Mantralaya Temple: ಮಂತ್ರಾಲಯ ದೇವಸ್ಥಾನದಲ್ಲಿ ಕೇವಲ ಒಂದು ತಿಂಗಳಿನಲ್ಲಿ ಒಟ್ಟಾದ ಕಾಣಿಕೆ ಹಣ ಎಷ್ಟು ಗೊತ್ತಾ?

Mantralaya Temple ನಮ್ಮ ಭಾರತ ದೇಶ ಎನ್ನುವುದು ಸನಾತನ ಹಿಂದೂ(Sanathan Hindu) ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದಿರುವಂತಹ ದೇಶವಾಗಿದ್ದು ಇಲ್ಲಿ ದೇವಸ್ಥಾನಗಳನ್ನು ಹಾಗೂ ಸನಾತನ ಧರ್ಮವನ್ನು ಆಚರಿಸುವಂತಹ ಸ್ವಾಮೀಜಿಗಳನ್ನು ಕೂಡ ಹೆಚ್ಚಾಗಿ ಆಚರಿಸುತ್ತಾರೆ. ಅದರಲ್ಲಿಯೂ ಕೆಲವರು ದೈವಾಂಶ ಸಂಭೂತರ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರಮುಖವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಹಿಂದುಗಳ ಪವಿತ್ರ ಪುಣ್ಯಕ್ಷೇತ್ರವಾಗಿರುವಂತಹ ಮಂತ್ರಾಲಯದ ರಾಘವೇಂದ್ರ(Mantralaya Raghavendra Swamy) ರಾಯರ ದೇವಸ್ಥಾನದ ಬಗ್ಗೆ. ಅವರ ಕೃಪಾಕಟಾಕ್ಷ ಇದ್ದರೆ ಎಂತಹ ಕಠಿಣ ಕೆಲಸವನ್ನಾದರೂ ಮಾಡಬಹುದು ಎನ್ನುವಂತಹ ದೊಡ್ಡ ಭಕ್ತ ಬಳಗವೇ ಇದೆ.

ಇನ್ನು ಕಳೆದ 30 ದಿನಗಳಿಂದ ಅಂದರೆ ಒಂದು ತಿಂಗಳಿನಿಂದ ಮಂತ್ರಾಲಯದ ಸನ್ನಿಧಿಗೆ ಬಂದಿರುವಂತಹ ಒಟ್ಟು ಹಣ ರೂಪದ ಕಾಣಿಕೆಗಳು ಹಾಗೂ ಚಿನ್ನಾಭರಣಗಳ ಬಗ್ಗೆ ಇಂದಿನ ಲೇಖನದಲ್ಲಿ ನಾವು ನಿಮಗೆ ಸಂಪೂರ್ಣ ವಿವರವಾಗಿ ತಿಳಿಸಲಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.

ಹೌದು ಮಿತ್ರರೇ ಮೂಲಗಳ ಪ್ರಕಾರ ಭರ್ಜರಿ 3.53 ಕೋಟಿ ರೂಪಾಯಿ ಹಣದ ರೂಪದಲ್ಲಿ ಸಂಗ್ರಹವಾಗಿದೆ. ಕಳೆದ ಕೆಲವು ದಿನಗಳಿಂದ ಪರರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದೇ ಇದಕ್ಕೆ ಕಾರಣ ಎಂಬುದಾಗಿ ತಿಳಿದು ಬಂದಿದ್ದು ಇನ್ನು ಚಿನ್ನಾಭರಣಗಳ ಸಂಖ್ಯೆ ಬಗ್ಗೆ ಮಾತನಾಡುವುದಾದರೆ 197 ಗ್ರಾಂ ಚಿನ್ನ ಹಾಗೂ ಒಂದು ಕೆಜಿಗೂ ಅಧಿಕ ಬೆಳ್ಳಿಯ ಕಾಣಿಕೆಯನ್ನು ಕೂಡ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave A Reply

Your email address will not be published.

error: Content is protected !!