ಆಲಿಯಾ ಭಟ ಧರಿಸುವ ಸ್ಟ್ರಾಪ್‌ಲೆಸ್ ಮಿನಿ ಡ್ರೆಸ್ ನ ಬೆಲೆ ಎಷ್ಟು ಗೊತ್ತಾ ಕೇಳಿದರೆ ದಂಗಾಗುತ್ತೀರಿ.

ಸಿನಿಮಾದ ಕಥೆ, ಛಾಯಾಗ್ರಹಣ ಮೊದಲಾದ ವಿಷಯಗಳನ್ನ ನೆನಪಿನಲಿಟ್ಟುಕೊಳ್ಳುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾದ ನಟ ನಟಿಯರು ತೊಡುವ ಬಟ್ಟೆಯನ್ನು ಮಾತ್ರ ಜನ ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುತ್ಟಾರೆ. ಅದರಲ್ಲೂ ಮಹಿಳೆಯರಂತೂ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಲಾವಿದರು ತೊಡುವ ಬಟ್ಟೆಯ ಬಗ್ಗೆ ಬಹಳ ಆಕರ್ಷಿತರಾಗಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ರಿಲ್ಸ್ ಮಾಡಲು ಅವಕಾಶ ಬಂದಾಗಿನಿಂದ ಸೆಲಿಬ್ರೆಟಿಗಳು ಹಾಕಿಕೊಳ್ಳುವಂಥ ಬಟ್ಟೆಯನ್ನು ಹಾಕಿಕೊಂಡು ಜನಸಾಮಾನ್ಯರೂ ಕೂಡ ರಿಲ್ಸ್ ಗಳನ್ನ ಮಾಡುತ್ತಾರೆ. ಸೆಲಿಬ್ರೆಟಿಗಳು ತೊಡುವ ಬಟ್ಟೆಗಳು ಕೆಲವೊಮ್ಮೆ ಪ್ರಶಂಸೆಗಳಿಸಿಕೊಂಡರೆ ಮತ್ತೊಮ್ಮೆ ತೆಗಳಿಕೆಗೆ ಕಾರಣವಾಗುತ್ತವೆ.

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮೈಕಾಣಿಸುವಂಥ ಬಟ್ಟೆಯನ್ನ ತೊಟ್ಟರೆ ಅಥವಾ ಆ ಬಟ್ಟೆ ಅಸಹ್ಯವಾಗಿದ್ದರೂ ಯಾರೂ ಅಷ್ಟಾಗಿ ಮಾತನಾಡುವುದಿಲ್ಲ, ಸಿನಿಮಾ ತಾನೆ ಅಂತ ಸುಮ್ಮನಾಗುತ್ತಾರೆ. ಆದರೆ ಪಬ್ಲಿಕ್ ನಲ್ಲಿ ಕಲಾವಿದರು ಇಂಥ ಬಟ್ಟೆಯನ್ನ ಹಾಕಿಕೊಂಡರೆ ಸಾಕಷ್ಟು ಬಾರಿ ಅವರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅದರಲ್ಲೂ ಸ್ಟಾರ್ ನಟಿಯರ ಉಡುಗೆ ತೊಡುಗೆಯ ಬಗ್ಗೆಯಂತೂ ಬಹಳ ಜಾಗ್ರತವಾಗಿರುತ್ತಾರೆ ಪ್ರೇಕ್ಷಕರು. ಹಾಗಾಗಿ ಸೆಲಿಬ್ರೆಟಿಗಳೂ ಕೂಡ ಈ ವಿಷಯದಲ್ಲಿ ಬಹಳ ಮುತುವರ್ಜಿವಹಿಸಬೇಕಾಗುತ್ತದೆ. ಇಲ್ಲವಾದರೆ ಇಂದು ಆಲಿಯಾ ಭಟ್ ವಿಷಯದಲ್ಲಿ ಆದ ಹಾಗೆ ಆಗಬಹುದು. ಏನಂತೀರಾ? ಹೇಳ್ತೀವಿ ಕೇಳಿ.

ಬಾಲಿವುಡ್ ನ ಸ್ಟಾರ್ ನಟಿ ಎನಿಸಿರುವ ಆಲಿಯಾ ಭಟ್ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಧರಿಸಿ ಬಂದಿದ್ದ ಬಟ್ಟೆಯ ಬಗ್ಗೆ ಸಾಕಷ್ಟು ಟ್ರೋಲ್ ಆಗಿದೆ. ನಟಿ ಅಲಿಯಾ ಭಟ್ ಇದೀಗ ಬಾಲಿವುಡ್ ನಲ್ಲಿ ಮಾತ್ರವಲ್ಲ ಸೌತ್ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ. ಈ ವರ್ಷ ರಾಜಮೌಳಿಯ ಆರ್ ಆರ್ ಆರ್ ಚಿತ್ರದಲ್ಲಿ ಆಲಿಯ ಭಟ್ ನಟಿಸಿ ಸೌತ್ ಸಿನಿ ಪ್ರಿಯರಿಗೂ ಹತ್ತಿರವಾಗಿದ್ದಾರೆ. ಸ್ಟೂಡೆಂಟ್ ಅಫ್ ದ ಇಯರ್ ಚಿತ್ರದ ಮೂಲಕ ತೆರೆಗೆ ಬಂದ ಈ ಬೆಡಗಿಗೆ ಇರುವ ಅಭಿಮಾನಿಗಳ ಸಂಖ್ಯೆ ಅಪಾರ. ಅವರ ಸಿನಿಮಾಗಳೂ ಅಷ್ಟೇ, ಉತ್ತಮ ಕಥಾ ಹಂದರವನ್ನೂ ಹೊಂದಿದ್ದು, ಇದುವರೆಗಿನ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ.

ಇಷ್ಟೇಲ್ಲಾ ಇದ್ರೂ ಆಲಿಯಾ ಭಟ್ ಸದಾ ಟ್ರೋಲ್ ಆಗ್ತಾನೇ ಇರ್ತಾರೆ. ಅವರ ಹೆಸರಿನಲ್ಲಿ ಸಾಕಷ್ಟು ಜೋಕ್ ಗಳೂ ಬರುತ್ತವೆ ಸಾಮಾಜಿಕ ಜಾಲತಾಣಗಳಲ್ಲಿ. ಇದಕ್ಕೇಲ್ಲಾ ತಲೆ ಕೆಡಿಸಿಕೊಳ್ಳಲ್ಲ ಬಿಡಿ ಆಲಿಯಾ. ಇತ್ತೀಚಿಗೆ ರಣಬೀರ್ ಕಪೂರ್ ಜೊತೆ ಹಸೆಮಣೆ ಏರಿರುವ ಆಲಿಯಾ ಸಿನಿಮಾಗಳಲ್ಲಿ ಈಗಲೂ ಬ್ಯುಸಿ. ಗಂಗೂಬಾಯಿ ಚಿತ್ರದ ಅಭಿನಯಕ್ಕೆ ಅಭಿಮಾನಿಗಳು ಶಹಬ್ಭಾಷ್ ಹೇಳಿದ್ದಾರೆ. ಇದರ ಜೊತೆಗೆ ಇತ್ತೀಚಿಗೆ ನಡೆದ ಆದಿತ್ಯ ಸೀಲ್ ಮತ್ತು ಅನುಷ್ಕಾ ರಂಜನ್ ಅವರ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ಆಲಿಯಾ ಭಟ್ ಅವರು ಧರಿಸಿದ್ದ ಬಟ್ಟೆ ಮಾತ್ರ ಅಭಿಮಾನಿಗಳ ಕಣ್ಣನ್ನು ಸೆಳೆದಿದ್ದಾಳೆ.

ಆಲಿಯಾ ಭಟ್ ಧರಿಸಿದ್ದ ಸ್ಟ್ರಾಪ್‌ಲೆಸ್ ಮಿನಿ ಡ್ರೆಸ್ ಇದೀಗ ಎಲ್ಲೆಡೆ ಸುದ್ದಿ ಆಗುತ್ತಿದೆ. ಈ ಒಂದು ವಿಶೇಷ ಡ್ರೆಸ್ನಿ ನ ನಿಖರ ಬೆಲೆ ಕೇಳಿದರೆ ನೀವೆಲ್ಲ ಶಾಕ್ ಆಗೋದು ಖಚಿತ. 29 ವರ್ಷ ವಯಸ್ಸಿನ ಬಾಲಿವುಡ್ ತಾರೆ ಆಲಿಯಾ ಭಟ್ ಚಿಕ್ಕ ಕೆಂಪು ಹೂವಿನ ಮಿನಿ ಡ್ರೆಸ್‌ ಹಾಕಿ ಬೆರಗುಗೊಳಿಸುವ ಪ್ರದರ್ಶನವನ್ನು ನೀಡಿದರು. ಆಲಿಯಾ ತನ್ನ ಉಡುಪನ್ನು ಮ್ಯಾಗ್ಡಾ ಬುಟ್ರಿಮ್‌ನಿಂದ ಮ್ಯಾಚಿಂಗ್ ಬ್ಲೇಜರ್ ಮತ್ತು ಕೆಂಪು ಹೈ ಹೀಲ್ಸ್‌ನೊಂದಿಗೆ ಮ್ಯಾಚ್ ಮಾಡಿದ್ದಳು. ಅವಳ ಡ್ರೆಸ್‌ಗಳು ಅಲೆಯಂತೆ ವಿನ್ಯಾಸಗೊಂಡಿದ್ದವು. ಮ್ಯಾಗ್ಡಾ ಬುಟ್ರಿಮ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಆಲಿಯಾ ಅವರ ಈ ವಿನ್ಯಾಸದ ಉಡುಗೆ ಗೆ 1,41,072 (USD 1,855) ವೆಚ್ಚವಾಗಲಿದೆ. ಆಲಿಯಾಳ ಜಾಕೆಟ್ ಅನ್ನು ಕೆಂಪು ಗುಲಾಬಿಗಳ ಪ್ರಿಂಟ್‌ನಲ್ಲಿ ಟುಕ್ಸೆಡೊ ಶೈಲಿಯ ಸಿಲ್ಕ್ ಬ್ಲೇಜರ್ ಎಂದು ಕರೆಯಲಾಗುತ್ತದೆ ಮತ್ತು ನಿಮಗೆ 1,52,479 ರೂಪಾಯಿಗಳು(USD 2,005) ವೆಚ್ಚವಾಗುತ್ತದೆ. ಒಟ್ಟಾರೆ ಆಲಿಯಾ ಭಟ್ ಮೂರು ಲಕ್ಷ ರೂಪಾಯಿ ಗಳನ್ನು ಖರ್ಚು ಮಾಡಿ ಈ ಕೆಂಪು ಬಣ್ಣದ ಮಿನಿ ಡ್ರೆಸ್, ಜಾಕೆಟ್ ಮತ್ತು ಕೆಂಪು ಹೈ ಹೀಲ್ಸ್‌ ಅನ್ನು ಖರೀದಿಸಿದ್ದಾಳೆ.

Leave a Comment

error: Content is protected !!