ಸಲ್ಮಾನ್ ಅವರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದರೂ ಕೂಡ ಪ್ರೇಮಾ ಅವರು ಅದನ್ನ ತಿರಸ್ಕರಿಸಿದ ಕಾರಣ ಏನು ಗೊತ್ತಾ

ಪ್ರೇಮಾ ಅವರನ್ನು ನಾವೆಲ್ಲ ಒಂದು ಕಾಲದಲ್ಲಿ ನಟಿಯಾಗಿ ಆರಾಧಿಸಿದರು. ಒಂದು ಕಾಲದಲ್ಲಿ ನಟಿ ಪ್ರೇಮಾ ಅವರ ಸೌಂದರ್ಯಕ್ಕೆ ಹಾಗೂ ಅವರ ಲೀಲಾಜಾಲ ಅಭಿನಯಕ್ಕೆ ಮನಸೋಲದವರೇ ಇಲ್ಲ. ಯಾವುದೇ ಗ್ಲಾಮರಸ್ ಹಾಗೂ ಹಾಟ್ ದೃಶ್ಯಗಳಲ್ಲಿ ಅಭಿನಯ ಮಾಡದೆ ನಟಿ ಪ್ರೇಮಾ ಅವರು ಚಿತ್ರರಂಗದ ನಂಬರ್ ಒನ್ ಸ್ಥಾನವನ್ನು ಗಳಿಸಿಕೊಂಡಿದ್ದರು. ಇಂತಹ ಅದ್ಭುತ ನಟಿಯರು ಸಿಗುವುದು ತುಂಬಾ ಅಪರೂಪ. ನಟಿ ಪ್ರೇಮಾ ಅವರ ಮೇಲೆ ನಮಗೆ ಇಂದೂ ಕೂಡ ತುಂಬಾ ಹೆಮ್ಮೆ ಇದೆ.

ಸುಮಾರು ಹದಿನೈದು ವರ್ಷಗಳ ಕಾಲ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಪ್ರೇಮ ಅವರು ಮೆರೆದಿದ್ದರು ಆ ಕಾಲದಲ್ಲಿ ಹೇಗಿತ್ತು ಅಂದರೆ ನಟಿ ಪ್ರೇಮಾ ಅವರು ಇಲ್ಲದೆ ಕನ್ನಡ ಚಿತ್ರರಂಗವನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯವಾಗಿತ್ತು. ಪ್ರೇಮಾ ಅವರ ಇನ್ನೊಂದು ವಿಶೇಷವಾದ ಗುಣವೇನೆಂದರೆ ಇವರು ಸಭ್ಯ ಮತ್ತು ಸುಸಂಸ್ಕೃತ ನಟಿ. ಅಸಭ್ಯ ಮತ್ತು ಅ ಶ್ಲೀಲ ದೃಶ್ಯಗಳಲ್ಲಿ ನಟಿ ಪ್ರೇಮಾ ಅವರು ಎಂದಿಗೂ ಡಾಮಿನೆನ್ಸ್ ಇಲ್ಲ. ಇಂತಹ ಮನೋಭಾವ ಇರುವ ನಟಿಯರ ಸಿಗುವುದು ತುಂಬಾ ಕಷ್ಟ.

ಆದರೆ ಈಗಿನ ಕಾಲದ ನಟಿಯರು ಹಣ ಸಿಗುತ್ತೆ ಅಂದರೆ ಎಂತಹ ಬಟ್ಟೆ ಗಳನ್ನಾಗಲಿ ಎಂತಹ ದೃಶ್ಯಗಳನ್ನಾದರೂ ಕೂಡ ಅಭಿನಯಿಸಲು ರೆಡಿ ಇರುತ್ತಾರೆ. ಈಗಿನ ಕಾಲದ ನಟಿಯರು ಹಣ ಮತ್ತು ಹೆಸರಿನ ವ್ಯಾಮೋಹದ ಬಲೆಗೆ ಬಿದ್ದು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧರಾಗಿರುತ್ತಾರೆ. ಆದರೆ ಹೇಮಾ ಅವರು ಎಂದಿಗೂ ಕೂಡ ತಮ್ಮ ಸಿನಿಮಾದಲ್ಲಿ ಚಿಕ್ಕ ಚಿಕ್ಕ ಬಟ್ಟೆಗಳನ್ನು ತೊಟ್ಟಿಲ್ಲ ಅಸಭ್ಯ ಹಾಗೂ ಅಶ್ಲೀಲ ಗ್ಲಾಮರಸ್ ಹಾಗೂ ಹಾಟ್ ದೃಶ್ಯಗಳಲ್ಲಿ ನಟಿಸಿಲ್ಲ.

ನಟಿಯರು ಗ್ಲಾಮರಸ್ ಹಾಗೂ ಹಾಟ್ ದೃಶ್ಯಗಳಲ್ಲಿ ನಟಿಸಲು ಇದ್ದರೆ ಅವರಿಗೆ ಅವಕಾಶಗಳು ಕಡಿಮೆ ಮಾಡುವ ವಾಡಿಕೆಯಿದೆ ಆದರೆ ಅವರು ಈ ಮಾತನ್ನು ಸುಳ್ಳು ಮಾಡಿದ್ದಾರೆ. ಪ್ರೇಮಾ ಅವರು ಕೇವಲ ತಮ್ಮ ಪಾತ್ರ ಅಭಿನಯಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಹೊರತು ಗ್ಲಾಮರ್ ಹಾಗೂ ಉಡುಪುಗಳಿಗೆ ಪ್ರಾಮುಖ್ಯತೆ ಕೊಟ್ಟಿಲ್ಲ. ಇದಕ್ಕೆ ಒಂದು ಉದಾಹರಣೆಯೆಂದರೆ ನಟಿ ಅವರು ತೊಂಭತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿದ್ದರು ನಟಿ ಪ್ರೇಮಾ ಅವರಿಗೆ ಸಲ್ಮಾನ್ ಖಾನ್ ಅವರ ಜೊತೆ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟಿಸಿರುವ ಆಫರ್ ಬಂದಿತ್ತು.

ಆಗ ಪ್ರೇಮಾ ಅವರು ನಿರ್ದೇಶಕರ ಬಳಿ ಕಥೆಯನ್ನು ಕೇಳಿದಾಗ ಕಥೆಯ ಒಂದು ದೃಶ್ಯದಲ್ಲಿ ನಟಿ ಪ್ರೇಮಾ ಅವರು ಸ್ವಿಮ್ಮಿಂಗ್ ಡ್ರೆಸ್ ಹಾಕಬೇಕು ಎಂದು ಹೇಳಿದ್ದರು. ಸ್ವಿಮ್ಮಿಂಗ್ ಡ್ರೆಸ್ ಹಾಕುವ ದೃಶ್ಯ ಇದೆ ಎಂಬ ಕಾರಣಕ್ಕೆ ಪ್ರೇಮಾ ಅವರು ಸಲ್ಮಾನ್ ಖಾನ್ ಅವರ ಜೊತೆ ನಟಿಸುವ ಅವಕಾಶವನ್ನು ಪ್ರೇಮಾ ಅವರು ಕೈಬಿಟ್ಟರು. ಪ್ರೇಮಾ ಅವರಿಗೆ ಇಂಥ ಹತ್ತು ಹಲವಾರು ಆಫರ್ ಗಳು ಹಿಂದಿ ಸಿನಿಮಾಗಳಿಂದ ಬಂದಿತ್ತು. ಆದರೆ ಮಾ’ದಕ ಹಾಗೂ ಹಾಟ್ ದೃಶ್ಯಗಳಲ್ಲಿ ನಾನು ಅಭಿನಯಿಸುವುದೇ ಇಲ್ಲ ಎಂದು ಖಡಾಖಂಡಿತವಾಗಿ ಪ್ರೇಮಾ ಅವರು ಹೇಳಿದ್ದರು. ಪ್ರೇಮಾ ಅವರು ಇನ್ನೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಇದ್ದಾರೆ ಅಂದರೆ ಅದಕ್ಕೆ ಕಾರಣ ಪ್ರೇಮಾ ಅವರ ನಡತೆ ಗುಣ ಮತ್ತು ಪಾತ್ರದ ಅಭಿನಯವೇ ಕಾರಣ ಹೊರತು ಗ್ಲಾಮರ್ ಹಾಗೂ ಬ್ಯೂಟಿ ಅಲ್ಲ.

Leave a Comment

error: Content is protected !!