಡ

ಮನೆಯನ್ನು ಕಟ್ಟುವಾಗ ಬಹಳಷ್ಟು ಜನ ವಾಸ್ತು ಪ್ರಕಾರ ಕಟ್ಟಲು ಮುಂದಾಗುತ್ತಾರೆ, ಇನ್ನು ಕೆಲವರು ಮನೆಯನ್ನು ಅವರ ಇಚ್ಚಿಯಂತೆ ಕಟ್ಟಿಕೊಳ್ಳುತ್ತಾರೆ ಆದ್ರೆ ವಾಸ್ತು ದೋಷ ಇದ್ರೆ ಮನೆ ಏಳಿಗೆ ಆಗೋದಿಲ್ಲ ಹಾಗೂ ಅಂಣೆಯಲ್ಲಿ ನಾನಾ ತರಹದ ತೊಂದರೆಗಳು ಎದುರಾಗುತ್ತವೆ ಅನಾರೋಗ್ಯ ಸಮಸ್ಯೆ ಹಣಕಾಸಿನ ಸಮಸ್ಯೆ ಆರ್ಥಿಕ ನಷ್ಟ ಕಾಡುತ್ತದೆ ಅನ್ನೋದನ್ನ ವಾಸ್ತು ತಜ್ಞರು ಹೇಳುತ್ತಾರೆ ಇನ್ನು ವಾಸ್ತು ಪ್ರಕಾರ ಈ ಗಿಡ ಮನೆಯ ಮುಂದೆ ಇದ್ರೆ ವಾಸ್ತು ದೋಷ ನಿವಾರಣೆಯಾಗುತ್ತದೆ ಅನ್ನೋದನ್ನ ಹೇಳಲಾಗುತ್ತದೆ ಅಷ್ಟಕ್ಕೂ ಈ ಗಿಡ ಯಾವುದು ಇದರ ವಿಶೇಷತೆ ಏನು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಈ ಗಿಡವನ್ನು ಸೀಬೆ ಅಥವಾ ಪೇರಳೆ ಗಿಡ ಎಂಬುದಾಗಿ ಕರೆಯಲಾಗುತ್ತದೆ ಈ ಗಿಡಕ್ಕೂ ವಾಸ್ತುವಿಗೂ ಏನು ನಂಟು ಇದೆ ಅನ್ನೋದನ್ನ ಹೇಳುವುದಾದರೆ ಭಾರತೀಯ ಸಂಸ್ಕೃತಿಯಲ್ಲಿಯೂ ಈ ವೃಕ್ಷಕ್ಕೆ ವಿಶೇಷ ಸ್ಥಾನವಿದೆ, ಯಾವ ಭೂಮಿಯಲ್ಲಿ ಹೆಚ್ಚು ಹೆಚ್ಚು ಸೀಬೆಹಣ್ಣಿನ ವೃಕ್ಷ ಬೆಳೆಯುತ್ತದೋ, ಆ ಭೂಮಿ ವಾಸ್ತುವಿನ ಪ್ರಕಾರ ತುಂಬಾ ಶ್ರೇಷ್ಠ ತಾಣ. ದಪ್ಪ ಮಣ್ಣಿನಿಂದ ಹಿಡಿದು, ಮರಳಿನಂಥ ಮಣ್ಣಿನವರೆಗೂ ಎಲ್ಲ ವಿಭಿನ್ನ ಪ್ರಕಾರದ ಮಣ್ಣಿನಲ್ಲಿಯೂ ಇದು ಬೆಳೆಯುತ್ತದೆ.

ಇನ್ನು ಈ ಗಿಡ ಎಲ್ಲಿ ಸಮೃದ್ಧವಾಗಿ ಬೆಳೆಯುತ್ತದೆಯೋ ಆ ಜಾಗ ಶ್ರೇಷ್ಠ ತಾಣ ಎಣಿಸಿಕೊಳ್ಳುವುದರಲ್ಲಿ ಯಾವುದೇ ಮಾತಿಲ್ಲ. ಇನ್ನು ಈ ಗಿಡವನ್ನು ನಿಮ್ಮ ಮನೆಯ ಯಾವುದೇ ಭಾಗದಲ್ಲಿ ಬೇಕಾದರೂ ಹಾಕಿ ಬೆಳೆಸಬಹದು ಈ ಗಿಡ ನಿಮ್ಮ ಮನೆಯ ಮುಂದಿದ್ದರೆ ಎಂತಹ ವಾಸ್ತು ದೋಷ ಇದ್ರೂ ಕೂಡ ನಿವಾರಣೆಯಾಗುತ್ತದೆ. ವಾಸ್ತು ದೋಷಕ್ಕೆ ಅಷ್ಟೇ ಅಲ್ಲದೆ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳನ್ನು ಈ ಗಿಡದಲ್ಲಿ ಕಾಣಬಹುದಾಗಿದೆ.

ಕೇವಲ ವಾಸ್ತುವಿನ ಪ್ರಕಾರ ಅಷ್ಟೆ ಸೀಬೆಗಿಡ ಅತ್ಯುತ್ತಮ ವಲ್ಲ ಆರೋಗ್ಯದ ದೃಷ್ಟಿಯಿಂದ ಕೂಡ ಸೀಬೆ ತುಂಬ ಉಪಯುಕ್ತಕಾರಿ. ಬಾಯಿಯ ಹುಣ್ಣು, ಗಂಟಲು ನೋವಿಗೆ ಸೀಬೆ ಗಿಡದ ಎಳೆ ಎಲೆಗಳು ಮನೆ ಮದ್ದಾಗಿದೆ. ಹಾಗೇ ಸೀಬೆ ಎಲೆ ಕಷಾಯ ಮಾಡಿ ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಅಂಶಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲದೆ ಹೃದಯ ಸಂಬಂಧಿತ ಕಾಯಿಲೆಗಳು ಕೂಡ ಸೀಬೆ ಗಿಡದ ಎಲೆಯ ಕಷಾಯ ಮನೆ ಮದ್ದು. ಚರ್ಮದ ಆರೈಕೆ ಮತ್ತು ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಂಥ ಶಕ್ತಿ ಕೂಡ ಸೀಬೆ ಎಲೆಗೆ ಇದೆ.

Leave a Comment

error: Content is protected !!