ಅಪ್ಪು ಅವರ ವಾಟ್ಸಪ್ ವಿಡಿಯೋ ನೋಡಿ ಶಾಕ್ ಆದ ಅಶ್ವಿನಿ!

ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಪುನೀತ್ ಅವರ ಬದುಕಿನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತುಂಬಾ ವಿಶೇಷವಾದ ಸ್ಥಾನವನ್ನು ಗಳಿಸಿದ್ದರು. ಯಾಕೆಂದರೆ ಪುನೀತ್ ಅವರು ಅಶ್ವಿನಿಯವರನ್ನು ಮದುವೆಯಾದ ನಂತರವೇ ಪುನೀತ್ ಅವರ ಜೀವನದ ದಿಕ್ಕೇ ಬದಲಾಯಿತು. ಅಶ್ವಿನಿ ಅವರು ಪುನೀತ್ ಅವರಿಗೆ ಅದೃಷ್ಟದ ಸಂಕೇತವಾಗಿದ್ದರು.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಹ ಪುನೀತ್ ಅವರ ಬಗ್ಗೆ ಸರಳ ಹಾಗೂ ಸಹೃದಯ ವ್ಯಕ್ತಿ. ಹಲವಾರು ಸಲ ಪುನೀತ್ ಅವರ ಜೊತೆ ನಾವು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಕಾರ್ಯಕ್ರಮಗಳಲ್ಲಿ ಕಂಡಿದ್ದೇವೆ.ದೊಡ್ಮನೆ ಸೊಸೆಯಾಗಿ ಮತ್ತು ಪುನೀತ್ ಅವರ ಪತ್ನಿಯಾಗಿ ಯಾವಾಗಲೂ ಅಶ್ವಿನಿಯವರು ವಿನಯ ಹಾಗೂ ವಿನಮ್ರತೆಯಿಂದ ನಡೆಸಿಕೊಳ್ಳುತ್ತಿದ್ದರು. 20 ವರ್ಷದ ದಾಂಪತ್ಯ ಜೀವನದಲ್ಲಿ ಅಶ್ವಿನಿ ಮತ್ತು ಅಪ್ಪು ಅವರು ಒಂದು ದಿನ ಕೂಡ ಜಗಳವಾಡಿಲ್ಲವಂತೆ. ಇಬ್ಬರೂ ಅನ್ಯೋನ್ಯವಾಗಿ ಜೀವನ ನಡೆಸಿದ್ದಾರೆ.

ಅಶ್ವಿನಿಗೆ ಪುನೀತ್ ಅವರ ಮೇಲೆ ತುಂಬಾ ಅಟ್ಯಾಚ್ ಮೆಂಟ್ ಇತ್ತು. ಪುನೀತ್ ಅವರನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಇಂದಿಗೆ ಕೂಡ ಅಶ್ವಿನಿಯವರು ಈ ಒಂದು ಆ’ಘಾತದಿಂದ ಹೊರಬಂದಿಲ್ಲ. ಅಶ್ವಿನಿಗೆ ಪುನೀತ್ ಮೇಲೆ ತುಂಬಾ ಅಟ್ಯಾಚ್ ಮೆಂಟ್ ಇತ್ತು ಪುನೀತ್ ಅವರನ್ನು ಕಳೆದುಕೊಂಡು 6 ತಿಂಗಳು ಕಳೆದಿವೆ ಇನ್ನೂ ಕೂಡ ಅಶ್ವಿನಿ ಅವರು ಈ ಆಘಾತದಿಂದ ಹೊರಬಂದಿಲ್ಲ. ಆಗಾಗ ಪುನೀತ್ ಅವರ ನೆನಪು ಕಾಡುತ್ತಲೇ ಇರುತ್ತದೆ. ಇತ್ತೀಚೆಗೆ ಅಶ್ವಿನಿ ಅವರಿಗೆ ಅಪ್ಪು ಅವರ ವಾಟ್ಸಪ್ ವಿಡಿಯೋವನ್ನು ತುಂಬಾ ಅಪ್ ಸೆಟ್ ಮಾಡಿದೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ಪುನೀತ್ ಕೊನೆಯ ಚಿತ್ರ ಜೇಮ್ಸ್ ಚಿತ್ರ ಬಿಡುಗಡೆಯಾಗಿತ್ತು. ಇಡೀ ಕರ್ನಾಟಕವೇ ಪುನೀತ್ ಅವರ ಚಿತ್ರವನ್ನು ವೀಕ್ಷಿಸಿದ್ದಾರೆ ಆದರೆ ಅಶ್ವಿನಿಯವರು ಮಾತ್ರ ಪುನೀತ್ ಅವರ ಹೊಸ ಚಿತ್ರವನ್ನು ನೋಡಿಲ್ಲ. ಯಾಕೆಂದರೆ ಪುನೀತ್ ಅವರನ್ನು ಪರದೆಯ ಮೇಲೆ ಎರಡು ಗಂಟೆಗಳ ಕಾಲ ನೋಡೋಕೆ ಅಶ್ವಿನಿಯವರಿಗೆ ಮನಸ್ಸು ಭಾರವಾಗಿತ್ತು. ಜೇಮ್ಸ್ ಚಿತ್ರ ನೋಡಲು ಥಿಯೇಟರ್ ಗೆ ಹೋದ ಅಶ್ವಿನಿಯವರು ಸಿನೆಮಾ ಪ್ರಾರಂಭವಾದ ಹತ್ತೇ ನಿಮಿಷಕ್ಕೆ ಹಿಂತಿರುಗಿ ಮನೆಗೆ ಹೋಗಿದ್ದರು.

ಜೇಮ್ಸ್ ಚಿತ್ರದ ನಿರ್ಮಾಪಕರು ಅಶ್ವಿನಿಯವರ ವಾಟ್ಸ್ ಆ್ಯಪ್ ನಂಬರ್ ಜೇಮ್ಸ್ ಚಿತ್ರದ ದೃಶ್ಯಗಳನ್ನು ಕಳುಹಿಸಿದ್ದಾರೆ. ಪುನೀತ್ ಅವರ ಧ್ವನಿಯನ್ನು ಟೆಕ್ನಾಲಜಿ ಮೂಲಕ ಮರುಸೃಷ್ಟಿ ಮಾಡಿದ ಕೆಲವು ದೃಶ್ಯಗಳನ್ನು ಅಶ್ವಿನಿಯವರ ವಾಟ್ಸಪ್ ಗೆ ಶೇರ್ ಮಾಡಿದ್ದಾರೆ. ಆ ದೃಶ್ಯಗಳನ್ನು ನೋಡಿ ಅಶ್ವಿನಿ ಅವರು ಒಂದು ಕ್ಷಣ ದಂಗಾಗಿದ್ದಾರೆ. ಟೆಕ್ನಾಲಜಿ ಬಳಸಿ ಪುನೀತ್ ರವರ ಧ್ವನಿಯನ್ನು ಸೃಷ್ಟಿ ಮಾಡಿದ ವೀಡಿಯೋಗಳನ್ನು ಅಶ್ವಿನಿಯವರು ಆಶ್ಚರ್ಯ ಚಕಿತರಾಗಿದ್ದಾರೆ. ಹಲವಾರು ದಿನಗಳ ನಂತರ ಪುನೀತ್ ಅವರ ವಾಯ್ಸ್ ಕೇಳಿ ಅಶ್ವಿನಿಗೆ ಮಾತೇ ಹೊರಡಲಿಲ್ಲ. ಪುನೀತ್ ಅವರ ಕಂಠವನ್ನು ಕೇಳಿ ಆಶ್ಚರ್ಯ ಪಡಬೇಕಾ ಇಲ್ಲ ದುಃಖ ಪಡಬೇಕು ಎಂದು ಅಶ್ವಿನಿ ಅವರು ತಬ್ಬಿಬ್ಬಾದರು.

Leave a Comment

error: Content is protected !!