ವೃಷಭ ರಾಶಿಯವರ ಅಧಿಪತಿ ಶುಕ್ರ ಆಗಿರುವುದರಿಂದ ಏನೆಲ್ಲಾ ಆಗುತ್ತೆ ಗೊತ್ತೇ

ಹುಟ್ಟಿದ ಮೇಲೆ ಪ್ರತಿಯೊಬ್ಬ ಮನುಷ್ಯನೂ ಅವನದೇ ಆದ ರಾಶಿ, ನಕ್ಷತ್ರಗಳನ್ನು ಹೊಂದಿರುತ್ತಾನೆ. ಪ್ರತಿಯೊಂದು ರಾಶಿ ಹಾಗೂ ಆ ರಾಶಿಯಲ್ಲಿ ಜನಿಸಿದ ಜನರು ಕೂಡ ತನ್ನದೇ ಆದ ಮಹತ್ವ ಹೊಂದಿರುತ್ತಾರೆ. ಹಾಗೆಯೇ ವೃಷಭ ರಾಶಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ವೃಷಭ ರಾಶಿಯವರು ಮೊದಲು ಗಂಡು ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳಬೇಕು. ಈ ವೃಷಭ ರಾಶಿಯ ಅಧಿಪತಿ ಯಾರೆಂದರೆ ಅದು ಶುಕ್ರ. ವೃಷಭ ರಾಶಿಯಲ್ಲಿ ಉಚ್ಛನಾಗಿರುವಂತಹ ಗೃಹ ಚಂದ್ರ. ಚಂದ್ರ ಈ ರಾಶಿಯಲ್ಲಿದ್ದರೆ 100% ಬಲವಾಗಿರುತ್ತದೆ. ಇನ್ನು ಈ ರಾಶಿಯಲ್ಲಿ ನೀಚ ಗ್ರಹ ವೆಂದರೆ ಕೇತು. ಈ ಜಾಗದಲ್ಲಿ ತುಂಬಾ ಕೆಟ್ಟ ಫಲಗಳನ್ನು ನೀಡುತ್ತಾನೆ. ಆದ್ದರಿಂದ ತುಂಬಾ ಹುಷಾರಾಗಿರಬೇಕಾಗುತ್ತದೆ.

ಶನಿ ಮತ್ತು ಬುಧ ವೃಷಭ ರಾಶಿಯವರಿಗೆ ತುಂಬಾ ಹತ್ತಿರದ ಸ್ನೇಹಿತರು. ಆದರೆ ಅಷ್ಟಮ ಶನಿಯಲ್ಲಿ ಬಾಧೆ ಆಗುವ ಸಾಧ್ಯತೆ ಇದೆ. ರವಿ ಮತ್ತು ಗುರು ಶತ್ರು ಗ್ರಹಗಳಾಗಿವೆ. ಇಬ್ಬರಲ್ಲಿ ಒಬ್ಬರಿದ್ದರೂ ಅಷ್ಟೊಂದು ಫಲಕಾರಿಯಾಗಿರುವುದಿಲ್ಲ.

ಈ ರಾಶಿಯವರಿಗೆ ತುಂಬಾ ಪ್ರಿಯವಾದ ದಿಕ್ಕು ದಕ್ಷಿಣ. ಶುಕ್ರ ಗ್ರಹ ಈ ರಾಶಿಯ ಅಧಿಪತಿ. ಇವರ ಮನಸ್ಸು ತುಂಬಾ ಸ್ಥಿರವಾಗಿ ಇರುತ್ತದೆ. ನಾಯಕ ಆಗಲು ಇಷ್ಟಪಡುತ್ತಾರೆ. ಶರೀರದ ವಿಷಯದಲ್ಲಿ ಗಂಟಲು, ಮೂಗು, ಕಣ್ಣು,ಮುಖ, ಹಲ್ಲು ಇವು ಶುಕ್ರ ರಾಶಿಗೆ ಸೇರಿರುವಂತದ್ದು.

ಇವರ ಪ್ರಿಯವಾದ ದೇವರು ಮಹಾಲಕ್ಷ್ಮೀ. ಹಾಗೇ ವ್ಯವಸಾಯದ ಸ್ಥಳವನ್ನು ಇಷ್ಟಪಡುತ್ತಾರೆ. ದೊಡ್ಡ ದೊಡ್ಡ ಅಂತಸ್ತುಗಳ ಮನೆಗಳನ್ನು ಇಷ್ಟ ಪಡುತ್ತಾರೆ. ಈ ರಾಶಿಯವರಿಗೆ ಬಿಳಿ, ಸಿಲ್ವರ್, ಕ್ರೀಮ್, ಬಿಳಿಗೆ ಸಂಬಂಧಿಸಿದಂತೆ ಎಲ್ಲಾ ಬಣ್ಣಗಳು ಅದೃಷ್ಟ ಆಗಿರುತ್ತದೆ. ಹಾಲಿನಂತ ಬಿಳುಪು ಬಹಳ ವಿಶೇಷವಾಗಿ ಇರುತ್ತದೆ.

ಕೃತಿಕಾ ನಕ್ಷತ್ರದ ಎರಡನೇ ಪಾದ, ಮೂರನೇ ಪಾದ, ನಾಲ್ಕನೇ ಪಾದ, ಹಾಗೆ ರೋಹಿಣಿ ನಕ್ಷತ್ರದ ನಾಲ್ಕೂ ಪಾದಗಳು, ಮೃಗಶಿರ ನಕ್ಷತ್ರದ ಒಂದು ಮತ್ತು ಎರಡನೇ ಪಾದಗಳು ಇವೆಲ್ಲ ಸೇರಿ ವೃಷಭ ರಾಶಿಯಾಗಿರುತ್ತದೆ.

ಈ ರಾಶಿಯವರಿಗೆ 6 ಅದ್ರಷ್ಟ ಸಂಖ್ಯೆ ಆಗಿರುತ್ತದೆ. ಆದ್ದರಿಂದ ಸಂಖ್ಯೆಯ ಆಯ್ಕೆಯಲ್ಲಿ 6ನ್ನು ಆರಿಸಿಕೊಂಡರೆ ಒಳ್ಳೆಯದು.ಇದರಿಂದ ವೃಷಭ ರಾಶಿಯವರು ಈ ಮೇಲಿನಿಂದ ಮಾಹಿತಿಗಳನ್ನು ತಿಳಿದುಕೊಳ್ಳ ಬಹುದು.

Leave a Comment

error: Content is protected !!