ಭೂಮಿ ಪೂಜೆ ಮಾಡಿ ಹೊಸ ಮನೆ ಕಟ್ಟಿಸೋಕೆ ಪ್ರಾರಂಭಿಸಿದ ನಟಿ ಅನುಶ್ರೀ. ಅನುಶ್ರೀ ಕಟ್ಟಲಿರುವ ಹೊಸಮನೆಯ ಅಂದಾಜು ‍ಮೊತ್ತ ಎಷ್ಟು ಕೋಟಿ ಗೊತ್ತಾ

ಪ್ರತಿಯೊಬ್ಬ ಮನುಷ್ಯನಿಗೂ ಒಂದು ಒಳ್ಳೆಯ ಮನೆಯನ್ನು ಕಟ್ಟಿಸಬೇಕು ಎಂಬ ಮಹದಾಸೆ ಇದ್ದೇ ಇರುತ್ತೆ. ಆದರೆ ಈಗಿನ ಕಾಲದಲ್ಲಿ ಲ್ಯಾಂಡ್ ಪ್ರಾಪರ್ಟಿ ಅಥವಾ ಸೈಟ್ ಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನರು ಮನೆ ಕಟ್ಟೋದು ಇರಲಿ 30*40 ಸೈಟ್ ಖರೀದಿ ಮಾಡುವುದು ಕೂಡ ಇದೀಗ ಕಷ್ಟಕರವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಒಂದು ಜಮೀನು ಖರೀದಿ ಮಾಡಿ ಅದೇ ಜಮೀನಿನಲ್ಲಿ ಮನೆ ಕಟ್ಟಬೇಕೆಂದರೆ ಕೋಟ್ಯಧೀಶರೇ ಆಗಿರಬೇಕು. ಸಾಮಾನ್ಯ ಜನರು ಬೆಂಗಳೂರಿನಲ್ಲಿ ಸೈಟ್ ಖರೀದಿ ಮಾಡಿ ಮನೆ ಕಟ್ಟೋದು ಕನಸಿನ ಮಾತಾಗಿದೆ.

ಇದೀಗ ಕನ್ನಡದ ಖ್ಯಾತ ನಿರೂಪಕಿ ಎಂದೇ ಹೆಸರಾಗಿರುವ ನಟಿ ಅನುಶ್ರೀ ಅವರು ಬೆಂಗಳೂರಿನ ಜಯನಗರ ಹೌಸಿಂಗ್ ಸೋಸೈಟಿ ಲೇಔಟ್‌ನ ಸುಬ್ರಮಣ್ಯಪುರಂನಲ್ಲಿ ಜಾಗ ಒಂದನ್ನು ಖರೀದಿ ಮಾಡಿದ್ದರು ಈಗ ನಟಿ ಅನುಶ್ರೀ ಅವರು ತಮ್ಮ ಜಮೀನಿಗೆ ಹೋಗಿ ಪೂಜೆ ಮಾಡಿಸಿದ್ದಾರೆ. ಅದೇ ಜಮೀನಿನಲ್ಲಿ ಹೊಸ ಮನೆ ಕಟ್ಟಿಸೋಕೆ ಅನುಶ್ರೀ ಮುಂದಾಗಿದ್ದಾರೆ. ಸಾಮಾನ್ಯ ಕೆಳ ಮಧ್ಯಮ ವರ್ಗದ ಕುಟುಂಬದ ವರ್ಗದಲ್ಲಿ ಹುಟ್ಟಿ ಬೆಳೆದು ಸ್ವಂತ ಪರಿಶ್ರಮದಿಂದ ಬೆಳೆದು ಕರ್ನಾಟಕದಲ್ಲಿ ಅನುಶ್ರೀ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ತಂದೆಯ ಸಹಾಯವಿಲ್ಲದೆ ತಾಯಿಯೊಬ್ಬಳ ಸಹಕಾರದಿಂದಲೇ ಅನುಶ್ರೀ ಹಗಲು ರಾತ್ರಿ ಕ ಷ್ಟಪಟ್ಟು ಪರಿಶ್ರಮ ವಹಿಸಿ ಇದೀಗ ಕರ್ನಾಟಕದ ನಂಬರ್ ಒನ್ ನಿರೂಪಕಿ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಅನುಶ್ರೀ ತಮ್ಮ ಜೀವನದಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಜಯನಗರದ ತಮ್ಮ ಜಮೀನಿನಲ್ಲಿ ಮನೆ ಕಟ್ಟೋಕೆ ರೆಡಿಯಾಗಿದ್ದಾರೆ. ಬೆಂಗಳೂರಿನ ಜಯನಗರ ಏರಿಯಾದಲ್ಲಿ ಮನೆ ಕಟ್ಟೋದು ನಿಜಕ್ಕೂ ಸಾಮಾನ್ಯ ವಿಷಯವಲ್ಲ. ಏಕೆಂದರೆ ಜಯನಗರ ದಂತಹ ಏರಿಯಾದಲ್ಲಿ ವಿಶಾಲವಾದ 60* 40 ಸೈಟ್ ತೆಗೆದುಕೊಳ್ಳಬೇಕೆಂದರೆ ಸುಮಾರು ಮೂರರಿಂದ ನಾಲ್ಕು ಕೋಟಿ ರುಪಾಯಿಗಳು ಬೇಕೇ ಬೇಕು.

ಸೈಟ್ ತೆಗೆದುಕೊಳ್ಳೋಕೆ ಮೂರು -ನಾಲ್ಕು ಕೋಟಿ ರುಪಾಯಿಗಳು ಬೇಕು. ಹಾಗೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಈ ದುಬಾರಿ ಜೀವನದಲ್ಲಿ ಸ್ವಂತ ಮನೆ(ಡುಪ್ಲೆಕ್ಸ್ ಮನೆ) ಕಟ್ಟೋಕೆ ಒಂದರಿಂದ ಎರಡು ಕೋಟಿ ರುಪಾಯಿಗಳು ಬೇಕೇ ಬೇಕು. ನಟಿ ಅನುಶ್ರೀ ಅವರು ಸುಮಾರು ಐದ ರಿಂದ ಆರು ಕೋಟಿ ರೂಪಾಯಿಗಳನ್ನು ಖರ್ಚುಮಾಡಿ ಜಯನಗರದಲ್ಲಿ ಅರಮನೆ ಕಟ್ಟೋಕೆ ಮುಂದಾಗಿದ್ದಾರೆ. ನಿಜಕ್ಕೂ ಸ್ವಂತ ದುಡಿಮೆಯಿಂದ ತಮ್ಮ ತಮ್ಮ ದುಡ್ಡಿನಲ್ಲಿಯೇ ಕೋಟ್ಯಂತರ ಬೆಲೆಬಾಳುವ ಮನೆ ಕಟ್ಟುವುದು ಸಾಧನೆಯೇ ಸರಿ. ನಟಿ ಅನುಶ್ರೀ ಅವರು ಒಬ್ಬ ಹೆಣ್ಣಾಗಿ ತಮ್ಮ ಸ್ವಂತ ದುಡ್ಡಿನಲ್ಲಿ ಅರಮನೆ ಕಟ್ಟಿಸಲು ಮುಂದಾಗಿರುವುದು ನಿಜಕ್ಕೂ ಗ್ರೇಟ್. ಅನುಶ್ರೀ ಅವರ ಈ ಸತ್ಕಾರ್ಯಕ್ಕೆ ನಾವೆಲ್ಲ ಶುಭ ಕೋರೋಣ.

Leave a Comment

error: Content is protected !!