
Abhishek Ambareesh: ಅಭಿಷೇಕ್ ಅಂಬರೀಶ್ ಅವರಿಗೆ ಮಾವನ ಕಡೆಯಿಂದ ಸಿಕ್ಕ ಗಿಫ್ಟ್ ಬಿಎಂಡಬ್ಲ್ಯೂ ಕಾರಿನ ಮೌಲ್ಯ ಎಷ್ಟು?
Abhishek Ambareesh ಅಭಿಷೇಕ್ ಅಂಬರೀಶ್ ಅವರ ಮದುವೆ ಈಗಾಗಲೇ ನಡೆದಿದ್ದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಡೀ ಚಿತ್ರರಂಗಕ್ಕೆ ಚಿತ್ರರಂಗವೇ ಒಟ್ಟಾಗಿ ಸೇರಿತ್ತು ಎನ್ನುವುದನ್ನು ನೀವು ನಿಮ್ಮ ಕಣ್ಣಾರೆ ನೋಡಿದ್ದೀರಿ. ತಮ್ಮ ಸಾಕಷ್ಟು ವರ್ಷಗಳ ಕಾಲ ಗೆಳತಿ ಆಗಿರುವಂತಹ ಅವಿವಾ(Aviva Bidapa) ಅವರನ್ನು ಮದುವೆಯಾಗುವ ಮೂಲಕ ಗೃಹಸ್ಥ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಭಿಷೇಕ್ ಅಂಬರೀಶ್ ರವರ ಮದುವೆಗೆ ಕಿಚ್ಚ ಸುದೀಪ್ ರವರಿಂದ ಹಿಡಿದು ರಜನಿಕಾಂತ್(Rajinikanth) ವರೆಗೂ ಕೂಡ ಎಲ್ಲಾ ಸೂಪರ್ ಸ್ಟಾರ್ ಗಳು ಕೂಡ ಆಗಮಿಸಿದ್ದಾರೆ. ಎಲ್ಲದಕ್ಕಿಂತ ಪ್ರಮುಖವಾಗಿ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಈ ಮದುವೆಯನ್ನು ಕಣ್ತುಂಬಿಕೊಂಡಿದ್ದಾರೆ.

ಇನ್ನು ಮದುವೆಯಾದ ನಂತರ ಅಭಿಷೇಕ್ ಅಂಬರೀಶ್ ಹಾಗೂ ಅವಿವ ದಂಪತಿಗಳಿಗೆ ಅವಿವ ಅವರ ತಂದೆ ಆಗಿರುವಂತಹ ಪ್ರಸಾದ್ ಬಿದ್ದಪ್ಪ(Prasad Bidapa) ಭರ್ಜರಿಯಾದ ಉಡುಗೊರೆಯನ್ನು ನೀಡಿದ್ದಾರೆ. ಹಾಗಿದ್ದರೆ ಆ ಉಡುಗೊರೆ ಏನು ಹಾಗೂ ಅದರ ಮೌಲ್ಯ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಮದುವೆಯಾದ ನವ ಜೋಡಿಗಳಿಗೆ ಅದರಲ್ಲಿ ವಿಶೇಷವಾಗಿ ಅಭಿಷೇಕ್ ಅಂಬರೀಶ್(Abhishek Ambareesh) ಅವರಿಗೆ ಅವರ ಮಾವ ಭರ್ಜರಿ ಒಂದು ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ನವಜೋಡಿಗಳಿಗೆ ನೀವು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಶುಭ ಹಾರೈಸಬಹುದಾಗಿದೆ.