Abhishek Ambareesh: ಎತ್ತಿನ ಮೇಲೆ ಮೂಡಿ ಬಂದರೂ ಅಭಿಷೇಕ್ ಅವಿವಾ ದಂಪತಿಗಳು. ಈಗಲೇ ಏನ್ ಕ್ರೇಜ್ ಗುರು.

Abhishek Ambareesh ಅಭಿಷೇಕ್ ಅಂಬರೀಶ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ತಾವು ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಅವಿವ(Aviva Bidapa) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಇಡೀ ಕನ್ನಡ ಚಿತ್ರರಂಗವೇ ಸಂತೋಷಪಟ್ಟಿದೆ.

ಹೌದು ಮಿತ್ರರೇ, ಇವರಿಬ್ಬರ ಮದುವೆ ಅನಿರೀಕ್ಷಿತವಾಗಿ ನಡೆದರೂ ಕೂಡ ಕನ್ನಡ ಚಿತ್ರರಂಗ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ಸಾಕಷ್ಟು ದೊಡ್ಡ ಮಟ್ಟದ ಸೆಲೆಬ್ರಿಟಿಗಳು ಕೂಡ ಇವರಿಬ್ಬರ ಮದುವೆಗೆ ಆಗಮಿಸಿ, ಆಶೀರ್ವಾದವನ್ನು ನೀಡುವ ಮೂಲಕ ಅತ್ಯಂತ ಅದ್ದೂರಿ ಮದುವೆ ಇದಾಗುವಂತೆ ಕಾರಣಿಕರ್ತರಾಗುತ್ತಾರೆ.

ಇನ್ನು ಇವರಿಬ್ಬರ ಬೀಗರ ಊಟ ಕಾರ್ಯಕ್ರಮ ಕೂಡ 50000ಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಮಂಡ್ಯದಲ್ಲಿ ನಡೆದಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಬೀಗರ ಊಟ ಕಾರ್ಯಕ್ರಮವನ್ನು ಅಂಬರೀಶ್(Ambareesh) ಅವರ ತವರು ಜಿಲ್ಲೆ ಆಗಿರುವಂತಹ ಮಂಡ್ಯದಲ್ಲಿ ಮಾಡಲಾಗಿದೆ.

ಈ ಸಮಯದಲ್ಲಿ ಅಭಿಷೇಕ್ ಅಂಬರೀಶ್(Abhishek Ambareesh) ದಂಪತಿಗಳ ಫೋಟೋವನ್ನು ಎತ್ತಿನ ಮೇಲೆ ಚಿತ್ರದ ರೂಪದಲ್ಲಿ ಬರೆಸಿರುವಂತಹ ಘಟನೆ ಕೂಡ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಆ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಓಡಾಡುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!