Astrology: ಶನಿ ಮಂಗಳರ ಶಡಷ್ಟಕ ಯೋಗದಲ್ಲಿ ಈ 3 ರಾಶಿಯವರು ಕಷ್ಟ ಪಡಲಿದ್ದಾರೆ. ಹುಷಾರಾಗಿರೋದು ಒಳ್ಳೆಯದು.

Horoscope ಜೂನ್ ಮೂವತ್ತರಂದು ಕರ್ಕ ರಾಶಿಯಲ್ಲಿ ಮಂಗಳನ ಪ್ರವೇಶ ಆಗುತ್ತಿರುವ ಬೆನ್ನಲ್ಲೇ ಮಂಗಳ ಹಾಗೂ ಶನಿಯ ಷಡಷ್ಟಕ ಯೋಗ ಪ್ರಾರಂಭವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕಾರಣದಿಂದಾಗಿಯೇ ನಾಲ್ಕು ರಾಶಿಯವರ ಜೀವನದಲ್ಲಿ ಕಷ್ಟಗಳು ಪ್ರಾರಂಭವಾಗಲಿವೆ ಎಂಬುದಾಗಿ ಹೇಳಲಾಗುತ್ತಿದ್ದು ಆ 3 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ಕರ್ಕ ರಾಶಿ: ಈ ಸಂದರ್ಭದಲ್ಲಿ ಶನಿಯ ಪ್ರಭಾವದಿಂದಾಗಿ ಕರ್ಕ ರಾಶಿಯವರಿಗೆ ಮಾನಸಿಕ ಹಾಗೂ ಆರೋಗ್ಯ ಸಮಸ್ಯೆಗಳು ಸಾಕಷ್ಟು ಕಂಡುಬರುತ್ತವೆ ಮತ್ತು ಆರ್ಥಿಕವಾಗಿ ಕೂಡ ನೀವು ಕುಗ್ಗುತ್ತೀರಿ. ಅನಗತ್ಯ ಪ್ರಯಾಣವನ್ನು ತಪ್ಪಿಸಿ ಯಾಕೆಂದರೆ ಅಪ’ ಘಾತದ ಮುನ್ಸೂಚನೆಗಳು ಕೂಡ ಕಂಡುಬರುತ್ತಿವೆ. ಹೀಗಾಗಿ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ನಿಗಾ ವಹಿಸಿ ಕೆಲಸ ಮಾಡಿ. ಆದಷ್ಟು ಒಳ್ಳೆಯ ಕೆಲಸವನ್ನು ಮಾಡುವ ಮೂಲಕ ಪುಣ್ಯ ಸಂಪಾದನೆಯನ್ನು ಮಾಡಿ.

ಸಿಂಹ ರಾಶಿ: ಸೂರ್ಯನ ಪ್ರಭಾವದಿಂದಾಗಿ ಸಿಂಹ ರಾಶಿಯವರು ಆರ್ಥಿಕವಾಗಿ ಲಾಭವನ್ನು ಪಡೆಯುತ್ತಾರೆ ಆದರೆ ಅವರ ಆದಾಯದ ಗಳಿಕೆಯನ್ನು ಮಂಗಳ ಹಾಗೂ ಶನಿ ಇಬ್ಬರು ಸೇರಿಕೊಂಡು ನುಂಗಿ ಬಿಡುತ್ತಾರೆ. ನಿಮ್ಮ ಹಾಗೂ ಕುಟುಂಬಸ್ಥರ ನಡುವೆ ಆಸ್ತಿಯ ಪಾಲಿನ ವಿಚಾರಕ್ಕಾಗಿ ಉದ್ವಿಗ್ನ ವಾತಾವರಣ ಉಂಟಾಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಹೀಗಾಗಿ ಪ್ರತಿಯೊಂದು ಪರಿಸ್ಥಿತಿಯನ್ನು ಕೂಡ ತಾಳ್ಮೆಯಿಂದ ಯೋಚಿಸಿ ನಿರ್ಧಾರವನ್ನು ತೆಗೆದು ಕೊಂಡು ಮುನ್ನುಗ್ಗುವುದು ಉತ್ತಮ.

ಧನು ರಾಶಿ: ಹಣಕಾಸಿನ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಕಷ್ಟವನ್ನು ತಡೆದುಕೊಳ್ಳಬೇಕಾದಂತಹ ಪರಿಸ್ಥಿತಿಯನ್ನು ನೀವು ಎದುರಿಸಬಹುದು. ಕೆಲಸದಲ್ಲಿ ಕೂಡ ಬೇರೆಯವರಿಂದ ಅಡೆತಡೆ ಉಂಟಾಗುವ ಸಾಧ್ಯತೆಯಿದ್ದು ಪ್ರತಿಯೊಂದು ಕೆಲಸವನ್ನು ಮಾಡುವ ಮುನ್ನ ಹಾಗೂ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅದರ ಸಾಧಕ ಹಾಗೂ ಭಾದಕಗಳನ್ನು ಲೆಕ್ಕಾಚಾರ ಹಾಕಿ ನಂತರವೇ ನಿರ್ಧಾರವನ್ನು ತೆಗೆದುಕೊಳ್ಳಿ.

Leave A Reply

Your email address will not be published.

error: Content is protected !!