ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ಕೊಟ್ಟರೂ ನಾನು ಮಾಡೋಕೆ ರೆಡಿ ಎಂದ ಖ್ಯಾತ ನಟಿ ಲಕ್ಷ್ಮಿ ಮಗಳು ಐಶ್ವರ್ಯ. ಈಕೆಯ ಪರಿಸ್ಥಿತಿ ನೋಡಿದರೆ ಕಣ್ಣೀರು ಬರುತ್ತೆ

ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನೆಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಲಕ್ಷ್ಮೀ ಅವರ ಮಗಳು ಐಶ್ವರ್ಯ ಭಾಸ್ಕರನ್ ಇದೀಗ ಕೆಲಸವಿಲ್ಲದೇ ಜೀವನ ನಡೆಸೋಕೆ. ಆಗದೆ ಬೀದಿಗೆ ಬಿದ್ದಿದ್ದಾರೆ. ಸಾಮಾನ್ಯವಾಗಿ ಸಿನಿಮಾದಲ್ಲಿ ನಟಿಸುವ ಕಲಾವಿದರ ಜೀವನ ಕೂಡ ಬಹಳ ರಂಗಿನಿಂದ ಕೂಡಿದ್ದು ಅಂತ ಜನರು ಭಾವಿಸುತ್ತಾರೆ. ಅವರಿಗೇನು ಬಿಡಿ ಬೇಕಾದಷ್ಟು ದುಡ್ಡಿದೆ, ಬೇಕಾದ ಹಾಗೆ ಜೀವನ ಮಾಡ್ತಾರೆ ಅಂತ ನಾವು ಮಾತನಾಡಿಕೊಳ್ಳುತ್ತೇವೆ. ಆದರೆ ಅಲ್ಲಿನ ಅಸಲಿಯತ್ತು ಬೇರೆನೆ ಇದೆ. ನಟಿ ಐಶ್ವರ್ಯ ನಂತಹ ಹೀರೋಯಿನ್ ಗಳು ಇಂದು ಎಲ್ಲವನ್ನು ಕಳೆದುಕೊಂಡು ಬಡತನದ ಬೇಗೆಯಲ್ಲಿ ಬೇಯುತ್ತಿರುವ ಕೂಡ ಅಷ್ಟೇ ಸತ್ಯ.

ಐಶ್ವರ್ಯ ಅಥವಾ ಐಶ್ವರ್ಯ ಭಾಸ್ಕರ್ ಬಹುಭಾಷಾ ನಟಿ. ಈಕೆ ಬೇರೆ ಯಾರೂ ಅಲ್ಲ. ಹಿರಿಯ ನಟಿ ಲಕ್ಷ್ಮಿ ಅವರ ಮೊದಲ ಗಂಡನ ಮಗಳು. 1969 ರಲ್ಲಿ ಲಕ್ಷ್ಮಿ ಮತ್ತು ಭಾಸ್ಕರ್ ಹೊಸ ಜೀವನಕ್ಕೆ ಕಾಲಿಟ್ಟರು. ನಂತರ ವೈವಾಹಿಕ ಜಗಳ ಗಳಿಂದ 1974 ರಲ್ಲಿ ಲಕ್ಷ್ಮಿ ಮತ್ತು ಭಾಸ್ಕರ್ ದೂರ ಆದರು. ಆದರೆ ದುರದೃಷ್ಟವಶಾತ್ ಅಷ್ಟೊತ್ತಿಗೆ ಲಕ್ಷ್ಮಿ ಗೆ ಐಶ್ವರ್ಯ ಹುಟ್ಟಿದ್ದಳು. ತಾಯಿ ಚಿತ್ರ ರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದರೂ ಸಹ ಐಶ್ವರ್ಯ ಗೆ ಮೊದಲು ಸಿನೆಮಾ ಗಳಲ್ಲಿ ಅವಕಾಶ ಸಿಗಲಿಲ್ಲ. ಕೊನೆಗೆ ಕಷ್ಟ ಪಟ್ಟು ಮಲಯಾಳಂ ತೆಲುಗು ತಮಿಳು ಹಿಂದಿ ಜೊತೆಗೆ ಕನ್ನಡದಲ್ಲಿ ಕೂಡ ನಟಿಸಿದ್ದಾರೆ.

ಹಾಗಾಗಿ ಈ ನಟಿ ಕೆಲವರಿಗೆ ನೆನಪಿನಲ್ಲಿರಬಹುದು. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ’ಬಟರ್ಫ್ಲೈಸ್’, ’ನರಸಿಂಹಂ’, ’ಪ್ರಜಾ’ ಮೊದಲಾದ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದವರು ಐಶ್ಚರ್ಯ. ಇವರ ನಟನೆಯ ಇತರ ಫೇಮಸ್ ಚಿತ್ರಗಳೆಂದರೆ ’ಜಾಕ್ ಪಾಟ್’, ’ಬುಕ್ ನೋಟ್’, ’ಶರ್ಜಾ’, ’ಸತ್ಯಮೇವ ಜಯತೆ’ ಮೊದಲಾದವು. ಇನ್ನು ಕನ್ನಡದಲ್ಲಿ ’ಪಾಂಡವರು’, ಒಗ್ಗರಣೆ;’ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ನಡುವೆಯೂ ಗುರುತಿಸಿಕೊಂಡಿದ್ದರು. ಆಗ ಉತ್ತಮ ಸ್ಥಿತಿಯಲ್ಲಿದ್ದ ಐಶ್ಚರ್ಯ ಇಂದು ಹೇಗಿದ್ದಾರೆ ಗೊತ್ತಾ?

ಹೌದು, ಎಲ್ಲರ ಜೀವನ ಹೀಗೆ ಇರುತ್ತೆ ಅಂತ ಯಾರೂ ಊಹಿಸುವುದಕ್ಕೂ ಸಾಧ್ಯವಿಲ್ಲ. ಯಾವ ಸಂದರ್ಭದಲ್ಲಿ ನಮಮ್ ಜೀವನ ಹೇಗೆ ಬೇಕಾದರೂ ಟರ್ನ್ ತೆಗೆದುಕೊಳ್ಳಬಹುದು. ಐಶ್ಚರ್ಯ ಸುಮಾರು ಮೂರು ವರ್ಷಗಳ ಕಾಲ ಮಾತ್ರ ಸಿನಿಮಾಗಳಲ್ಲಿ ನಟಿಸಿದ್ದು. ಆದರೆ ಅಷ್ಟು ಅಲ್ಪಾವಧಿಯಲ್ಲಿಯೇ ಉತ್ತಮ ಹೆಸರನ್ನು ಗಳಿಸಿಕೊಂಡಿದ್ದರು. ನಂತರ ಮದುವೆಯಾಗಿ ಸಿನಿಮಾರಂಗದಿಂದ ದೂರ ಸರಿದರು. ಅಲ್ಲಿಂದಲೇ ಅವರ ಗ್ರಹಚಾರ ಕೆಟ್ಟಿತ್ತು ಅಂತ ಅನ್ನಿಸುತ್ತದೆ. 1994ರಲ್ಲಿ ತನ್ವೀರ್ ಎನ್ನುವ ಯುವಕನ ಜೊತೆ ಮದುವೆಯಾಗಿದ್ದ ಐಶ್ಚರ್ಯ ಸ್ವಲ್ಪ ಸಮಯದ ನಂತರ ಅವರಿಂದ ದೂರವಾಗಬೇಕಾಯಿತು. ಮೌದುವೆಯಾಗಿ ಮೂರು ವರ್ಷಕ್ಕೆ ವಿಚ್ಛೇಧನ ಪಡೆದರು ಐಶ್ಚರ್ಯ.

ತನ್ನ ಒಂದುವರೆ ವರ್ಷದ ಮಗುವನ್ನು ಹೊತ್ತು ಮನೆಬಿಟ್ಟರು. ಇಂದು ಅವರ ಮಗಳು ಮದುವೆಯಾಗಿ ಗಂಡನ ಮನೆ ಸೇರಿದ್ದಾರೆ. ಆದರೆ ಐಶ್ವರ್ಯ ಇಂದು ಒಬ್ಬಂಟಿ. ಅಕೆಗೆ ಸಿನಿಮಾದಲ್ಲಿ ಅವಕಾಶಗಳು ಸಿಗುತ್ತಿಲ್ಲ. ’ಎಲ್ಲರಿಗೂ ಸೆಕೆಂಡ್ ಇನ್ನಿಂಗ್ಸ್ ಕೈಹಿಡಿಯುವುದಿಲ್ಲ. ನನಗೂ ಹಾಗೆ ಸಿನಿಮಾದಲ್ಲಿ ಮತ್ತೆ ಕೆಲಸ ಸಿಕ್ಕಿಲ್ಲ. ಇದೀಗ ಒಂದು ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದೇನೆ. ಬೆಳಿಗ್ಗೆ ಅದರ ಕೆಲಸ ಮುಗಿಸಿ ಮನೆಮನೆಗೆ ಹೋಗಿ ಸಾಬೂನು ಮಾರುತ್ತೇನೆ. ಯಾರಾದರು ನನಗೆ ನಿಮ್ಮ ಆಫೀಸಿನಲ್ಲಿ ಸಣ್ಣ ಕೆಲಸ ಕೊಡಿ. ಶೌಚಾಲಯ ಸ್ವಚ್ಛಗೊಳಿಸುವ ಕೆಲಸವಾದರೂ ಸರಿ ಸಂತೋಷದಿಂದ ಮಾಡಿ ಬರುತ್ತೇನೆ’ ಎಂದು ಐಶ್ಚರ್ಯಾ ಹೇಳುತ್ತಿದ್ದರೆ ನಿಜಕ್ಕೂ ಬೇಸರವೆನಿಸುತ್ತೆ. ಆದಷ್ಟು ಬೇಗ ಈ ನಟಿಗೆ ಉತ್ತಮ ನೆಲೆಯಾಗಲಿ ಎಂದು ಹಾರೈಸೋಣ.

Leave A Reply

Your email address will not be published.

error: Content is protected !!