ಅರ್ಜುನ್ ಸರ್ಜಾ ಮಗಳ ಹುಟ್ಟುಹಬ್ಬದ ಅದ್ಧೂರಿ ಸಂಭ್ರಮಾಚರಣೆ ಹೇಗಿತ್ತು ನೋಡಿ

ಅರ್ಜುನ್ ಸರ್ಜಾ ಅವರು ದಕ್ಷಿಣ ಭಾರತದ ಪ್ರಸಿದ್ಧ ನಟ ನಿರ್ದೇಶಕ ಮತ್ತು ನಿರ್ಮಾಪಕ. ಚಿಕ್ಕ ವಯಸ್ಸಿನಲ್ಲಿಯೇ ಆ್ಯಕ್ಷನ್ ಹೀರೋ ಆಗಿ ದಕ್ಷಿಣ ಭಾರತದಲ್ಲೇ ಸ್ಟಾರ್ ಪಟ್ಟ ಪಡೆದುಕೊಂಡ ಅತ್ಯದ್ಭುತ ನಟನೆಂದರೆ ಅದು ಅರ್ಜುನ್ ಸರ್ಜಾ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿ ಅರ್ಜುನ್ ಸರ್ಜಾ ಅವರು ಸೈ ಎನಿಸಿಕೊಂಡಿದ್ದಾರೆ. ಬ್ರೂಸ್ ಲೀಯವರ ಎಂಟರ್ ದಿ ಡ್ರ್ಯಾಗನ್ ಚಿತ್ರವನ್ನು ನೋಡಿ ಪ್ರೇರೇಪಿತರಾಗಿದ್ದ ಅರ್ಜುನ್ ಸರ್ಜಾ ಅವರು ಫೈಟಿಂಗ್ ಕಲಿಯೋಕೆ ಶುರುಮಾಡಿದ್ರು.

ಅರ್ಜುನ್ ಸರ್ಜಾ ಅವರು ಸಿನಿಮಾಗಳಲ್ಲಿ ಮಾಡಿರುವ ಆ್ಯಕ್ಷನ್ ದೃಶ್ಯಗಳು ಮೈ ಜುಮ್ ಎನಿಸುವಂತೆ ಇರುತ್ತೆ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಆ್ಯಕ್ಷನ್ ಕಿಂಗ್ ಎಂದೇ ಕರೆಯುತ್ತಾರೆ.ಒಟ್ಟಾರೆ 150 ಚಿತ್ರಗಳಲ್ಲಿ ಅರ್ಜುನ್ ಸರ್ಜಾ ಅವರು ಅಭಿನಯ ಮಾಡಿದ್ದಾರೆ. ಅರ್ಜುನ್ ಸರ್ಜಾ ಅವರು ಕನ್ನಡ ಹಿರಿಯ ನಟರಾಗಿದ್ದ ರಾಜ್ ಶೇಖರ್ ಅವರ ಮಗಳು ನಿವೇದಿತಾ ರನ್ನು ಮದುವೆಯಾಗಿದ್ದಾರೆ. ಅರ್ಜುನ್ ಸರ್ಜಾ ಮತ್ತು ನಿವೇದಿತಾಗೆ ಐಶ್ವರ್ಯ ಮತ್ತು ಅಂಜನಾ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ನೋಡೋಕೆ ತುಂಬ ಸುಂದರವಾಗಿದ್ದಾರೆ.

ಇಬ್ಬರೂ ಹೆಣ್ಣು ಮಕ್ಕಳು ಯಾವ ಹೀರೋಯಿನ್ ಗೂ ಕಡಿಮೆಯಿಲ್ಲ. ಅರ್ಜುನ್ ಸರ್ಜಾ ಹಿರಿಯ ಮಗಳು ಐಶ್ವರ್ಯ ನಟಿಯಾಗಿ ಈಗಾಗಲೇ ಎರಡು ಸಿನಿಮಾದಲ್ಲಿ ನಟನೆ ಮಾಡಿದ್ದಾಳೆ. 2013 ರಲ್ಲಿ ಪಟ್ಟಟು ಯಾನಾಯಿ ಎಂಬ ತಮಿಳು ಸಿನಿಮಾದಲ್ಲಿ ಮತ್ತು 2018 ರಲ್ಲಿ ಪ್ರೇಮ ಬರಹ ಎಂಬ ಕನ್ನಡ ಸಿನಿಮಾದಲ್ಲಿ ಐಶ್ವರ್ಯ ನಟನೆ ಮಾಡಿದ್ದಾಳೆ. ದೊಡ್ಡ ಮಗಳು ಸಿನಿಮಾದಲ್ಲಿ ಹೆಸರು ಮಾಡುತ್ತಿದ್ದಾಳೆ ಮತ್ತು ಅರ್ಜುನ್ ಸರ್ಜಾ ಅವರ ಚಿಕ್ಕ ಮಗಳು ಸಂಜನಾ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾಳೆ.

ಅಂಜನಾ ಅರ್ಜುನ್ ಬೆಂಗಳೂರಿನಲ್ಲೇ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ್ದಾಳೆ ಮತ್ತು ಫ್ಯಾಶನ್ ಡಿಸೈನಿಂಗ್ ನಲ್ಲಿ ಡಿಗ್ರಿ ಕೂಡ ಪಡೆದಿದ್ದಾರೆ. ವಿದ್ಯಾಭ್ಯಾಸದ ಜೊತೆಜೊತೆಗೆ ಸಂಜನಾ ನೃತ್ಯವನ್ನು ಕೂಡ ಕಲಿತಿದ್ದಾಳೆ. ಅಂಜನಾ ಅರ್ಜುನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಇವಳು ಇದೀಗ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ತನ್ನ ವೈಯಕ್ತಿಕ ಫೋಟೋಗಳನ್ನು ಮತ್ತು ಡ್ಯಾನ್ಸ್ ಗಳ ವೀಡಿಯೋಗಳನ್ನು ಮಾಡುವುದರ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದಾಳೆ.

ಏಪ್ರಿಲ್ 21 ರಂದು ಸಂಜನಾ ತನ್ನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಕರೆಸಿಕೊಂಡಿದ್ದಾಳೆ. ಈ ವರ್ಷ ಸಂಜನಾ ಅರ್ಜುನ್ 26ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಸಂಜನಾ ಅರ್ಜುನ್ ಗೆ ತಂದೆ ಅರ್ಜುನ್ ಸರ್ಜ ಮತ್ತು ಅಕ್ಕ ಐಶ್ವರ್ಯ ಅರ್ಜುನ್ ಸರ್ ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಅಂಜನಾ ರೂಮ್ ಅನ್ನು ಹೂವು ಬಲೂನು ಗಳಿಂದ ಭರ್ಜರಿಯಾಗಿ ಡೆಕೋರೆಟ್ ಮಾಡಿದ್ದಾರೆ. ಅಂಜನಾ ಗೆ ಗೊತ್ತಿಲ್ಲದೆ ರೂಮನ್ನು ಡೆಕೋರೆಟ್ ಮಾಡಿ ಕೇಕ್ ಗಳನ್ನು ತಂದು ಅಂಜನಾ ಗೆ ದೊಡ್ಡದಾದ ಸರ್ಪ್ರೈಸ್ ನೀಡಿದ್ದಾರೆ. ಅಂಜನಾ ಗೆ ಅರ್ಜುನ್ ಮತ್ತು ಕುಟುಂಬದವರು ಹುಟ್ಟುಹಬ್ಬದ ದಿನ ಸರ್ಪ್ರೈಸ್ ಕೊಟ್ಟಿರುವ ದೃಶ್ಯ ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Leave A Reply

Your email address will not be published.

error: Content is protected !!