ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಧರಿಸುವಂತಹ ಈ ಬಾಲ್ಮೈನ್ ಪ್ಯಾರಿಸ್ ಶರ್ಟ್ ನ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಸೆಲೆಬ್ರಿಟಿಗಳು ಅಂದ ಮೇಲೆ ಅವರ ಜೀವನ ಶೈಲಿಗಳು ತುಂಬಾ ಐಷಾರಾಮಿಯಾಗಿ ಇರತ್ತೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ವೈಭವೀ ಕರಣ ಮತ್ತು ಶ್ರೀಮಂತಿಕೆಯ ಜೀವನವನ್ನು ನಡೆಸುತ್ತಾರೆ. ಕೇವಲ ಸೆಲೆಬ್ರಿಟಿಗಳು ಅಷ್ಟೇ ಅಲ್ಲ ಜನಸಾಮಾನ್ಯರೂ ಕೂಡಾ ಐಷಾರಾಮಿ ಜೀವನವನ್ನು ನಡೆಸುವುದಕ್ಕೆ ಇಷ್ಟಪಡುತ್ತಾರೆ. ಇತ್ತೀಚೆಗೆ ಶ್ರೀಮಂತಿಕೆಯ ಎನ್ನುವುದು ಸ್ಟೇಟಸ್ ಪ್ರಶ್ನೆ. ಆಡಂಬರದ ಜೀವನವನ್ನು ನಡೆಸಿದರೆ ಸಮಾಜದ ಕಣ್ಣಿಗೆ ನಾವು ಶ್ರೀಮಂತರೆಂದು ಬಿಂಬಿತವಾಗುತ್ತೇವೆ.

ಕ್ರಿಕೆಟಿಗರು ಮತ್ತು ಸಿನಿಮಾ ನಟರು ಹಣವನ್ನು ನೀರಿನಂತೆ ಚೆಲ್ಲುತ್ತಾರೆ. ವರ್ಷಕ್ಕೆ ಕೋಟಿ ಕೋಟಿ ಆದಾಯವನ್ನು ಮಾಡುವ ಇವರಿಗೆ ದುಡ್ಡನ್ನು ಹೇಗೆ ಖರ್ಚು ಮಾಡಬೇಕು ಎನ್ನುವುದೇ ದೊಡ್ಡ ಚಿಂತೆ. ಇವರು ಪ್ರತಿದಿನ ಧರಿಸುವ ಬಟ್ಟೆ ಮತ್ತು ವಾಚ್ ಕೂಡ ಲಕ್ಷ ಲಕ್ಷ ಬೆಲೆಬಾಳುತ್ತದೆ. ಸೆಲೆಬ್ರಿಟಿಗಳು ಯಾವಾಗಲು ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸುತ್ತಾರೆ. ಕ್ರಿಕೆಟಿಗ ಧೋನಿ, ನಟ ಅಲ್ಲು ಅರ್ಜುನ್, ಶಾರುಖ್ ಖಾನ್ ಮತ್ತು ನಟ ಧನುಷ್ ಇವರೆಲ್ಲರೂ ಬಾಲ್ಮೈನ್ ಪ್ಯಾರಿಸ್ ಎಂಬ ಟಿ ಶರ್ಟ್ ಪ್ರಾಡಕ್ಟನ್ನು ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ.

ಬಾಲ್ಮೈನ್ ಪ್ಯಾರಿಸ್ ಎನ್ನುವ ಶರ್ಟ್ ಮೂಲತಃ ಫ್ರೆಂಚ್ ಮತ್ತು ಇಟಲಿ ದೇಶದಲ್ಲಿ ತಯಾರಾಗುತ್ತದೆ. ವಿಶ್ವದಲ್ಲೇ ಅತ್ಯಂತ ದುಬಾರಿ ಬ್ರ್ಯಾಂಡ್ ಗಳಲ್ಲಿ ಬಾಲ್ಮೈನ್ ಪ್ಯಾರಿಸ್ ಕೂಡ ಒಂದಾಗಿದೆ. ಈ ಬಟ್ಟೆಗಳನ್ನು ಫ್ರೆಂಚ್ ದೇಶಗಳಿಂದ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಾರೆ. ಭಾರತದಲ್ಲಿ ಈ ಒಂದು ಕಂಪೆನಿಯ ಬಟ್ಟೆಗಳಿಗೆ ವಿಶೇಷವಾದ ಬೇಡಿಕೆಯಿದೆ. ಈ ಬಟ್ಟೆಗಳನ್ನು ಧರಿಸುವವರಿಗೆ ಒಳ್ಳೆಯ ಪ್ರತ್ಯೇಕತೆ ಮತ್ತು ಅದ್ಭುತ ವಿನ್ಯಾಸ ಮೌಲ್ಯವನ್ನು ನೀಡುತ್ತೆ. ಈ ಕಾರಣದಿಂದಲೇ ಧೋನಿ ಮತ್ತು ಶಾರುಖ್ ಖಾನ್ ನಂಥ ಸೆಲೆಬ್ರಿಟಿಗಳು ಇದನ್ನು ತುಂಬಾ ಇಷ್ಟಪಡುತ್ತಾರೆ.

ಬಾಲ್ಮೈನ್ ಪ್ಯಾರಿಸ್ ಶರ್ಟ್ ಗಳ ಬೆಲೆ ಪ್ರಾರಂಭವಾಗುವುದೇ ನಲವತ್ತು ಸಾವಿರ ರೂಪಾಯಿಗಳಿಂದ. 100 % ಕಾಟನ್ ಬಟ್ಟೆಗಳು ಬೇಕಾದರೆ ಒಂದು ಲಕ್ಷ ರೂಪಾಯಿವರೆಗೂ ಕೂಡ ಈ ಬಟ್ಟೆಯ ಬೆಲೆ ಏರಿಕೆಯಾಗುತ್ತದೆ. ಧೋನಿ ಶಾರುಖ್ ಖಾನ್ ಮತ್ತು ಅಲ್ಲು ಅರ್ಜುನ್ ಅವರು ಬಳಸುವ ಶರ್ಟ್ ನ ಬೆಲೆ ಕೂಡ ಒಂದು ಲಕ್ಷ ರೂಪಾಯಿ. ಕೋಟಿ ಕೋಟಿ ಬೆಲೆಬಾಳುವ ವಾಚ್ ಗಳನ್ನು ಖರೀದಿಸುವ ಇಂತಹ ದೊಡ್ಡ ಸೆಲೆಬ್ರಿಟಿ ಕ್ರಿಯೆ ಕೇವಲ ಒಂದು ಲಕ್ಷ ರೂಪಾಯಿಗಳು ಯಾವ ಲೆಕ್ಕ ಹೇಳಿ. ಜನಸಾಮಾನ್ಯರು ಇಂತಹ ಒಂದು ಬಟ್ಟೆಯನ್ನು ಖರೀದಿ ಮಾಡಬೇಕೆಂದರೆ 5 ತಿಂಗಳ ಸಂಬಳವನ್ನು ಖರ್ಚು ಮಾಡಬೇಕಾಗುತ್ತದೆ.

Leave A Reply

Your email address will not be published.

error: Content is protected !!