ಶಾಸ್ತ್ರದ ಪ್ರಕಾರ ಕೈಗೆ ಕೆಂಪು ದಾರ ಕಟ್ಟಿಕೊಳ್ಳೋದ್ರಿಂದ ಏನ್ ಲಾಭವಿದೆ ಗೊತ್ತೇ?

ಹಿಂದೂ ಧರ್ಮದಲ್ಲಿ ಕೈಗೆ ಕಟ್ಟಿಕೊಳ್ಳುವ ಕೆಂಪು ದಾರವನ್ನ ಕಲಾವ ದಾರ ಅಥವಾ ಮೌಳಿ ದಾರ ಎಂದು ಕರೆಯುತ್ತಾರೆ. ಪ್ರತಿ ಪೂಜೆ ಮತ್ತು ವಿಶೇಷ ಸಂದರ್ಭಗಳಲ್ಲಿ ಈ ದಾರಗಳನ್ನು ಕಟ್ಟಿಕೊಳ್ಳುವದನ್ನ ನಾವು ನೋಡಿರುತ್ತೇವೆ. ಇದನ್ನ ಶುಭ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ ಈ ದಾರವನ್ನು ಕಟ್ಟಿಕೊಳ್ಳುವ ಮೂಲಕ ನಾವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನ ಪಡೆಯಲು ಸಹಾಯ ಮಾಡುತ್ತದೆ ಎನ್ನುವುದು ತುಂಬಾ ಜನರಿಗೆ ತಿಳಿಯದ ವಿಷಯ. ನಮ್ಮ ಭಾರತೀಯ ಸಂಸ್ಕೃತಿ ಸಂಪ್ರದಾಯಗಳು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಒಳ್ಳೆಯದನ್ನು ಮಾಡುತ್ತಾ ಬಂದಿದೆ ಹಾಗೂ ಅವುಗಳ ಕ್ರಮವನ್ನು ನಮಗೆ ತಿಳಿಸಿಕೊಡುತ್ತದೆ . ಆದರೆ ನಾವು ಇದನ್ನ ಮೂಢ ನಂಬಿಕೆ ಎಂದು ತಿಳಿದು ಸಂಸ್ಕೃತಿ ಸಂಪ್ರದಾಯಗಳನ್ನು ಬಿಟ್ಟಿದ್ದಿವಿ. ಈ ಕೆಂಪು ದಾರ ಕಟ್ಟುವುದು ನೂರಾರು ವರ್ಷಗಳಿಂದ ನಡೆದು ಬಂದ ಭಾರತೀಯ ಸಂಸ್ಕೃತಿ ಆಗಿದೆ. ಇದರ ಹಿಂದೆ ಕೆಲವು ಪ್ರಯೋಜನಗಳು ಇವೆ. ಹಾಗಿದ್ರೆ ಈ ಕೆಂಪು ದಾರ ಕಟ್ಟುವುದರ ಹಿಂದಿನ ರಹಸ್ಯ ಏನು ಇದರಿಂದ ನಮ್ಮ ಆರೋಗ್ಯಕ್ಕೆ ಏನು ಲಾಭ ಯಾವ ರೀತಿಯ ಅನುಕೂಲ ಆಗುತ್ತೆ ಅನ್ನೋದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಹಿಂದೂ ಧರ್ಮದಲ್ಲಿ ಪ್ರತಿ ಸಂಸ್ಕೃತಿಯ ಉತ್ಸವವನ್ನು ಕೆಂಪು ದಾರ ಕಟ್ಟುವುದರಿಂದ ಆರಂಭ ಮಾಡುತ್ತಾರೆ. ಗ್ರಂಥದಲ್ಲಿ ಹೇಳಿದ ಪ್ರಕಾರ ಮಣಿಕಟ್ಟಿನ ಹಿಂದಿನ ಭಾಗದಲ್ಲಿ ಅಂದರೆ, ನಾವು ವಾಚ್ ಕಟ್ಟುವ ಭಾಗದಲ್ಲಿ ಈ ದಾರವನ್ನು ಕಟ್ಟುವುದರಿಂದ ಬ್ರಹ್ಮ ವಿಷ್ಣು ಮಹೇಶ್ವರ ಮತ್ತು ಲಕ್ಷ್ಮೀ ಪಾರ್ವತಿ ಸರಸ್ವತಿ ಎಂಬ ತ್ರಿ ದೇವತೆಯರ ಆಶೀರ್ವಾದ ಪಡೆಯಲು ನೆರವಾಗುತ್ತದೆ ಎಂದು ಹೇಳುತ್ತಾರೆ. ಈ ಆಶೀರ್ವಾದದ ಮೂಲಕ ನಾವು ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ನಮ್ಮ ಪುರಾಣಗಳು ಹೇಳುತ್ತವೆ. ಪುರಾಣಗಳ ಪ್ರಕಾರ ಈ ಕೆಂಪು ದಾರ ಕಟ್ಟುವ ಪದ್ಧತಿಯು ಹಿಂದೆ ಲಕ್ಷ್ಮೀ ದೇವಿಯು ಬಲಿರಾಜನಿಗೆ ಕಟ್ಟುವ ಮೂಲಕ ಆರಂಭ ಆಯಿತು. ಕೆಂಪು ದಾರ ಸರಳವಾದ ದಾರ ಆದರೂ ಪ್ರಭುವಿನ ಆಶೀರ್ವಾದ ಪಡೆಯಲು ಅರ್ಹವಾಗಿದೆ. ಈ ದಾರವನ್ನು ಕಟ್ಟುವುದರಿಂದ ಪಡೆಯುವ ಲಾಭವನ್ನು ವಿಜ್ಞಾನವು ಸಹ ಒಪ್ಪಿಕೊಂಡಿದೆ.

ಮಾನವ ಶಾಸ್ತ್ರ ಪ್ರಕಾರ ನಮ್ಮ ಮಣಿಕಟ್ಟಿನಲ್ಲಿ ಸೂಕ್ಷ್ಮ ನರಗಳ ಜಾಲವೇ ಅಡಗಿದೆ. ದೇಹದ ಎಲ್ಲಾ ಪ್ರಮುಖ ರಕ್ತ ನಾಳಗಳು ಈ ಭಾಗದ ಮೂಲಕ ಹಾದು ಹೋಗುತ್ತವೆ. ಮಣಿಕಟ್ಟಿಗೆ ದಾರ ಕಟ್ಟಿಕೊಳ್ಳುವದರಿಂದ ರಕ್ತ ಸಂಚಾರ ಸರಿ ಆಗುತ್ತದೆ. ಹೇಗೆ ಅಂದರೆ, ಈ ಮೂಲಕ ತ್ರಿ ದೋಷಗಳಾದ ವಾತ, ಪಿತ್ತ, ಕಫ ಇವು ಸಮತೋಲನದಲ್ಲಿ ಇರುತ್ತವೆ. ಇದರ ಪರಿಣಾಮವಾಗಿ ದೇಹದ ವ್ಯವಸ್ಥೆ ಸಮತೋಲನ ಕಾಯ್ದುಕೊಂಡು ಆರೋಗ್ಯಕರವಾಗಿ ಇರುತ್ತದೆ.

ಅಲ್ಲದೇ ಈ ದಾರಕ್ಕೆ ಋಣಾತ್ಮಕ ಶಕ್ತಿಯನ್ನು ನಾಶ ಮಾಡುವ ಗುಣವೂ ಇದೆ. ಈ ದಾರವನ್ನು ಯಾರು ಮಣಿಕಟ್ಟಿನ ಭಾಗದಲ್ಲಿ ಕಟ್ಟಿಕೊಂಡು ಇರುತ್ತಾರೋ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಮಧುಮೇಹ ಕಾಯಿಲೆಗಳು ಬರುವುದಿಲ್ಲ. ಅಲ್ಲದೆ ಮಣಿಕಟ್ಟಿನ ಮೇಲೆ ಕಟ್ಟುವ ಈ ದಾರದಿಂದ ನರಗಳ ಮೂಲಕ ಬೀಳುವ ಒತ್ತಡ ಕಡಿಮೆ ಆಗಿ ರಕ್ತ ಅತಿಯಾಗಿ ಹರಿಯದೇ ಅಗತ್ಯ ಇದ್ದಷ್ಟು ಮಾತ್ರ ಹರಿಯುತ್ತದೆ. ಈ ಮೂಲಕ ನಮ್ಮ ದೇಹದ a
ಶಕ್ತಿ ಅತ್ಯುತ್ತಮ ಆಗಿರುವಂತೆ ನೋಡಿಕೊಳ್ಳುತ್ತದೆ.

ಪುರಾತನ ಕಾಲದಿಂದಲೂ ಮಂಗಳಕರ ಎಂದು ಹಳದಿ ದಾರವನ್ನು ಕಟ್ಟಿಕೊಳ್ಳುವ ಸಂಪ್ರದಾಯ ಅಸ್ತಿತ್ವದಲ್ಲಿ ಇತ್ತು ಎನ್ನಲಾಗುತ್ತದೆ. ಇದಲ್ಲದೆ, ಕಿತ್ತಳೆ ಹಳದಿ ಕೆಂಪು ಬಣ್ಣದ ದಾರವನ್ನು ನಮ್ಮ ಹಿಂದೂ ಧರ್ಮದಲ್ಲಿ ಮಂಗಳಕರ ಎಂದು ಭಾವಿಸಲಾಗುತ್ತದೆ. ಇವು ಗುರು, ಮಂಗಳ ಹಾಗೂ ಸೂರ್ಯನಿಗೆ ತುಂಬಾ ಇಷ್ಟವಾದ ಬಣ್ಣಗಳು ಎನ್ನಲಾಗುತ್ತದೆ. ಗ್ರಂಥಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಪುರುಷರು ಬಲಗೈ ಗೆ ಮತ್ತು ಅವಿವಾಹತ ಯುವತಿಯರು ಎಡಗೈ ಗೆ ದಾರವನ್ನು ಕಟ್ಟಿಕೊಳ್ಳಬೇಕು. ಈ ದಾರವನ್ನು ಕಟ್ಟುವ ಸಮಯದಲ್ಲಿ ಮುಷ್ಟಿಯನ್ನು ಬಿಗಿಯಾಗಿ ಕಟ್ಟಿರಬೇಕು ಮತ್ತು ಇನ್ನೊಂದು ಕೈ ಅನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕು. ಹಬ್ಬದ ದಿನವನ್ನು ಹೊರತು ಪಡಿಸಿ, ಶನಿವಾರ ಮತ್ತು ಮಂಗಳವಾರ ಈ ಕಾರ್ಯಕ್ಕೆ ಸೂಕ್ತವಾದ ದಿನವಾಗಿದೆ. ಇವು ಕೆಂಪು ದಾರವನ್ನು ನಮ್ಮ ಕೈ ಹೆ ಕಟ್ಟಿಕೊಳ್ಳುವದರಿಂದ ನಮ್ಮ ದೇಹಕ್ಕೆ ಆಗುವ ಆರೋಗ್ಯಕರ ಅಂಶಗಳು.

Leave a Comment

error: Content is protected !!