Adipurush Collection: ಟೀಕೆಗಳ ನಡುವೆ ಕೂಡ ಆದಿಪುರುಷ್ ಮೊದಲು ದಿನ ಗಳಿಸಿದ್ದೆಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Adipurush Collection ಪ್ರಭಾಸ್(Prabhas) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಆದಿಪುರುಷ್ ಸಿನಿಮಾ ನಿನ್ನೆ ರಾಷ್ಟ್ರಾದ್ಯಂತ ಹಾಗೂ ವಿದೇಶದ ಬೇರೆ ಬೇರೆ ಭಾಗಗಳಲ್ಲಿ ಭರ್ಜರಿ 6200ಕ್ಕೂ ಅಧಿಕ ಪರದೆಗಳ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಸಿನಿಮಾ ಭರ್ಜರಿ 500 ಕೋಟಿ ಅಧಿಕ ಬಜೆಟ್ ನಲ್ಲಿ ನಿರ್ಮಾಣವಾಗಿದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.

ಸಿನಿಮಾ ಬಿಡುಗಡೆಗು ಮುನ್ನವೇ ಸಾಕಷ್ಟು ಟೀಕಾ ಟಿಪ್ಪಣಿಗಳಿಗೆ ಆಹಾರವಾಗಿತ್ತು ಆದರೆ ಬಿಡುಗಡೆಯಾದ ನಂತರ ಸಿನಿಮಾ ಚೆನ್ನಾಗಿರಬಹುದು ಎಂಬುದಾಗಿ ಪ್ರತಿಯೊಬ್ಬರೂ ಕೂಡ ಭಾವಿಸಿದ್ದರು ಆದರೆ ಅವರೆಲ್ಲರ ಭಾವನೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅದರಲ್ಲಿ ವಿಶೇಷವಾಗಿ ಪ್ರಭಾಸ್ ಅವರ ರಾಮನ ಪಾತ್ರದಿಂದ ಹಿಡಿದು ರಾವಣನ ಪಾತ್ರದವರೆಗೂ ಕೂಡ ಪಾತ್ರಗಳ ಲೇವಡಿ ಮಾಡಿದಂತಾಗಿದೆ.

ಆದಿಪುರುಷ್(Adipurush) ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಕೊಂಚಮಟ್ಟಿಗೆ ಮೊದಲ ದಿನ ನಗುವಿನ ಪರಿಸ್ಥಿತಿಯನ್ನು ಕಂಡಿರಬಹುದು ಆದರೆ ಸಿನಿಮಾ ವಿಮರ್ಶಕದ ವಿಚಾರದಲ್ಲಿ ಸಂಪೂರ್ಣವಾಗಿ ಸೋತಿದೆ ಎಂಬುದಾಗಿ ಅರ್ಥವಾಗಿದೆ. ಹಾಗಿದ್ದರೆ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ತಿಳಿಯೋಣ ಬನ್ನಿ.

Om Raut ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಮೊದಲ ದಿನ ಭರ್ಜರಿ 95 ಕೋಟಿ ಕಲೆಕ್ಷನ್ ಮಾಡಿದೆ ಎಂಬುದಾಗಿ ತಿಳಿದು ಬಂದಿದ್ದು ಚಿತ್ರವನ್ನು ಚೆನ್ನಾಗಿ ಮಾಡಿದರೆ ಮೊದಲ ದಿನವೇ 200 ಕೋಟಿ ಅಧಿಕ ಕಲೆಕ್ಷನ್ ಮಾಡಬಹುದಾಗಿತ್ತು ಎಂಬುದಾಗಿ ಸಿನಿಮಾ ಪಂಡಿತರು ಭವಿಷ್ಯ ನಡೆದಿದ್ದಾರೆ. ಆದರೆ ಈಗ ಕಾಲ ಮಿಂಚಿ ಹೋಗಿದ್ದು ಹೂಡಿರುವಂತಹ ಬಂಡವಾಳಕ್ಕೆ ಸರಿಯಾದ ಕಲೆಕ್ಷನ್ ಸಿಕ್ಕರೆ ಸಾಕು ಎನ್ನುವಂತಾಗಿದೆ.

Leave A Reply

Your email address will not be published.

error: Content is protected !!