ಬಹುಭಾಷ ನಟಿ ಸುಹಾಸಿನಿ ಅವರ ಮಗ ಹೇಗಿದ್ದಾನೆ ಗೊತ್ತಾ? ನೋಡಿ ಮೊದಲ ಬಾರಿಗೆ

ನಮ್ಮ ಕನ್ನಡ ಚಿತ್ರರಂಗಕ್ಕೆ ಇದುವರೆಗೂ ಪರಭಾಷೆಗಳಿಂದ ಹಲವಾರು ನಟಿಯರು ಬಂದು ಹೋಗಿದ್ದಾರೆ ನಮ್ಮ ಕನ್ನಡ ಚಿತ್ರರಂಗ ಎನ್ನುವುದು ಹಲವಾರು ಪರಭಾಷ ಕಲಾವಿದರಿಗೂ ಕೂಡ ಸೂರು ನೀಡಿದ ಆಶ್ರಯ ತಾಣ ಎಂದರೆ ತಪ್ಪಾಗಲಾರದು. ಇಂದು ನಾವು ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರ ಅಣ್ಣ ಚಾರು ಹಾಸನ್ ಅವರ ಮಗಳಾಗಿರುವ ಸುಹಾಸಿನಿ ಅವರ ಕುರಿತಂತೆ ಹೇಳಲು ಹೊರಟಿದ್ದೇವೆ.

ಸುಹಾಸಿನಿ ಅವರು ತಮಿಳು ಚಿತ್ರರಂಗದ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಕಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿರುವ ಮಣಿರತ್ನಂ ಅವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕೂಡ ಕಾಲಿಟ್ಟಿದ್ದಾರೆ. ಸುಹಾಸಿನಿ ಅವರ ಕುರಿತಂತೆ ನಮಗೆ ನೆನಪಾದಾಗಲೆಲ್ಲ ವಿಷ್ಣುವರ್ಧನ್ ನಟನೆಯ ಮುತ್ತಿನ ಹಾರ ಸಿನಿಮಾ ನೆನಪಾಗುವುದಂತು ಸುಳ್ಳಲ್ಲ. ಕನ್ನಡ ಚಿತ್ರರಂಗದ ಹಲವಾರು ಸೂಪರ್ ಸ್ಟಾರ್ಗಳ ಜೊತೆಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಂಧನ ಮಾತಾಡ್ ಮಲ್ಲಿಗೆ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭೂತ ಪೂರ್ವ ನಟನೆಯನ್ನು ತೋರಿಸುವ ಮೂಲಕ ಜನರ ಮೆಚ್ಚುಗೆಯನ್ನು ಗಳಿಸಿರುವ ಸುಹಾಸಿನಿ ಅವರು ಹಲವಾರು ಪ್ರತಿಷ್ಠಿತ ಪ್ರಶಸ್ತಿ ಪ್ರಧಾನವನ್ನು ಕೂಡ ಪಡೆದುಕೊಂಡಿದ್ದಾರೆ. ಇಂದಿಗೂ ಕೂಡ ನಟನೆ ನಿರ್ಮಾಣ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸುಹಾಸಿನಿ ಅವರು ಪೋಷಕ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಸುಹಾಸಿನಿ ಹಾಗೂ ಮಣಿರತ್ನಂ ಅವರ ಮಗನಾಗಿರುವ ನಂದನ್ ಮಣಿರತ್ನಂ ಅವರು ಕೂಡ ನೋಡುವುದಕ್ಕೆ ತಾಯಿ ತರಾನೇ ಇದ್ದಾರೆ. ಅವರ ಫೋಟೋವನ್ನು ಕೂಡ ನೀವು ಇಲ್ಲಿ ನೋಡಬಹುದಾಗಿದೆ. ನಟಿ ಸುಹಾಸಿನಿ ಹಾಗೂ ಅವರ ಕುಟುಂಬದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.

error: Content is protected !!