Abhishek Ambareesh: ಅಭಿಷೇಕ್ ಅಂಬರೀಶ್ ಅವರ ಬಾಡೂಟ ಕಾರ್ಯಕ್ರಮದಲ್ಲಿ ನಡೆದಂತಹ ಅನಾಹುತ ಏನು?

Abhishek Ambareesh ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆ ಕಾರ್ಯಕ್ರಮಗಳು ಸಂಪೂರ್ಣವಾಗಿ ಮುಗಿದಿದ್ದು ಈಗಾಗಲೇ ಪ್ರತಿಯೊಬ್ಬರೂ ಕೂಡ ಇವರ ಮದುವೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು.

ಭಾರತೀಯ ಚಿತ್ರರಂಗದ ಸಾಕಷ್ಟು ಸಿನಿಮಾ ತಾರೆಗಳು ಸೇರಿದಂತೆ ರಾಜಕೀಯ ಗಣ್ಯರು ಕೂಡ ಆಗಮಿಸಿದ್ದು ಈ ಕಾರ್ಯಕ್ರಮ ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡಿತು ಎಂದರೆ ತಪ್ಪಾಗಲಾರದು. ಇನ್ನು ಬೀಗರ ಊಟ ಕಾರ್ಯಕ್ರಮ ಕೂಡ ನಿನ್ನೆ ಮಂಡ್ಯದಲ್ಲಿ ನಡೆದಿದೆ.

ಈ ಕಾರ್ಯಕ್ರಮದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ 50 ಸಾವಿರಕ್ಕೂ ಅಧಿಕ ಜನರಿಗೆ ಊಟವನ್ನು ಹಾಕಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಆದರೆ ಈ ಸಂದರ್ಭದಲ್ಲಿ ಕೆಲವೊಂದು ಅಹಿತಕರ ಘಟನೆ ಕೂಡ ನಡೆದಿದೆ ಎನ್ನುವುದಾಗಿ ಅಭಿಷೇಕ್ ಅಂಬರೀಶ್ ಅವರಿಂದಲೇ ತಿಳಿದು ಬಂದಿದೆ.

ಮಂಡ್ಯದಲ್ಲಿ ನಡೆದಿರುವಂತಹ ಅಭಿಷೇಕ್ ಅಂಬರೀಶ್ ರವರ ಬೀಗರ ಊಟ ಕಾರ್ಯಕ್ರಮದಲ್ಲಿ ಕೆಲವು ಕಿಡಿಗೇಡಿಗಳು ಊಟವನ್ನು ವೇಸ್ಟ್ ಮಾಡುವಂತಹ ಕೆಲಸವನ್ನು ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದರ ಬಗ್ಗೆ ನಟ ಅಭಿಷೇಕ್ ಅಂಬರೀಶ್ ಅವರು ಕೂಡ ಪ್ರೆಸ್ ಮೀಟಿಂಗ್ನಲ್ಲಿ ಹೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!