Ashwini Puneeth Rajkumar: ತಮ್ಮ ಪತ್ನಿ ಅಶ್ವಿನಿ ಅವರಿಗೆ ಅಪ್ಪು ಕೊಡಿಸಿದ್ದ ಲ್ಯಾಂಬೋರ್ಗಿನಿ ಕಾರಿನ ಬೆಲೆ ಎಷ್ಟು ಗೊತ್ತಾ?

Puneeth Rajkumar ಅಪ್ಪು ಹಾಗೂ ಅಶ್ವಿನಿ(Ashwini Puneeth) ಅವರ ಮದುವೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲವ್ ಮ್ಯಾರೇಜ್ ಆಗಿದ್ದು ಇಬ್ಬರೂ ಕೂಡ ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು. ಇವರಿಬ್ಬರ ಲವ್ ಸ್ಟೋರಿ ಇಂದಿಗೂ ಕೂಡ ಪ್ರಸ್ತುತವಾಗಿದ್ದು ಪ್ರತಿಯೊಬ್ಬರೂ ಕೂಡ ಇಷ್ಟಪಡುವಂತಹ ಲವ್ ಸ್ಟೋರಿ ಆಗಿದೆ. ಆದರ್ಶ ದಂಪತಿಗಳಾಗಿ ಕೂಡ ಇವರಿಬ್ಬರೂ ಎಲ್ಲರಿಗೂ ಇಷ್ಟ ಆಗುತ್ತಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power star Puneeth Rajkumar) ರವರು ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದು ಸಿನಿಮಾ ಚಿತ್ರಿಕರಣದ ಜೊತೆಗೆ ತಮ್ಮ ಕುಟುಂಬಕ್ಕೆ ಕೂಡ ಸಂಪೂರ್ಣವಾದ ಸಮಯವನ್ನು ನೀಡುತ್ತಿದ್ದರು ಎನ್ನುವುದು ಪ್ರತಿಯೊಬ್ಬರು ಕೂಡ ಮೆಚ್ಚಿ ಕೊಳ್ಳಲೇ ಬೇಕಾಗಿರುವಂತಹ ವಿಚಾರ. ಸಾಕಷ್ಟು ಬಾರಿ ಸಫಾರಿ ಪ್ರವಾಸಗಳನ್ನು ಕುಟುಂಬದ ಜೊತೆಗೆ ಮಾಡಿರುವುದು ಕೂಡ ಹಲವಾರು ಫೋಟೋ ಹಾಗೂ ವಿಡಿಯೋಗಳಲ್ಲಿ ಕಂಡು ಬರುತ್ತದೆ.

ಇನ್ನು ತಮ್ಮ ಪತ್ನಿಯನ್ನು ಸಾಕಷ್ಟು ಇಷ್ಟಪಡುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗಾಗಿ ಲ್ಯಾಂಬೋರ್ಗಿನಿ(Lamborghini) ಸಂಸ್ಥೆಯ ದುಬಾರಿ ಕಾರ್ ಆಗಿರುವ ಉರುಸ್ ಅನ್ನು ಕೂಡ ಖರೀದಿಸಿದ್ದರು. ಅದು ಕೂಡ ಮಹಿಳಾ ದಿನಾಚರಣೆಯ ದಿನದಂದೆ ಅರ್ಥಪೂರ್ಣ ರೀತಿಯಲ್ಲಿ ಆ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಉರುಸ್ ಕಾರ್ ಅನ್ನು ತಮ್ಮ ಪತ್ನಿಗೆ ಉಡುಗೊರೆಯ ರೂಪದಲ್ಲಿ ಖರೀದಿಸಿದ್ದರು.

ಇನ್ನು ಈ ಕಾರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ರವರಿಗೆ ಬರೋಬ್ಬರಿ 3.9 ಕೋಟಿ ರೂಪಾಯಿಗೂ ಅಧಿಕ ಬೆಲೆಯನ್ನು ನೀಡಿ ಖರೀದಿಸಿದ್ದರು ಎಂಬುದಾಗಿ ತಿಳಿದು ಬಂದಿದೆ. ಈ ಕಾರಿನ ಮೂಲಕ ಕನ್ನಡ ಚಿತ್ರರಂಗದ ಅತ್ಯಂತ ದುಬಾರಿ ಕಾರ್ ಅನ್ನು ಹೊಂದಿರುವ ನಟರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕೂಡ ಕಾಣಿಸಿಕೊಂಡಿದ್ದರು.

Leave A Reply

Your email address will not be published.

error: Content is protected !!