ಶಿವ ದೈವ ಕನಸಿನಲ್ಲಿ ಕಾಣಿಸಿಕೊಂಡರೆ ಇದರ ಫಲವೇನು ಗೊತ್ತೇ?

ನಮಗೆ ಹಲವಾರು ರೀತಿಯಲ್ಲಿ ಕನಸುಗಳು ಬೀಳುತ್ತದೆ. ಕೆಲವೊಮ್ಮೆ ಇಷ್ಟವಾಗುವಂತಹ ಕನಸುಗಳು ಬೀಳುತ್ತದೆ. ಹಾಗೆಯೇ ಕೆಲವೊಮ್ಮೆ ಇಷ್ಟವಾಗದಂತಹ ಕನಸುಗಳು ಬೀಳುತ್ತದೆ. ಮತ್ತೆ ಹಲವಾರು ಕನಸುಗಳು ನಮ್ಮ ನೆನಪಿನಲ್ಲಿ ಉಳಿಯುವುದಿಲ್ಲ. ಹಲವಾರು ಕನಸುಗಳು ನೆನಪಿನಲ್ಲಿ ಉಳಿಯುತ್ತದೆ. ಉಳಿದರೂ ಸಹ ಅಸ್ಪಷ್ಟವಾಗಿ ನೆನಪಿನಲ್ಲಿ ಇರುತ್ತದೆ.

ಹಾಗೆಯೇ ನಿಮ್ಮ ಕನಸಿನಲ್ಲಿ ದೈವ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಕನಸಿನಲ್ಲಿ ಶಿವಲಿಂಗ ಬಂದ್ರೆ ಏನಾಗುತ್ತದೆ ಎಂದು ತಿಳಿದುಕೊಳ್ಳಬೇಕಿದೆ. ಸಹಸ್ರಾರು ಜನರ ಆರಾಧ್ಯ ದೈವ ಶಿವನಾಗಿದ್ದಾನೆ. ಇವನು ಎಲ್ಲರ ಭಕ್ತಿಗೆ ಆದಷ್ಟು ಬೇಗ ಒಲಿಯುತ್ತಾನೆ. ಹಾಗೆಯೇ ಶಿವನನ್ನು ಒಲಿಸಲು ನಾವು ಕಷ್ಟ ಪಡಬೇಕಾಗಿಲ್ಲ. ಕೇವಲ ಬಿಲ್ವಪತ್ರೆಯ ದಳದಿಂದ ಶಿವನನ್ನು ಆರಾಧಿಸಿದರೆ ಸಾಕು. ನಾವು ಆತನನ್ನು ಒಲಿಸಬಹುದು.

ಕನಸುಗಳಲ್ಲಿ ಸಾತ್ವಿಕತೆ ಬಂದರೆ ಅಥವಾ ಧಾರ್ಮಿಕವಾಗಿ ಸಂಬಂಧಿಸಿದ ವಿಚಾರಗಳು ಕಂಡುಬಂದರೆ ನಿಮ್ಮ ಸುತ್ತಮುತ್ತಲ ಚಿರರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿರುತ್ತೀರಿ. ಉತ್ತಮವಾದ ಬಾಂಧವ್ಯ ಹಾಗೂ ಸೌಹಾರ್ದತೆ ಯನ್ನು ಹೊಂದಿರುತ್ತೀರಿ.

ಸಾಮಾನ್ಯವಾಗಿ ದೇವರ ಆರಾಧ್ಯದೈವದ ವಾಹನಗಳು, ಅವರ ಅಸ್ತ್ರಗಳು ಕನಸಿನಲ್ಲಿ ಕಾಣುತ್ತವೆ. ಹಾಗೆಯೇ ಕನಸಿನಲ್ಲಿ ಶಿವಲಿಂಗ ಕಂಡರೆ ನಿಮ್ಮ ಜೀವನದಲ್ಲಿ ನಿಮಗೆ ನಿತ್ಯವೂ ಧ್ಯಾನದ ಅಥವಾ ತಪಸ್ಸಿನ ಅವಶ್ಯಕತೆ ಇದೆ ಎಂದು ತಿಳ್ಕೊಳ್ಳಬಹುದು. ಶಿವನನ್ನು ಧ್ಯಾನಿಸಿದರೆ ಖಂಡಿತ ಮನದಲ್ಲಿ ಪ್ರಕಟಗೊಳ್ಳುತ್ತಾನೆ.

ಶಿವನನ್ನು ಕನಸಿನಲ್ಲಿ ಕಾಣುವುದೆಂದರೆ ದೇವರ ಅತೀವ ಹಂಬಲದ ಸಂಕೇತವಾಗಿದೆ. ಶಿವನು ಕನಸಿನಲ್ಲಿ ಕಂಡು ಬಂದರೆ ಇದು ವಿಜಯದ ಸಂಕೇತವಾಗದೆ. ನಿಮ್ಮ ತೊಂದರೆಗಳಿಗೆ ಕೊನೆ ಅಥವಾ ಪ್ರಯತ್ನಕ್ಕೆ ಸಾರ್ಧಕವಾದ ಭಾವವನ್ನು ಅದು ಸೂಚಿಸುತ್ತದೆ.

ಹಾಗೆ ಶಿವ ಮತ್ತು ಪಾರ್ವತಿಯು ಒಟ್ಟಿಗೆ ಕನಸಿನಲ್ಲಿ ಕಾಣಬಹುದು. ಇದು ನಿಮ್ಮ ಮನೆ ಬಾಗಿಲಿಗೆ ಆಗಮಿಸುವ ಅವಕಾಶದ ಸೂಚನೆ ನೀಡುತ್ತದೆ. ಶೀಘ್ರದಲ್ಲೇ ಶುಭ ಸುದ್ದಿ ಬರುತ್ತದೆ. ಆಹಾರ ಪದಾರ್ಥ, ಧಾನ್ಯ ಹಾಗೂ ಸಮೃದ್ಧಿ ಉಂಟಾಗುತ್ತದೆ. ಶಿವನ ತಾಂಡವನ್ರತ್ಯ ಕನಸಿನಲ್ಲಿ ಬಂದರೆ ಅದು ಭಾವೋದ್ವೇಕದ ಪ್ರತೀತಿಯಾಗಿದೆ. ಇನ್ನು ಶ್ರಮ ಮತ್ತು ಪರಿಶ್ರಮದ ಅಗತ್ಯವಿದೆ ಎಂದು ಶಿವ ತಿಳಿಸುತ್ತಾನೆ.

ಶಿವನ ಮಂದಿರ ಕನಸಿನಲ್ಲಿ ಕಂಡರೆ. ಸಾಮಾನ್ಯವಾಗಿ ಎತ್ತರದ ಗೋಪುರಗಳು ಬಹಳ ದೂರದಿಂದ ಜನರು ದೇವರೆಡೆಗೆ ಬರಲು ದಾರಿ ಕಾಣುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಈ ಕನಸು ಕಂಡರೆ ಆರೋಗ್ಯ ಕಾಣುವ ಸೂಚನೆ ತೋರುತ್ತದೆ.

ಕನಸಿನಲ್ಲಿ ಶಿವನ ತ್ರಿಶೂಲ ಕಂಡರೆ ಜೀವನದಲ್ಲಿ ಎದುರಾದ ಅಥವಾ ಎದುರಾಗುವ ಪ್ರಕರಣದ ಬಗ್ಗೆ ತಿಳಿಸುತ್ತದೆ. ಹಾಗೂ ಅದರ ಬಗ್ಗೆ ಎಚ್ಚರದಿಂದಿರಲು ತಿಳಿಸುತ್ತದೆ.ಇವೆಲ್ಲವೂ ಶಿವನ ಕನಸಿನ ಮಾಹಿತಿಗಳಾಗಿವೆ.

Leave a Comment

error: Content is protected !!