ಒಂದು ಕಾಲದಲ್ಲಿ ಸಿನಿ ಪ್ರಿಯರ ಹಾಗೂ ಹೆಂಗಳೆಯರ ನಿದ್ದೆಗೆಡಿಸಿದ್ದ ನಟ ಸುನಿಲ್ ಅವರ ಸಮಾಧಿ ಎಲ್ಲಿದೆ ಹೇಗಿದೆ ಗೊತ್ತಾ? ನಿಜಕ್ಕೂ ಕಣ್ಣೀರ್ ಬರತ್ತೆ

90 ರ ದಶಕದಲ್ಲಿ ಸಿನಿ ಪ್ರಿಯರ ಹಾಗೂ ಹೆಂಗಳೆಯರ ನಿದ್ದೆ ಕದ್ದ ಚೋರ ನಿರ್ಮಾಪಕರಿಗೆ ಲಕ್ಕಿ ಚಾರ್ಮ್ ಆಗಿದ್ದರು ಇವರು. ತನ್ನ ಜೀವಿತ ಅವಧಿಯಲ್ಲಿ ನಟಿಸಿದ ಚಿತ್ರ ಸಿನಿ ಪ್ರಿಯರ ಮನದಲ್ಲಿ ಅಚ್ಚೊತ್ತಿದೆ ಹಾಗೂ ಇವರನ್ನು ಇಂದಿಗೂ ಚಿಕ್ಕ ಮಕ್ಕಳು ಸಹ ಮರೆಯಲಿಲ್ಲ ಇಂದಿಗೂ ಅವರ ಸಿನಿಮಾ ಟಿವಿ ಅಲ್ಲಿ ಬಂದರೆ ಮನೆಯ ಮಂದಿ ಕೂತು ನೋಡುತ್ತಾರೆ. ಇವರು ಬೇರೆ ಯಾರು ಅಲ್ಲ ನಟ ಸುನಿಲ್ ಶೆಟ್ಟಿ ಇಂದಿನ ಲೇಖನದಲ್ಲಿ ಅವರ ಸಮಾಧಿ ಬಗ್ಗೆ ತಿಳಿದುಕೊಳ್ಳೋಣ ಅವರ ಮನೆ ಹೇಗೆ ಇದೆ ಎಲ್ಲಿದೆ ಎನ್ನುವುದರ ಮಾಹಿತಿ ಇಲ್ಲಿದೆ .

ಸುನಿಲ್ ಅವರ ನಿಜವಾದ ಹೆಸರು ರಾಮಕೃಷ್ಣ ಬೆಂಗಳೂರಿನ ಆರ್ ವಿ ಕಾಲೇಜ್ ಅಲ್ಲಿ ಎಂಜಿನಿಯರ್ ಓದುತ್ತಿದ್ದರು ಹಾಗೂ ಇವರು ಒಬ್ಬ ಅದ್ಭುತ ಯಕ್ಷಗಾನ ಕಲಾವಿದ ಒಮ್ಮೆ ಜಾಹೀರಾತಿಗೆ ಒಂದು ಪೋಸ್ಟ್ ಹಾಕುತ್ತಾರೆ. ಆವಾಗ ಇವರ ಫೋಟೋ ನೋಡಿದ ನಿರ್ಮಾಪಕರು ಇವರಿಗೆ ಅವಕಾಶವನ್ನು ನೀಡುತ್ತಾರೆ. ಹಾಗಾಗಿ ಓದನ್ನು ಅರ್ಧಕ್ಕೆ ನಿಲ್ಲಿಸಿ ಚಿತ್ರ ರಂಗದ ಕಡೆಗೆ ಒಲವು ಮೂಡುತ್ತದೆ ಇವರು ಮಾಲಾಶ್ರೀ ಅವರ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು ಇವರಿಬ್ಬರ ಜೋಡಿ ಅಂದಿನ ಕಾಲದಲ್ಲಿ ಉತ್ತಮ ಜೋಡಿಯಾಗಿ ಹೊರಹೊಮ್ಮಿದ್ದರು. ಅವರು ಜೋಡಿಯಾಗಿ ನಟಿಸಿದ್ದ ಸಿನಿಮಾ ಬರ್ಜರಿ ಹಿಟ್ ಆಗಿತ್ತು. ಬೆಳ್ಳಿ ಕಾಲುಂಗುರ, ಶೃತಿ, ಮನ ಮೆಚ್ಚಿದ ಸೊಸೆ, ಶಾಂಭವಿ ಹೀಗೆ ಸುಮಾರು 30 ಸಿನಿಮಾ ಅಲ್ಲಿ ನಟಿಸಿದ್ದಾರೆ.

ಒಮ್ಮೆ ನಟಿ ಮಾಲಾಶ್ರೀ ಹಾಗೂ ಸುನಿಲ್ ಅವರು ರಸಮಂಜರಿ ಕಾರ್ಯಕ್ರಮವನ್ನು ವೀಕ್ಷಿಸಿ ವಾಪಾಸ್ಸು ಬರುವ ವೇಳೆ ಬೇರೊಂದು ಗಾಡಿ ಡಿಕ್ಕಿ ಹೊಡೆದು ಚಿತ್ರದುರ್ಗ ಸಮೀಪದ ಮದನಯಕ ಅಲ್ಲಿ ಆಕ್ಸಿಡೆಂಟ್ ಆಗಿದ್ದು ಕಾರ್ ಚಾಲಕ ಅಲ್ಲಿಯೇ ಸತ್ತಿದ್ದ. ಮಾಲಾಶ್ರೀ ಅವರು ಸಣ್ಣ ಪುಟ್ಟ ಗಾಯದಿಂದ ಪಾರು ಆಗಿದ್ದರು ಆದರೆ ಸುನಿಲ್ ಅವರು ತೀವ್ರ ಗಂಭೀರ ಸ್ಥಿತಿಯಲ್ಲಿ ಇದ್ದು ಆಸ್ಪತ್ರೆಗೆ ಸೇರಿಸಿದ ಒಂದು ಗಂಟೆಯಲ್ಲಿ ಮರಣ ಹೊಂದಿದ್ದರು ಅಂದರೆ ಜುಲೈ 24 1994 ರಂದು ಸಾವಿರಾರು ಅಭಿಮಾನಿಗಳನ್ನು ತೊರೆದು ಇಹ ಲೋಕ ತ್ಯಜಿಸಿದ್ದರು. ಅವರ ಅಂತಿಮ ಕ್ರಿಯೆಯನ್ನು ಅವರ ಸ್ವಗ್ರಾಮ ಕುಂದಾಪುರ ತಾಲೂಕು ಬಾರಕೂರಿನ ಯಡ್ತದಿ ಅಲ್ಲಿ ಮಾಡಿದ್ದು ಇಂದು ಕೂಡ ಅವರ ಸಮಾಧಿಯನ್ನು ಕಾಣಬಹುದು.

ಜುಲೈ 24 1994 ರಂದು ಇಡೀ ಚಿತ್ರರಂಗಕ್ಕೆ ಸಿಡಿಲು ಬಡಿದಂತೆ ಆಗಿತ್ತು ಸುನಿಲ್ ಅವರ ಸಾವು ಅನ್ಯಾಯವೇ ಸರಿ ಹಾಗಾಗಿ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿಗೆ ತಂದಿದ್ದರು. ಸುಮಾರು 4ರಿಂದ 5 ಸಾವಿರ ಅಷ್ಟು ಅಭಿಮಾನಿಗಳ ಸಾಗರವೇ ಹರಿದು ಬಂದಿದ್ದು ಸಿನಿಮಾ ಗಣ್ಯರು ಇಂದಿನ ಖ್ಯಾತ ಖಳನಟ ರವಿಶಂಕರ ಸುನೀಲ ಅವರ ಆತ್ಮೀಯ ಗೆಳೆಯ ಆಗಿದ್ದರು. ಹಾಗೂ ನಿರ್ಮಾಪಕರು ಗಣ್ಯರು ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗಿದ್ದರು. ಸುನೀಲ್ ಅವರ ತಾಯಿ ಇಂದಿಗೂ ಮಗನ ನೆನಪಲ್ಲಿ ಸುನೀಲ್ ಮನೆಯಲ್ಲಿ ವಾಸವಾಗಿದ್ದರು ಅಂದು ಹೇಗೆ ಇತ್ತೋ ಇಂದಿಗೂ ಕೂಡ ಹಾಗೆ ಇದೆ. ಕೆಲವೊಂದು ಹೊರಾಂಗಣ ಬದಲಾವಣೆ ಮಾಡಿದ್ದಾರೆ ಎಂದು ಅವರ ಅಕ್ಕನ ಗಂಡ ಶಾಂತ ರಾಮ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.

ಕರಾವಳಿಯ ಕಡೆ ಸತ್ತವರ ಸಮಾಧಿಯ ಮೇಲೆ ನುಕ್ಕಿ(ಲಕ್ಕಿ ಗಿಡ) ಗಿಡವನ್ನು ಬೆಳೆಸುತ್ತಾರೆ ಸಮಾಧಿ ಕಟ್ಟಿದ್ದಲ್ಲಿ ದಿನವೂ ದೀಪ ಹಚ್ಚಿ ಪೂಜೆ ಮಾಡಬೇಕು ಎನ್ನುವ ಸಂಪ್ರದಾಯ ಅಲ್ಲಿಯವರದ್ದು ಹಾಗಾಗಿ ಸತ್ತವರಿಗೆ ಅವರ ಐದನೇ ದಿನ ಅವರ ಬೂದಿಯನ್ನು ಒಟ್ಟುಗೂಡಿಸಿ ಅದರ ಮೇಲೆ ಒಂದು ಗಿಡವನ್ನು ನೆಟ್ಟು ಅವರ ನೆನಪಿಗೆ ನೆಡುವುದು ಕರಾವಳಿಯ ಜನರ ಪದ್ಧತಿ ಇಂದಿಗೂ ಕೂಡ ಜಾರಿಯಲ್ಲಿ ಇದೆ. ಹಾಗಾಗಿ ಸುನೀಲ್ ಅವರ ಸಮಾಧಿ ಕೂಡ ಅದೇ ರೀತಿ ಇದ್ದು ಅವರ ಪುಣ್ಯಸ್ಮರಣೆ ದಿನ ಹೋಮವನ್ನು ಮಾಡಿ ಸಮಾಧಿಗೆ ದೀಪವನ್ನು ಇಂದಿಗೂ ಹಚ್ಚುವುದು ಅವರ ಮನೆಯವರು ರೂಡಿಯಲ್ಲಿ ಇಟ್ಟುಕೊಂಡು ಬಂದಿದ್ದಾರೆ. ಎಂದು ಶಾಂತಾರಾಮ ಅವರು ಹೇಳಿದ್ದಾರೆ.

ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನ ಸಂಸಾರವನ್ನು ತ್ಯಜಿಸಿ ಪರಲೋಕ ಹೋಗಿದ್ದು ಇಂದಿಗೂ ಅವರನ್ನು ನೆನಸಿಕೊಂಡರೆ ಅವರ ಫ್ಯಾಮಿಲಿ ಕಣ್ಣೀರು ಹಾಕುತ್ತಾರೆ ಇನ್ನೂ ಅವರ ಸಂಪೂರ್ಣ ಕಾರ್ಯ ಆಗುವ ತನಕ ಮಾಲಾಶ್ರೀ ಅವರು ಜೊತೆಗೆ ಇದ್ದರೂ ಎಂದು ಕೂಡ ಹೇಳಿಕೊಂಡಿದ್ದಾರೆ ಮತ್ತು ಜುಲೈ ೨೪ ಸುನಿಲ್ ಅವರು ಮರಣ ಹೊಂದಿ ಸುಮಾರು ೩೦ ವರ್ಷಗಳ ಆಗುತ ಬಂದರು ಕೂಡ ಅವರ ಹೆಸರು ಅಜರಮರ ಆಗಿದೆ ನಮ್ಮ ಚಂದನವನದಲ್ಲಿ ಎಂಬುದು ಒಂದು ಶ್ಲಾಘನೀಯ ಸಂಗತಿ.

ಸುನೀಲ ಅವರ ಸಮಾಧಿ ಬಾರಕೂರು ಅಲ್ಲಿನ ಯಡ್ತದಿ ಅಲ್ಲಿ ಅವರ ತಾಯಿಯ ಹಾಗೂ ಸುನೀಲ ಅವರ ಮಾವನ ಜಾಮೀನಿನಲ್ಲಿದೆ ಹಾಗೂ ಇಂದಿಗೂ ಅವರ ಕುಟುಂಬಸ್ಥರು ಅಡಿಕೆ ತೆಂಗು ಹಾಗೂ ಗದ್ದೆಗಳ ಬೇಸಾಯವನ್ನು ಮಾಡುತ ಇದ್ದಾರೆ. ಸುನಿಲ್ ಅವರ ಭಾವ ಅವರು ರಾಜಕೀಯ ಪಕ್ಷದಲ್ಲಿನಿದ್ದು ಹಾಗೂ ಕರಾವಳಿಯ ಪ್ರಸಿದ್ಧ ಕ್ರೀಡೆ ಕಂಬಳ ಅಲ್ಲಿ ಅವರ ಹೆಸರುವಾಸಿ ಆಗಿದ್ದಾರೆ.

ತಮ್ಮದೇ ಎರಡು ಕೋಣಗಳನ್ನು ಕಂಬಳಕ್ಕೆ ಅಂತಾನೆ ಸಾಕಿದ್ದಾರೆ ಹಾಗೂ ಸುನೀಲ ಅವರ ಸಮಾಧಿಯ ಸುತ್ತ ಆವರಣವನ್ನು ಮಾಡಿ ಬೇರೆ ಮರವನ್ನು ನೆಡಬೇಕು ಎಂದು ಯೋಚಿಸುತ್ತ ಇದ್ದಾರೆ. ಕುಂದಾಪುರದ ಕಡೆ ಪ್ರಯಾಣ ಬೆಳೆಸಿದ ವೇಳೆಯಲ್ಲಿ ನೀವು ಸುನಿಲ್ ಅವರ ಅಭಿಮಾನಿ ಆಗಿದ್ದಲ್ಲಿ ಅವರು ಪ್ರಕೃತಿ ಮಡಿಲಲ್ಲಿ ಚಿರನಿದ್ರೆ ಅಲ್ಲಿನಿರುವುದನ್ನು ಒಮ್ಮೆ ನೋಡಿಕೊಂಡು ಬನ್ನಿ ಸುನೀಲ ಅವರು ನಮ್ಮೊಂದಿಗೆ ಇಲ್ಲ ಆದರೆ ಅವರ ನೆನೆಪು ಮಾತ್ರ ಇಂದಿಗೂ ಚಿರಸ್ಮರಣೀಯ.

Leave a Comment

error: Content is protected !!