ಕನ್ನಡದ ಈ ಮಿಲ್ಕ್ ಬ್ಯೂಟಿಯ ವರ್ಕೌಟ್ ಗೆ ಅಭಿಮಾನಿಗಳು ಫುಲ್ ಪಿಧಾ.!

ಕನ್ನಡ ಚಿತ್ರರಂಗದಲ್ಲಿ ಅನೇಕ ನಟಿಯರು ತಮ್ಮ ನಟನೆಯಿಂದ ಅವರನ್ನು ತೋರಿಸಿಕೊಂಡಿದ್ದಾರೆ. ಅಂತಹ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಟಾಪ್ ನಟಿಯರಲ್ಲಿ ಇವರು ಸಹ ಒಬ್ಬರು. ಅವರು ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ನೋಡಲು ಬಹಳ ಸುಂದರವಾಗಿ ಇದ್ದಾರೆ. ಅನೇಕ ನಟಿಯರು ವರ್ಕೌಟ್ ಮಾಡುತ್ತಾರೆ. ಅಂತಹವರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ನಾವು ಇಲ್ಲಿ ಆಶಿಕಾ ರಂಗನಾಥ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್ ಚಂದನವನದ ಪ್ರತಿಭಾನ್ವಿತ ನಟಿ. 2001ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕ್ರೇಜಿಬಾಯ್ ಚಿತ್ರದಿಂದ ತಮ್ಮ ಪಯಣವನ್ನು ಆರಂಭಿಸಿದರು. 1996 ಆಗಸ್ಟ್ 5ರಂದು ಹಾಸನದಲ್ಲಿ ಜನಿಸಿದರು. ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಸುಧಾ ಗೃಹಿಣಿ. ಇವರ ಹಿರಿಯ ಸಹೋದರಿ ಅನುಷಾ ಕಿರುತೆರೆಯ ಪ್ರಮುಖ ನಟಿ. ತುಮಕೂರಿನಲ್ಲಿ ಬೆಳೆದ ಇವರು ಪಿಯುಸಿ ಶಿಕ್ಷಣಕ್ಕೆ ಬೆಂಗಳೂರಿಗೆ ಬಂದರು.

ಕೋರಮಂಗಲದ ಜ್ಯೋತಿನಿವಾಸ ಪಿಯುಸಿ ಮುಗಿಸಿ ಎಂ.ಇ. ಎಸ್. ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು. ಹಲವಾರು ನೃತ್ಯ ಪ್ರಕಾರಗಳಲ್ಲಿ ಪರಿಣತಿ ಹೊಂದಿರುವ ಇವರು ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ. 2014ರಲ್ಲಿ ಜರುಗಿದ ‘ ಕ್ಲೀನ್ ಆಂಡ್ ಕ್ಲಿಯರ್ ಫ್ರೆಶ್ ಫೇಸ್ ‘ ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದರು. ನಿರ್ದೇಶಕ ಮಹೇಶ್ ಬಾಬು ಅವರು ಇವರನ್ನು ಕ್ರೇಜಿಬಾಯ್ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದರು. ನಂತರ ಮಾಸ್ ಲೀಡರ್, ಮುಗುಳುನಗೆ, ರಾಜು ಕನ್ನಡ ಮೀಡಿಯಂ ಮುಂತಾದ ಚಿತ್ರಗಳಲ್ಲಿ ನಟಿಸಿ ಚಿತ್ರರಂಗಕ್ಕೆ ಬಂದರು.

2018ರಲ್ಲಿ ಶರಣ್ ಮತ್ತು ಆಶಿಕಾ ಅಭಿನಯದಲ್ಲಿ ಮೂಡಿ ಬಂದ ರಾಂಬೋ-2 ಚಿತ್ರ ಅಭೂತಪೂರ್ವ ಪ್ರದರ್ಶನ ಕಂಡಿತು. ಈ ಚಿತ್ರದ ಚುಟುಚುಟು ಹಾಡು ಯುಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಹಾಡುಗಳಲ್ಲಿ ಒಂದು. ಹಾಗೆಯೇ ಆಶಿಕಾ ರಂಗನಾಥ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಚಟುವಟಿಕೆಯಿಂದ ಇರುತ್ತಾರೆ. ಇವರು ಜಿಮ್ ನಲ್ಲಿ ದಿನವೂ ವರ್ಕ್ ಔಟ್ ಮಾಡುತ್ತಾರೆ. ಇದರಿಂದ ಇವರು ಒಳ್ಳೆಯ ಪರ್ಸನಾಲಿಟಿ ಹೊಂದಿದ್ದಾರೆ.

Leave a Comment

error: Content is protected !!