ನಟಿ ಮೀನಾ ಬಾಳಲ್ಲಿ ವಿಧಿಯಾಟ. ಇದ್ದಕ್ಕಿದ್ದಂತೆ ಮೀನಾಳ ಪತಿ ವಿದ್ಯಾಸಾಗರ್ ನಿಧನ. 48 ನೇ ವಯಸ್ಸಿಗೆ ಜೀವ ಬಿಟ್ಟ ವಿದ್ಯಾಸಾಗರ್ ಗೆ ಏನಾಗಿತ್ತು

ನಟಿ ಮೀನಾ ಅವರ ಮುಖ ಪರಿಚಯ ನಿಮಗೆ ಇದ್ದೇ ಇರುತ್ತೆ ಇವರು ದಕ್ಷಿಣ ಭಾರತದ ಎವರ್ ಗ್ರೀನ್ ನಟಿ. ತಮಿಳು ತೆಲುಗು ಮಲಯಾಳಂ ಕನ್ನಡ ಹೀಗೆ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಮಗೆಲ್ಲ ನಟಿ ಮೀನಾ ಅವರು ಪರಿಚಯವಾಗಿದ್ದು ಸಿಂಹಾದ್ರಿಯ ಸಿಂಹ ಮತ್ತು ಪುಟ್ನಂಜ ಸಿನಿಮಾಗಳಿಂದ. 90 ರ ದಶಕದಲ್ಲಿ ನಟಿ ಮೀನಾ ಅವರು ದಕ್ಷಿಣ ಭಾರತ ಚಿತ್ರರಂಗದ ಲೀಡಿಂಗ್ ಆ್ಯಕ್ಟ್ರೆಸ್ ಆಗಿದ್ದರು. ಇಂದಿಗೂ ಕೂಡ ನಟಿ ಮೀನಾ ಅವರು ಮುಖ್ಯ ಪಾತ್ರದಲ್ಲಿ ನಟನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಸಿನಿಮಾಗಳಲ್ಲಿ ನಟನೆ ಮಾಡುವುದು ಅಷ್ಟೇ ಅಲ್ಲದೆ ನಟಿ ಮೀನಾ ಅವರು ಟೆಲಿವಿಷನ್ ಶೋಗಳಲ್ಲಿ ಜಡ್ಜ್ ಆಗಿ ಮತ್ತು ಸಿಂಗರ್ ಆಗಿ ಕೂಡ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. 2009 ಜುಲೈ ತಿಂಗಳಿನಲ್ಲಿ ನಟಿ ಮೀನಾ ಅವರು ವಿದ್ಯಾಸಾಗರ್ ಎಂಬ ಬೆಂಗಳೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ನನ್ನು ಮದುವೆಯಾಗಿದ್ದರು. ಈ ಜೋಡಿಯ ಜೀವನ ತುಂಬ ಸುಖಕರವಾಗಿತ್ತು. ಈ ಜೋಡಿಗೆ 2011 ರಲ್ಲಿ ನೈನಿಕಾ ಎಂಬ ಮಗಳು ಹುಟ್ಟಿದಳು. ಹನ್ನೊಂದು ವರ್ಷಗಳ ಸುಖಸಂಸಾರದ ಇವರ ಜೀವನಕ್ಕೆ ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ.

ನಿನ್ನೆ ಜೂನ್ 28 ರಂದು ಮೀನಾ ಅವರ ಗಂಡ ಸಡನ್ನಾಗಿ ಜೀವವನ್ನು ಬಿಟ್ಟಿದ್ದಾರೆ. ಮೀನಾ ಅವರಿಗೆ 45 ವರ್ಷ ವಯಸ್ಸು ಅವರ ಗಂಡ ವಿದ್ಯಾ ಸಾಗರ್ ಗೆ ಕೇವಲ 48 ವರ್ಷ ವಯಸ್ಸಾಗಿತ್ತು. ಅತಿ ಚಿಕ್ಕ ವಯಸ್ಸಿಗೇ ಮೀನಾ ಮತ್ತು ಪುಟ್ಟ ಮಗಳನ್ನು ಬಿಟ್ಟು ವಿದ್ಯಾಸಾಗರ್ ಇಹಲೋಕ ತ್ಯಜಿಸಿದ್ದಾರೆ. ಇತ್ತೀಚೆಗಷ್ಟೇ ವಿದ್ಯಾಸಾಗರ್ ಗೆ ಕೊರೋನಾ ರೋಗ ಅಂಟಿಕೊಂಡಿತ್ತು. ಕೆಲವು ದಿನಗಳ ಹಿಂದಷ್ಟೇ ಇವರು ಚೇತರಿಸಿಕೊಂಡಿದ್ದರು. ಕೋವಿಂದ್ ಬರೋದಕ್ಕಿಂತಲೂ ಮುಂಚೆ ವಿದ್ಯಾಸಾಗರ್ ಗೆ ಶ್ವಾಸಕೋಶದ ತೊಂದರೆಯಿತ್ತು.

ಮೊದಲೇ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ವಿದ್ಯಾಸಾಗರ್ ಗೆ ಕೋವಿಡ್ ರೋಗ ಇನ್ನಷ್ಟು ಪೆಟ್ಟುಕೊಟ್ಟಿತು. ಇತ್ತೀಚೆಗೆ ಕಳೆದ 2-3 ದಿನಗಳಿಂದ ವಿದ್ಯಾಸಾಗರ್ ಗೆ ಅತಿಯಾದ ಶ್ವಾಸಕೋಶದ ತೊಂದರೆ ಉಂಟಾಗಿ ಉಸಿರಾಟದ ಪ್ರಾಬ್ಲಮ್ ಶುರುವಾಯ್ತು. ತಕ್ಷಣ ನಟಿ ಮೀನಾ ಗಂಡನನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿದ್ರು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ ವಿದ್ಯಾಸಾಗರ್ ವಿಧಿವಶರಾಗಿದ್ದಾರೆ ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸುವ ಪರಿಸ್ಥಿತಿ ಬಂದೊದಗಿದೆ.

ಗಂಡನನ್ನು ಕಳೆದುಕೊಂಡ ನಟಿ ಮೀನಾ ಅವರ ಪರಿಸ್ಥಿತಿಯನ್ನು ನಿಜಕ್ಕೂ ಕಷ್ಟಕರವಾಗಿದೆ. 10 ವರ್ಷ ವಯಸ್ಸಿನ ಪುಟ್ಟ ಮಗಳನ್ನು ಕೂಡ ನಟಿ ಮೀನಾ ಅವರೇ ಸಾಕಬೇಕು. ಮೀನಾ ಅವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ನಾವೆಲ್ಲ ಪ್ರಾರ್ಥಿಸಬೇಕು ಅಷ್ಟೆ. ನೋಡಿ ಸ್ನೇಹಿತರೆ ಇದೇ ಕಾರಣಕ್ಕೆ ಹೇಳೋದು ಚಿಕ್ಕಪುಟ್ಟ ಆರೋಗ್ಯದ ಸಮಸ್ಯೆಯನ್ನು ನಾವು ನೆಗ್ಲೆಕ್ಟ್ ಮಾಡಬಾರದು. ಇತ್ತೀಚೆಗಂತೂ ನಲವತ್ತು ರಿಂದ ಐವತ್ತು ವರ್ಷ ವಯಸ್ಸಿನೊಳಗಿನವರೇ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ ಇದಕ್ಕೆಲ್ಲ ಮೂಲ ಕಾರಣ ನಾವು ನಮ್ಮ ಆರೋಗ್ಯದ ಮೇಲೆ ತೋರುವ ನಿರ್ಲಕ್ಷ್ಯತನ

Leave a Comment

error: Content is protected !!