ಮಗಳ ಮೊದಲ ಸಿನಿಮಾದ ಬಗ್ಗೆ ನಟ ಉಪೇಂದ್ರ ಏನಂದ್ರು ನೋಡಿ

ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅವರ ಮಗಳು ಐಶ್ವರ್ಯ ಉಪೇಂದ್ರ ಚಂದನ ವನಕ್ಕೆ ಪಾದಾರ್ಪಣೆ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಐಶ್ವರ್ಯ ಉಪೇಂದ್ರ ಅವರು ತಮ್ಮ ಮೊದಲ ಚಿತ್ರದ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ. ಇದು ನನ್ನ ಮೊದಲ ಸಿನೆಮಾ. ಸಿನೆಮಾ ಪ್ರಾರಂಭದಲ್ಲಿ ನಾನು ಹೇಗೆ ಆಕ್ಟ್ ಮಾಡ್ತೀನಿ ಅಂತ ತುಂಬಾ ಭಯಪಟ್ಟಿದ್ದೆ ನಂತರ ಹೋಗ್ತಾ ಹೋಗ್ತಾ ಅಭ್ಯಾಸ ಆಯ್ತು ಅಂತ ಹೇಳ್ತಾರೆ. ಹೌರಾ ಬ್ರಿಡ್ಜ್ ಇದು ಒಂದು ಹಾರರ್ ಸಿನೆಮಾ ಆಗಿದ್ದು ಇದರಲ್ಲಿ ಪ್ರಿಯಾಂಕ ಉಪೇಂದ್ರ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ತಂದೆಯ ಚಿತ್ರಗಳನ್ನು ನೋಡಿ ತನಗೂ ಕೂಡ ಚಿತ್ರ ರಂಗಕ್ಕೆ ಬರಬೇಕು ಎನಿಸಿತ್ತು ಎಂದು ಹೇಳುತ್ತಾರೆ ಐಶ್ವರ್ಯ ಉಪೇಂದ್ರ. ಹಾಗೇ ನಿಮ್ಮ ಆಕ್ಟಿಂಗ್ ಗೆ ತಂದೆ ತಾಯಿ ಹೇಗೆ ಗೈಡ್ ಮಾಡ್ತಾ ಇದ್ರು ಏನೆಲ್ಲಾ ಟಿಪ್ಸ್ ಕೊಡ್ತಾ ಇದ್ರು ಎಂದು ಪ್ರಶ್ನೆ ಕೇಳಿದಾಗ ಐಶ್ವರ್ಯ ನಂಗೆ ಅಪ್ಪ ಅಮ್ಮಾ ಇಬ್ರೂ ನೀನು ಆಕ್ಟ್ ಮಾಡ್ತಾ ಇದ್ದೀಯ ಅಂತ ಮಾಡ್ಬೇಡ ನೀನಾಗಿ ನೀನೇ ಯಾರದ್ದೋ ಜೊತೆ ನಿಜವಾಗಿ ಮಾತಾಡ್ತಾ ಇದಿಯ ಅನ್ನೋ ರೀತಿ ಮಾಡು ಅನಂತ ಟಿಪ್ಸ್ ಕೊಟ್ರು ಅಂತ ಹೇಳ್ತಾರೆ. ಶಾಲಾ ದಿನಗಳಿಗೆ ರಜೆ ಇದ್ದಾಗ ಶೂಟಿಂಗ್ ಮಾಡಿ ಶೂಟಿಂಗ್ ಜೊತೆಗೆ ತಮ್ಮ ವಿದ್ಯಭ್ಯಾಸವನ್ನು ಸಹ ನಡೆಸುತ್ತಾ ಇದ್ದಾರೆ ಐಶ್ವರ್ಯ ಉಪೇಂದ್ರ.

ಇನ್ನು ಮುಂದೆ ಕೂಡ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡುವ ಆಸೆ ಇದೆ ಆದರೆ ಸ್ವಲ್ಪ ಕಾಲಾವಕಾಶ ತೆಗೆದುಕೊಂಡು ಅಭಿನಯಿಸುತ್ತೇನೆ ಎಂದಿದ್ದಾರೆ. ಹಾಗೇ ತಂದೆ ಉಪೇಂದ್ರ ಅವರ ಡೈರೆಕ್ಷನ್ ಅಲ್ಲಿ ಕೂಡ ಅವರ ಡೈರೆಕ್ಷನ್ ವಿಭಿನ್ನವಾಗಿ ಇರುವುದರಿಂದ ತಂದೆಯ ಜೊತೆಗೂ ಕೂಡ ಮುಂದಿನ ದಿನಗಳಲ್ಲಿ ಅಭಿನಯಿಸುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇನ್ನು ಐಶ್ವರ್ಯ ಉಪೇಂದ್ರ ಅವರಿಗೆ ಅವರ ಕುಟುಂಬದಿಂದ ಕೂಡ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದ್ದು ಅವರ ಅಜ್ಜಿ ಕೂಡ ಶೂಟಿಂಗ್ ಸೆಟ್ ಗೆ ಬರುತ್ತಿದ್ದರಂತೆ ಹಾಗೇ ಅದರ ಜೊತೆ ಅಣ್ಣ ಆಯುಷ್ ಕೂಡ ಚೆನ್ನಾಗಿ ಅಭಿನಯಿಸುತ್ತಾ ಇದ್ದೀಯ ನಿನ್ನ ಬಗ್ಗೆ ಹೆಮ್ಮೆ ಇದೆ ಎಂದು ಪ್ರಶಂಶೆ ನೀಡಿದ್ದಾರೆ ಎಂದು ಐಶ್ವರ್ಯ ಉಪೇಂದ್ರ ಹೇಳಿದ್ದಾರೆ.

ನಿಜ ಅಲ್ವಾ ಯಾರಿಗೆ ಆದ್ರೂ ಏನಾದ್ರೂ ಒಂದು ಸಾಧಿಸೋ ಅವಕಾಶ ಸಿಕ್ಕಾಗ ಮನೆಯಲ್ಲಿ ಎಲ್ಲರ ಪ್ರೋತ್ಸಾಹ ಸಿಕ್ಕಿದ್ರೆ ಎಷ್ಟು ಖುಷಿ ಆಗತ್ತೆ ನಮಗೆ ಬೆನ್ನೆಲುಬಾಗಿ ಯಾರಾದ್ರೂ ಒಬ್ಬರು ಇದ್ದಾರೆ,ಇರ್ತಾರೆ ಅನ್ನೋ ಧೈರ್ಯ ಕೂಡ ಇರತ್ತೆ.

Leave a Comment

error: Content is protected !!