ಹೊಸ ದುಬಾರಿ ಕಾರ್ ಒಂದನ್ನು ಖರೀದಿ ಮಾಡಿದ ನಟ ಜಗ್ಗೇಶ್ ಇದರ ಬೆಲೆ ಎಷ್ಟು ಗೊತ್ತಾ ಕೇಳಿದರೆ ನಡುಗಿ ಹೋಗ್ತೀರಾ

ನವರಸ ನಾಯಕ ಜಗ್ಗೇಶ್ ಅವರು ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಇವರು ಕರ್ನಾಟಕದ ಮೇರು ಹಾಸ್ಯನಟ. ನಾವೆಲ್ಲಾ ಜಗ್ಗೇಶ್ ಅವರ ಕಾಮಿಡಿ ಚಿತ್ರಗಳನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಒಳ್ಳೆಯ ಕಲಾವಿದನಿಗೆ ಎಂದಿಗೂ ಕೊನೆಯಿಲ್ಲ. ನವರಸ ನಾಯಕ ಜಗ್ಗೇಶ್ ಅವರ ಅಭಿನಯಕ್ಕೆ ಕೂಡ ಕೊನೆಯೇ ಇಲ್ಲ ಎಂಬಂತೆ 59 ವರ್ಷ ವಯಸ್ಸಾದರೂ ಕೂಡಾ ಜಗ್ಗೇಶ್ ಅವರು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಇವರಿಗೆ ವಯಸ್ಸಾದರೂ ಕೂಡ ಹೀರೋ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಇದು ಅವರಿಗಿರುವ ಬೇಡಿಕೆ.

ಖಳ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜಗ್ಗೇಶ್ ಅವರ ಬದುಕಿನ ದಿಕ್ಕು ಬದಲಾಗಿದ್ದು ಕಾಮಿಡಿ ಪಾತ್ರಗಳಿಂದ. ಕೇವಲ ಫೈಟಿಂಗ್ ಬಿಲ್ಡಪ್ ಡೈಲಾಗ್ ಹೇಳಿದರೆ ಮಾತ್ರ ಹೀರೋ ಆಗೋಕೆ ಸಾಧ್ಯ ಅಂತ ಅಲ್ಲ, ಕಾಮಿಡಿ ಡೈಲಾಗ್ ಮತ್ತು ನಿರರ್ಗಳ ನಟನೆಯಿಂದ ಕೂಡ ಹೀರೋ ಆಗೋಕೆ ಸಾಧ್ಯ ಎಂದು ಜಗ್ಗೇಶ್ ಅವರು ತೋರಿಸಿಕೊಟ್ಟಿದ್ದಾರೆ. ಮದುವೆಯಾಗಿ ಮೊಮ್ಮಗ ಇದ್ದರೂ ಸಹ ಜಗ್ಗೇಶ್ ಅವರು ಯುವನಟ ನಾಚುವಂತೆ ನಟನೆ ಮಾಡುತ್ತಾರೆ. ವಯಸ್ಸಾದರೂ ಜಗ್ಗೇಶ್ ಅವರು ದುಡಿಯೋದನ್ನು ಮಾತ್ರ ಬಿಟ್ಟಿಲ್ಲ.

ಜಗ್ಗೇಶ್ ಅವರು ಇಂದಿಗೂ ಕೂಡ ಬ್ಯುಸಿಯಾಗಿರುತ್ತಾರೆ. ಒಂದು ಸಿನಿಮಾದಲ್ಲಿ ನಟನೆ ಮಾಡುವುದರಲ್ಲಿ ಬಿಜಿಯಾಗಿರುತ್ತಾರೆ ಇಲ್ಲವೆಂದರೆ ರಿಯಾಲಿಟಿ ಶೋಗಳಲ್ಲಿ ಜಗ್ಗೇಶ್ ಅವರು ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಜಗ್ಗೇಶ್ ಅವರು ಸಂಪಾದನೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಇಷ್ಟೊಂದು ಕೈತುಂಬ ಸಂಪಾದನೆ ಮಾಡುವ ಜಗ್ಗೇಶ್ ಅವರು ಇದೀಗ ದುಬಾರಿ ಕಾರ್ ಒಂದನ್ನು ಖರೀದಿ ಮಾಡಿದ್ದಾರೆ. ಬಿಎಂಡಬ್ಲ್ಯು x5 ಎಂಬ ದುಬಾರಿ ಐಷಾರಾಮಿ ಕಾರೊಂದನ್ನು ಜಗ್ಗೇಶ್ ಖರೀದಿ ಮಾಡಿದ್ದಾರೆ.

ಅತ್ಯಾಧುನಿಕ ಐಷಾರಾಮಿ ಕಾರ್ ಒಂದನ್ನು ಖರೀದಿ ಮಾಡಬೇಕೆಂಬುದು ಜಗ್ಗೇಶ್ ಅವರ ಕನಸಾಗಿತ್ತು ಗುರು ರಾಯರ ಆಶೀರ್ವಾದದಿಂದ ಇಂದು ನನಸಾಗಿದೆ ಎಂದು ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ. ಜಗ್ಗೇಶ್ ಅವರು ಖರೀದಿ ಮಾಡಿರುವ ಈ ಬಿಎಂಡಬ್ಲ್ಯು ಕಾರು ಎಲ್ಲಾ ಅತ್ಯಾಧುನಿಕ ಸುರಕ್ಷತೆ ಮತ್ತು ವಿಶಿಷ್ಟತೆಗಳನ್ನು ಹೊಂದಿದೆ. ಈ ಕಾರಿನ ಬೆಲೆ ಒಂದು ಕೋಟಿ ರುಪಾಯಿಗಳು. ಕೇವಲ ಐದೇ 5 ಸೆಕೆಂಡುಗಳಲ್ಲಿ ನೂರು ಕಿಲೋಮೀಟರ್ ವೇಗವನ್ನು ತಲುಪುವ ಸಾಮರ್ಥ್ಯ ಈ ಕಾರಿಗಿದೆ. ಹೊಸ ಕಾರನ್ನು ಖರೀದಿ ಮಾಡಿದ ನಂತರ ಜಗ್ಗೇಶ್ ಅವರು ತಮ್ಮ ಪತ್ನಿ ಪರಿಮಳಾ ಜೊತೆ ಕಾರಿನ ಮುಂದೆ ನಿಂತುಕೊಂಡು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜಗ್ಗೇಶ್ ಅವರ ಕಾರು ಹೇಗಿದೆ ಅಂತ ಇಲ್ಲಿದೆ ನೋಡಿ ವೀಡಿಯೊ

Leave a Comment

error: Content is protected !!