Chanakya Neethi: ಸೋಲಿನಿಂದ ಹೊರಬರಲು ಈ ಕೆಲಸಗಳನ್ನು ಬೆಳಗ್ಗೆ ಎದ್ದ ತಕ್ಷಣವೇ ಮಾಡಿ.

Chanakya Neethi ಪ್ರತಿಯೊಬ್ಬರೂ ಕೂಡ ಇಂದಿನ ಜಗತ್ತಿನಲ್ಲಿ ಕೇವಲ ಗೆಲುವನ್ನು ಮಾತ್ರ ನೋಡುತ್ತಾರೆ ಆದರೆ ಸೋತವನ ಪರಿಶ್ರಮದ ಕುರಿತಂತೆ ಯಾರು ಕೂಡ ಯೋಚಿಸಲು ಹೋಗುವುದಿಲ್ಲ. ಅದಕ್ಕಾಗಿ ಪ್ರತಿಯೊಬ್ಬರೂ ಕೂಡ ಮೊದಲನೇ ಸ್ಥಾನದಲ್ಲಿ ಬರಲು ನೋಡುತ್ತಾರೆ ಹೊರತು ಎರಡನೇ ಸ್ಥಾನಕ್ಕಾಗಿ ಯಾರು ಕೂಡ ಆಸೆಪಡುವುದಿಲ್ಲ. ಬದುಕಿನಲ್ಲಿ ಗೆಲ್ಲಲು ಸಾಕಷ್ಟು ವಿಚಾರಗಳನ್ನು ಅನುಸರಿಸಬೇಕು.

ಅದರಲ್ಲೂ ವಿಶೇಷವಾಗಿ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಹೇಳಿರುವಂತೆ ಪ್ರತಿಯೊಬ್ಬನ ದಿನ ಪ್ರಾರಂಭವಾಗುವುದು ಬೆಳಗ್ಗೆ. ಹೀಗಾಗಿ ಪ್ರತಿ ದಿನ ಬೆಳಗ್ಗೆ ಮಾಡುವಂತಹ ಕೆಲವೊಂದು ಅಭ್ಯಾಸ ಕಾರ್ಯಗಳು ಆತನ ದಿನವನ್ನು ಹಾಗೂ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಕಾರಣವಾಗುತ್ತದೆ ಹೀಗಾಗಿ ಆ ಕೆಲಸಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲನೆಯದಾಗಿ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಹೇಳುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಈ ಮೂಲಕ ಆರೋಗ್ಯದ ವಿಚಾರದಲ್ಲಿ ಕೂಡ ಇದು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಬೆಳಗ್ಗೆ ಬೇಗ ಎದ್ದು ದೇವರ ಸ್ಮರಣೆಯಲ್ಲಿ ಅಥವಾ ಯೋಗಭ್ಯಾಸದಲ್ಲಿ ದಿನವನ್ನು ಪ್ರಾರಂಭಿಸಬೇಕು.

ಈ ಮೂಲಕ ನಿಮ್ಮ ದಿನ ಎನ್ನುವುದು ದೈವಾನುಗ್ರಹದಿಂದ ಪ್ರಾರಂಭವಾಗುತ್ತದೆ ಎನ್ನುವ ಅನುಭವ ನಿಮಗೆ ಬರುವುದರಿಂದ ನಿಮ್ಮ ಮಾನಸಿಕ ಸ್ಥಿತಿ ಕೂಡ ದೈವಿಕವಾಗಿರುತ್ತದೆ. ಮಾಡುವಂತಹ ಕೆಲಸದಲ್ಲಿ ಬೇರೆಯವರನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ ನಿಮ್ಮ ಗೆಲುವಿನ ಬಗ್ಗೆ ನೀವು ಕೇಂದ್ರೀಕೃತವಾದರೆ ಸಾಕು ನಿಮ್ಮ ದಿನ ಹಾಗೂ ಜೀವನ ಒಳ್ಳೆಯದಾಗುತ್ತದೆ ಎಂಬುದಾಗಿ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಹೇಳುತ್ತಾರೆ.

Leave A Reply

Your email address will not be published.

error: Content is protected !!