ನಿಮಗೆ ಸನ್ಮಾನ ಮಾಡುತ್ತೇವೆ ಎಂದು ತಿಳಿದಾಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನಡೆದುಕೊಂಡ ರೀತಿ ಹೇಗಿತ್ತು ನೋಡಿ!

ವಿಧಿಯ ಆಟಕ್ಕೆ ಎಲ್ಲರೂ ಬಲಿಯಾಗಲೇಬೇಕು. ಹಣೆಬರಹ ಇದ್ದ ಹಾಗೆ ಜೀವನ.. ನಮಗೆ ಅಪ್ಪು ಅಂತಹ ಅನರ್ಘ್ಯ ರತ್ನವನ್ನಾ ಜಾಸ್ತಿ ಸಮಯ ನಮ್ಮೊಂದಿಗೆ ಇಟ್ಟುಕೊಳ್ಳಲು ಆಗಲೇ ಇಲ್ಲ. ಇದೆ ಕಾರಣಕ್ಕೆ ದಿನವೂ ವಿಧಿಯನ್ನು ದೂಷಿಸಿ ಎಲ್ಲರೂ ಕಣ್ಣೀರಿಡುಟ್ಟಿದ್ದಿದ್ದಾರೆ. ಯಾಕಂದ್ರೆ ನಾವು ಕಳೆದುಕೊಂಡಿದ್ದು ಕೆಲವು ಒಬ್ಬ ನಟನಲ್ಲ. ನಿಜವಾದ ನಾಯಕನನ್ನು!

ಪುನೀತ್ ರಾಜಕುಮಾರ್ ಇದುವರೆಗೆ ಎಷ್ಟು ಬಡವರಿಗೆ ಸಹಾಯ ಮಾಡಿದ್ದಾರೆ ಎನ್ನುವುದು ಬಹುಶಃ ಅವರಿಗೂ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ಅವರು ಮಾಡಿದ ಸಮಾಜಮುಖಿ ಕಾರ್ಯಗಳ ಬಗ್ಗೆ ಹೇಳೋಕೆ ದಿನಗಳು ಸಾಲುವುದಿಲ್ಲ! ಪುನೀತ್ ಅವರು ಅಭಿಮಾನಿಗಳ ಜೊತೆ ಚೆನ್ನಾಗಿಯೇ ಇರುತ್ತಿದ್ದರು. ಅವರ ನಗುಮುಖವನ್ನಾ ನೋಡುವುದಕ್ಕೆ ಸಂತೋಷವಾಗುತ್ತಿತ್ತು. ಇನ್ನು ವಯಕ್ತಿಕ ಜೀವನದಲ್ಲೂ ಒಬ್ಬ ಗಂಡನಾಗಿ ಹಾಗೂ ಮಕ್ಕಳಿಗೆ ಉತ್ತಮ ತಂದೆಯಾಗಿ ಇದ್ದವರು ಪುನೀತ್.

ಅಪ್ಪು ಹಾಗೂ ಅಶ್ವಿನಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಅಶ್ವಿನಿ ಅವರನ್ನ ಮೊದಲ ಬಾರಿಗೆ ನೋಡಿದಾಗಲೇ ಕ್ಲೀನ್ ಬೋಲ್ಡ್ ಆಗಿದ್ದ ಅಪ್ಪು, ಕೊನೆಗೆ ಅಶ್ವಿನಿ ಅವರಿಗೆ ಪ್ರಪೋಸ್ ಮಾಡುತ್ತಾರೆ. ಬಳಿಕ ಮನೆಯವರನ್ನೂ ಒಪ್ಪಿಸಿ 1999 ಡಿಸೆಂಬರ್ 1ರಂದು ಮದುವೆಯಾಗುತ್ತಾರೆ. ಅಶ್ವಿನಿ ಹಾಗೂ ಪುನೀತ್ ಇತರರಿಗೂ ಮಾದರಿಯಾಗುವ ರೀತಿಯಲ್ಲಿ ಬಹಳ ಪ್ರೀತಿಯಿಂದ ಸಂಸಾರ ನಡೆದವರು. ಈಗ ಅಪ್ಪು ಇದ್ದಿದ್ದರೆ ಅಶ್ವಿನಿ ಹಾಗೂ ಪುನೀತ್ ಅವರ 22ನೇ ವರ್ಷದ ಮದುವೆ ವಾರ್ಷಿಕೋತ್ಸವ ನಡೆಯಬೇಕಿತ್ತು.

ನಟ ಪುನೀತ್ ಯಾವುದೇ ಸಮಾರಂಭಕ್ಕೆ ಹೋಗುವುದಾದರೂ ಅಶ್ವಿನಿ ಅವರನ್ನ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಇಂದು ಪುನೀತ್ ಇಲ್ಲದಿದ್ದರೂ ಕೂಡ ಅಶ್ವಿನಿ ಅವರನ್ನು ಎಲ್ಲರೂ ಗುರುತಿಸಿ ಸಿನಿಮಾದ ಯಾವುದೇ ಇವೆಂಟ್ ಇದ್ದರೂ ಅವರನ್ನ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಅಪ್ಪು ತೀರಿಕೊಂಡ ಮೇಲೆ ಸುಮಾರು ಐದಾರು ತಿಂಗಳುಗಳ ಕಾಲ ಮನೆಯಿಂದ ಆಚೆಯೇ ಬಾರದ ಅಶ್ವಿನಿ ಇಂದು ಎಲ್ಲರ ಒತ್ತಾಯದ ಮೇರೆಗೆ ಅಭಿಮಾನಿಗಳ ಆಸೆಯಂತೆ ಅಪ್ಪು ಪರವಾಗಿ ಎಲ್ಲಾ ಸಿನಿಮಾ ಇವೆಂಟ್ ಗಳಲ್ಲಿ ಭಾಗವಹಿಸುತ್ತಾರೆ. ಅಶ್ವಿನಿ ಅವರಿಗೆ ಅಪ್ಪುವಿನ ಯಾವ ಕೋಟಿ ಆಸ್ತಿಯಲ್ಲ ಆಕರ್ಷಿಸಿದ್ದು. ಅವರ ಸರಳ ವ್ಯಕ್ತಿತ್ವ ನನಗೆ ತುಂಬಾ ಇಷ್ಟ ಎಂದು ಅಶ್ವಿನಿಯವರೇ ತಿಳಿಸಿದ್ದಾರೆ.

ಇತ್ತೀಚಿಗೆ ಅನಾಲಕ್ ರಾಘವ ಸಿನಿಮಾ ಇವೆಂಟ್ ಒಂದರಲ್ಲಿ ವೇದಿಕೆಯ ಮೇಲೆ ಅಶ್ವಿನಿ ಅಪ್ಪು ಕೂಡ ಇದ್ದರು. ಅವರನ್ನ ಒಂದೆರಡು ಮಾತುಗಳನ್ನ ಆಡಬೇಕು ಅಂತ ನಿರೂಪಕಿ ಕೇಳಿಕೊಂಡಾಗ ಚಿತ್ರ ತಂಡಕ್ಕೆ ಅಲ್ ಡಿ ಬೆಸ್ಟ್ ಹೇಳಿ ಮಾತನ್ನ ಮೊಟಕುಗೊಳಿಸಿದರು ಅಶ್ವಿನಿ. ಪುನೀತ್ ಅವರಂತೆ ಅವರ ಪತ್ನಿ ಅಶ್ವಿನಿಯವರದ್ದೂ ಕೂಡ ಸರಳ ವ್ಯಕ್ತಿತ್ವ. ಇವರನ್ನ ವೇದಿಕೆಯ ಮೇಲೆ ಸನ್ಮಾನ ಮಾಡಿ ಕಿರು ಕಾಣಿಕೆ ಕೊಡಬೇಕು ಅಂತ ಚಿತ್ರತಂಡ ತೀರ್ಮಾನ ಮಾಡಿತ್ತು. ಅದರಂತೆ ವೇದಿಕೆಯಲ್ಲಿ ಒಂದು ಚೇರ್ ಹಾಕಿ ಅಶ್ವಿನಿ ಅವರನ್ನ ಕುಳಿತುಕೊಳ್ಳಲು ಹೇಳಿದಾಗ, ಸುತಾರಾಂ ಒಪ್ಪಲಿಲ್ಲ.

ಅತ್ಯಂತ ನಯವಾಗಿಯೇ ಸನ್ಮಾನವನ್ನು ನಿರಾಕರಿಸಿದರು. ಇದರಲ್ಲಿಯೇ ಗೊತ್ತಾಗುತ್ತೆ ಅಶ್ವಿನಿ ಕೂಡ ಅಪ್ಪುವಿನಂತೆ ಯಾವ ಪ್ರಚಾರವನ್ನು ಬಯಸುವುದಿಲ್ಲ ಎಂದು. ಅಶ್ವಿನಿ ಪುನೀತ್ ಮನಸ್ಸು ಮಾಡಿದ್ದರೆ ಅಭಿಮಾನಿಗಳ ಕನಿಕರ ಗಿಟ್ಟಿಸಿಕೊಳ್ಳುವುದು ಅಷ್ಟು ದೊಡ್ಡ ವಿಷಯವೇ ಅಲ್ಲ. ಆದರೆ ಅಶ್ವಿನಿ ಎಂದಿಗೂ ಹಾಗೆ ಮಾಡದೆ, ಕೇವಲ ಪುನೀತ್ ಅವರ ಪರವಾಗಿ ಅವರ ನೆನಪುಗಳನ್ನು ಮೆಲುಕು ಹಾಕಲು ಇಂಥ ಇವೆಂಟ್ ಗಳಲ್ಲಿ ಪಾಲ್ಗೊಳ್ಳುತ್ತಾರೆ. ನಿಜಕ್ಕೂ ಸರಳ ನಡೆ ನುಡಿಯ ಅಶ್ವಿನಿ ಪುನೀತ್ ಇತರರಿಗೆ ಮಾದರಿ.

Leave a Comment

error: Content is protected !!