ಕೆಜಿಎಫ್-2 ಅಸಹ್ಯಕರ ಚಿತ್ರ ಈ ಚಿತ್ರವನ್ನು ನಾನು ಒಪ್ಪುವುದೇ ಇಲ್ಲ. ಇಂತಹ ಕೆಟ್ಟ ಚಿತ್ರಕ್ಕೆ ಸಪೋರ್ಟ್ ಮಾಡಬೇಡಿ ಎಂದು ಭಾಸ್ಕರ್ ರಾವ್ ಹೇಳಿದ್ದೇಕೆ ಗೊತ್ತಾ

ಕೆಜಿಎಫ್ ಚಾಪ್ಟರ್ 2 ಇದೀಗ ಬಿಡುಗಡೆಯಾಗಿ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದೇಶದ ವಿವಿಧ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಮತ್ತು ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಕೆಜಿಎಫ್-2 ಚಿತ್ರವು ಹಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆಯುವಷ್ಟು ಸಕ್ಕತ್ತಾಗಿ ಮೂಡಿಬಂದಿದೆ. ಕೆಜಿಎಫ್-2 ಚಿತ್ರವು ಹಲವು ಜನರಿಗೆ ಅದ್ಭುತ ಎನಿಸಿದೆ ಇನ್ನೂ ಹಲವು ಜನರಿಗೆ ಕಳಪೆ ಅಂತ ಅನಿಸಿದ್ದೂ ಇದೆ. ಕೆಜಿಎಫ್ ಚಿತ್ರ ಯಶಸ್ಸು ಕಾಣುತ್ತಿದ್ದಂತೆ ಇದೀಗ ನಕಾರಾತ್ಮಕ ವಿಮರ್ಶೆಗಳು ಕೂಡ ಹುಟ್ಟಿಕೊಳ್ಳುತ್ತಿವೆ .

ಕೆಜಿಎಫ್-೨ ಚಿತ್ರದ ಬಗ್ಗೆ ಬೆಂಗಳೂರು ಮಾಜಿ ಕಮೀಷನರ್ ಭಾಸ್ಕರ್ ರಾವ್ ಅವರು ಒಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಭಾಸ್ಕರ್ ರಾವ್ ಅವರು ಕೆಜಿಎಫ್ ಚಿತ್ರದ ಮೇಲೆ ತಮಗಿರುವ ಅಭಿಪ್ರಾಯವನ್ನು ನೇರವಾಗಿ ಹೇಳಿರುವುದು ಕೆಜಿಎಫ್ ಚಿತ್ರದ ಅಭಿಮಾನಿಗಳಿಗೆ ಮತ್ತು ಯಶ್ ಅಭಿಮಾನಿಗಳಿಗೆ ಬೇಸರ ತಂದಿರುವುದು ನಿಜ. ಯಾವುದೇ ಮುಲಾಜಿಲ್ಲದೆ ಭಾಸ್ಕರ್ ರಾವ್ ಅವರು ಕೆಜಿಎಫ್ ಚಿತ್ರವನ್ನು ಅಸಹ್ಯಕರ ಚಿತ್ರ ಎಂದು ಕರೆದಿದ್ದಾರೆ ಮತ್ತು ಇಂತಹ ಚಿತ್ರಗಳನ್ನು ನಾನು ಪ್ರಚೋದಿಸುವುದಿಲ್ಲ ಮತ್ತು ಒಪ್ಪುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ಭಾಸ್ಕರರಾವ್ ಅವರು ಖಡಕ್ ಪೊಲೀಸ್ ಆಫೀಸರ್ ಎಂಬುದು ನಮಗೆಲ್ಲ ಗೊತ್ತು. ಇದೀಗ ಕೆಜಿಎಫ್ ಚಿತ್ರ ಭಾಸ್ಕರ್ ರಾವ್ ಅವರಿಗೆ ಯಾಕೆ ಅಸಮಾಧಾನ ಹುಟ್ಟಿಸಿತು ಎಂಬುದು ನಮಗೆ ಕಾಡುತ್ತಿರುವ ಕುತೂಹಲದ ಪ್ರಶ್ನೆ. ಭಾಸ್ಕರ್ ರಾವ್ ಅವರು ಪೋಲಿಸ್ ಕಮಿಷನರ್ ಆಗಿದ್ದರು ಆದಕಾರಣದಿಂದ ಇವರಿಗೆ ಗುಂಡ ರೌ-ಡಿಸಂ ಚಿತ್ರಗಳು ಸ್ವಲ್ಪ ಕೂಡ ಇಷ್ಟವಾಗುವುದಿಲ್ಲ. ಇಂಥ ಚಿತ್ರಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗುವುದಿಲ್ಲ ಎಂಬುದು ಭಾಸ್ಕರ್ ರಾವ್ ಅವರ ಅನಿಸಿಕೆ. ಇದೇ ಕಾರಣಕ್ಕೆ ಭಾಸ್ಕರ್ ರಾವ್ ಅವರು ಕೆಜಿಎಫ್ ಚಿತ್ರವನ್ನ ಕೂಡ ವಿರೋಧಿಸಿದ್ದಾರೆ.

ಕೆಜಿಎಫ್ ಚಿತ್ರದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಅತಿಯಾದ ರೌ’ಡಿಸಂ ದಬ್ಬಾಳಿಕೆ ಕ್ರೌರ್ಯ ಶೌರ್ಯ ರ-ಕ್ತಪಾತ ಮತ್ತು ಹೊಡೆದಾಟಗಳಿವೆ. ಇಂಥ ಚಿತ್ರಗಳು ಯುವಕರನ್ನು ರೌ’ ಡಿಸಂಗೆ ಪ್ರಚೋದನೆ ಮಾಡುತ್ತೆ. ರೌ-ಡಿಸಂ ತೋರಿಸುವುದರಿಂದ ಏನೂ ಸಾಧಿಸಲು ಸಾಧ್ಯ. ವಿಚಿತ್ರವಾಗಿ ಗಡ್ಡಬಿಟ್ಟು ಕ್ರೂರವಾಗಿ ವರ್ತಿಸುವ ಮತ್ತು ಬಾಡಿಯನ್ನು ತೋರಿಸುವ ಕೆಜಿಎಫ್ ಚಿತ್ರ ನಮ್ಮ ಹೆಮ್ಮೆ ಚಿತ್ರವಲ್ಲ. ಉತ್ತಮವಾದ ಸಾಧಕರ ಮೇಲೆ ಸಿನಿಮಾಗಳು ಬರಬೇಕು ಕರ್ನಾಟಕದಲ್ಲಂತೂ ಅಸಂಖ್ಯಾತ ಸಾಧಕರಿದ್ದಾರೆ. ದಂಡುಪಾಳ್ಯ ಸಿನಿಮಾ ಗಳಿಂದ ಪ್ರೇರೇಪಿತರಾಗಿ ರೌ-ಡಿಸಂಗೆ ಇಳಿದ ವ್ಯಕ್ತಿಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ನಾನು ಕಮಿಷನರ್ ಆಗಿದ್ದ ಅವಧಿಯಲ್ಲಿ ರೌ-ಡಿಸಂ ಚಿತ್ರಗಳನ್ನೇ ನೋಡಿ ರೌ-ಡಿಸಂ ಫೀಲ್ಡ್ ಗೆ ಇಳಿದ ಹಲವಾರು ಜನರನ್ನು ನೋಡಿದ್ದುಂಟು

ಕರ್ನಾಟಕದಲ್ಲಿರುವ ಬಡ ಮಕ್ಕಳು, ಹೆಣ್ಣುಮಕ್ಕಳು, ದ’ಲಿತರು ಮತ್ತು ಅಂ’ ಗವಿಕಲರು ಹಲವಾರು ಸಾಧನೆಗಳನ್ನು ಮಾಡಿದವರಿದ್ದಾರೆ. ವಿದೇಶದಲ್ಲಿ ಕೂಡ ಕನ್ನಡಿಗರು ಮೆಚ್ಚುವಂತಹ ಸಾಧನೆಗಳನ್ನು ಮಾಡಿದ್ದಾರೆ. ಇವುಗಳ ಮೇಲೆ ಸಿನಿಮಾವನ್ನು ಮಾಡಬೇಕು ಅದನ್ನು ಬಿಟ್ಟು ರೌಡಿಸಂ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಯುವಕರು ದಾರಿ ತಪ್ಪುತ್ತಿದ್ದಾರೆ. ಹೀರೋಯಿಸಂ ಮತ್ತು ರೌ’ಡಿಸಂ ತೋರಿಸಿ ಏನನ್ನು ಸಾಧಿಸುತ್ತೀರಿ. ಮಲೆಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಇತ್ತೀಚೆಗೆ ಸಾಮಾಜಿಕ ಕಳಕಳಿ ಹೊಂದಿರುವ ಸಿನಿಮಾಗಳು ಬರುತ್ತಿವೆ. ಇಂಥ ಸಿನಿಮಾಗಳು ಯುವಜನತೆಯನ್ನು ಪ್ರೇರೇಪಿಸುತ್ತದೆ ಮತ್ತು ಅಂತಹ ಸಿನಿಮಾಗಳನ್ನು ನಾನು ನೋಡಿ ಇಷ್ಟ ಪಡುತ್ತೇನೆ ಎಂದು ಭಾಸ್ಕರ್ ರಾವ್ ಅವರು ಖಡಕ್ಕಾಗಿ ಕೆಜಿಎಫ್ ಚಿತ್ರದ ಮೇಲೆ ಆ’ ಕ್ರೋಶ ವ್ಯಕ್ತಪಡಿಸಿದ್ದರು.

Leave a Comment

error: Content is protected !!