ಆಷಾಢ ಮಾಸದಲ್ಲಿ ಗಂಡ ಹೆಂಡತಿ ಮಿಲನ ಮಾಡಬಾರದು. ಜ್ಯೋತಿಷ್ಯಾಸ್ತ್ರ ಏನನ್ನುತ್ತೆ ಗೊತ್ತೆ

ಜೂನ್ 28. ಅಮಾವಾಸ್ಯೆ ಇನ್ನು ಮುಂದಿನ ಅಮಾವಾಸ್ಯೆಯವರೆಗೆ ಒಂದು ತಿಂಗಳ ಕಾಲ ಆಶಾಡ ಮಾಸ ಆರಂಭವಾಗುತ್ತದೆ. ಆಶಾಡ ಮಾಸ ಆರಂಭವಾಯಿತು ಅಂದರೆ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನೆರವೇರಿಸುವುದಿಲ್ಲ. ಮದುವೆಗಳಾಗಲಿ, ಹೋಮ ಹವನಗಳಾಗಲಿ, ಮನೆ ಪ್ರವೇಶವಾಗಲಿ, ಉತ್ತಮ ಕೆಲಸಕ್ಕೆ ಮುಹೂರ್ತ ಇಡುವುದಾಗಲಿ ಇಂತಹ ಯಾವುದೇ ಕೆಲಸವನ್ನು ಆಷಾಢಮಾಸದಲ್ಲಿ ಮಾಡುವುದಿಲ್ಲ. ಆಶಾಡ ಮಾಸದಲ್ಲಿ ಗ್ರಹಗತಿಗಳು ದುರ್ಬಲವಾಗಿರುತ್ತವೆ ಎಂಬ ನಂಬಿಕೆಯಿದೆ.

ಇನ್ನು ಆಶಾಡ ಮಾಸ ಆರಂಭವಾಯಿತೆಂದರೆ ಹೆಣ್ಣುಮಕ್ಕಳಿಗೆ ತುಸು ಸಂಭ್ರಮ. ಯಾಕೆ ಅಂತೀರಾ? ಶಾಸ್ತ್ರಗಳ ಪ್ರಕಾರ ಹಿಂದೂ ಪುರಾಣಗಳ ಪ್ರಕಾರ ಆಶಾಡ ಮಾಸದಲ್ಲಿ ಗಂಡ ಹೆಂಡತಿ ಸೇರುವ ಹಾಗಿಲ್ಲ. ಇನ್ನು ಕೆಲವು ಕಡೆ ಆಶಾಡ ಮಾಸದಲ್ಲಿ ಅತ್ತೆ-ಸೊಸೆ ಒಟ್ಟಿಗೆ ಇರುವ ಹಾಗಿಲ್ಲ ಎಂದು ಹೇಳುತ್ತಾರೆ. ಇದೇ ಎರಡರ ಅರ್ಥವೂ ಒಂದೇ ಒಟ್ಟಿನಲ್ಲಿ ಗಂಡ ಹಾಗೂ ಹೆಂಡತಿ ಆಶಾಡ ಮಾಸದಲ್ಲಿ ಜೊತೆಗಿರುವುದು ನಿಷಿದ್ಧ. ಹಾಗಾಗಿ ಸಹಜವಾಗಿ ಹೆಣ್ಣುಮಕ್ಕಳು ಈ ಸಮಯದಲ್ಲಿ ತವರು ಮನೆಯನ್ನು ಸೇರುತ್ತಾರೆ. ಗಂಡನನ್ನ ಬಿಟ್ಟಿರುವುದು ತುಸು ಬೇಸರವೆನಿಸಿದರೂ ತಂದೆ ತಾಯಿಯ ಜೊತೆ ಕಾಲ ಕಳೆಯುತ್ತೇವೆ ಎನ್ನುವ ಸಂತೋಷ ಹೆಣ್ಣುಮಕ್ಕಳಲ್ಲಿ ಮನೆಮಾಡುತ್ತದೆ.

ಹಾಗಾದರೆ ಆಶಾಡ ಮಾಸದಲ್ಲಿ ಗಂಡ ಹೆಂಡತಿ ಹುಟ್ಟು ಇರಬಾರದು ಅಂತ ಯಾಕೆ ಹೇಳುತ್ತಾರೆ ಎನ್ನುವುದು ಹಲವರ ಪ್ರಶ್ನೆ. ಇದಕ್ಕೂ ಜ್ಯೋತಿಷ್ಯಾಸ್ತ್ರದ ಪ್ರಕಾರ ಸೂಕ್ತವಾದ ಕಾರಣವಿದೆ. ಮದುವೆಯಾದ ಹೊಸತರಲ್ಲಿ ಮಗುವನ್ನು ಪಡೆಯುವ ನಿರೀಕ್ಷೆ ನವವಧು ವಧುವಿನಲ್ಲಿ ಇರುತ್ತದೆ. ಹಾಗಾಗಿ ಮೊದಲ ಮಗುವಿನ ಬಗ್ಗೆ ಅಪಾರವಾದ ಪ್ರೀತಿಯನ್ನು ಎರಡು ಮನೆಯವರು ಬೆಳೆಸಿಕೊಂಡಿರುತ್ತಾರೆ. ಚೊಚ್ಚಲ ಹೆರಿಕೆ ಎಂದರೆ ಹೆಣ್ಣಿಗೆ ಮರುಜನ್ಮವಿದ್ದಂತೆ. ಹಾಗಾಗಿ ಗಂಡ-ಹೆಂಡತಿ ಆಷಾಢ ಮಾಸದಲ್ಲಿ ಸೇರಿದರೆ ಆ ಸಮಯದಲ್ಲಿ ಹುಟ್ಟುವ ಮಗುವಿನ ಜಾತಕದಲ್ಲಿ ಬುಧ ದುರ್ಬಲನಾಗಿರುತ್ತಾನೆ.

ಹುಟ್ಟುವ ಮಗುವಿನ ಜಾತಕದಲ್ಲಿ ಸೂರ್ಯ ಮತ್ತು ಶುಕ್ರದೆಸೆ ಇದ್ದರೆ ಒಳ್ಳೆಯದು ಎಂಬ ನಂಬಿಕೆ ಇದೆ. ಹಾಗಾಗಿ ಹಿಂದೂ ಸಂಪ್ರದಾಯದ ಪ್ರಕಾರ ಮಕ್ಕಳ ಜಾತಕದಲ್ಲಿ ದೋಷ ಇರುವುದನ್ನ ಯಾರೂ ಬಯಸುವುದಿಲ್ಲ. ಆಷಾಢದಲ್ಲಿ ಗರ್ಭಧಾರಣೆಯಾದ ಹುಟ್ಟುವ ಮಗುವಿನ ಜಾತಕದಲ್ಲಿ ದುರ್ಬಲ ಬುಧನ ಆಗಮನವಾಗುತ್ತದೆ. ಹಾಗಾಗಿ ಯೋಗ್ಯ ಸಂತಾನಕ್ಕೆ ಆಷಾಢ ಮಾಸ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಆಷಾಢ ಮಾಸ ಕಳೆದರೆ ಮುಂದಿನ ತಿಂಗಳು ಶ್ರಾವಣ ಮಾಸ. ಶ್ರಾವಣ ಮಾಸ ಗರ್ಭಧಾರಣೆಗೆ ಮಾತ್ರವಲ್ಲದೇ ಬೇರೆ ಎಲ್ಲಾ ಶುಭ ಕಾರ್ಯಗಳಿಗೆ ಪ್ರಶಸ್ತವಾದ ಕಾಲ ಎಂಬುದು ಜ್ಯೋತಿಶಾಸ್ತ್ರದ ನಂಬಿಕೆ.

ಅಷ್ಟೇ ಅಲ್ಲ, ಹಳೆಯ ಸಂಪ್ರದಾಯದ ಪ್ರಕಾರ ಆರ್ಥಿಕವಾಗಿಯೂ ಆಷಾಢದಲ್ಲಿ ಗಂಡ ಹೆಂಡತಿ ಸೇರುವುದು ಸರಿಯಲ್ಲ. ಇದಕ್ಕೂ ಬಲವದ ಕಾರಣವಿದೆ. ಸಾಮಾನ್ಯವಾಗಿ ಬ್ರಾಹ್ಮಣ ಸಮುದಾಯದಲ್ಲಿ ಪೌರೋಹಿತ್ಯ ಮಾಡಿ ಜೀವನ ಸಾಗಿಸುವವರೇ ಹೆಚ್ಚಾಗಿದ್ದರು. ಆಷಾಢದಲ್ಲಿ ಯಾವುದೇ ಶುಭ ಕಾರ್ಯವೂ ನಡೆಯದೇ ಇರುವುದರಿಂದ ಆರ್ಚಾರ್ಯರುಗಳಿಗೆ ಸಂಭಾವನೆ ಹೆಚ್ಚಾಗಿ ಇರುತ್ತಿರಲಿಲ್ಲ. ಆಗ ಜೀವನ ಸಾಗಿಸುವುದಕ್ಕೂ ಕಷ್ಟವಾಗುತ್ತಿತ್ತು. ಹಾಗಾಗಿ ಈ ಸಮಯದಲ್ಲಿ ಮನೆಗೆ ಮಗು ಬಂದರೆ ಅದನ್ನು, ಗರ್ಭಿಣಿಯನ್ನು ನೋಡಿಕೊಳ್ಳುವುದೂ ಕೂಡ ಕಷ್ಟವಾಗುತ್ತಿತ್ತು. ಈ ಕಾರಣಕ್ಕೆ ಆಷಾಢದಲ್ಲಿ ದಂಪತಿಗಳು ಬೇರೆ ಬೇರೆ ಇರುವ ರೂಢಿ ಬಂದಿದೆ ಎಂದು ಹೇಳಲಾಗುತ್ತದೆ.

Leave A Reply

Your email address will not be published.

error: Content is protected !!