ದೀಪಿಕಾ ಪಡುಕೋಣೆ ಧರಿಸಿರುವ ದುಬಾರಿ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ಕೇಳಿದರೆ ನೀವು ಶಾಕ್ ಆಗ್ತೀರಾ

ಸದ್ಯ ಬಾಲಿವುಡ್ ನ ದೀಪಿಕಾ ಪಡುಕೋಣೆ ಭಾರಿ ಸುದ್ದಿಯಲ್ಲಿದ್ದಾರೆ ಯಾಕಂದ್ರೆ ಕೇನ್ಸ್ ಚಲನಚಿತ್ರೋತ್ಸವ 2022ರಲ್ಲಿ ದೀಪಿಕಾ ಭಾಗಿಯಾಗಿದ್ದಾರೆ. ಇಷ್ಟುವರ್ಷ ದೀಪಿಕಾ ಪಡುಕೋಣೆ ಗೆಸ್ಟ್ ಆಗಿ ಈ ಚಲನಚಿತ್ರೋತ್ಸವಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ದೀಪಿಕಾ ಅವರಿಗೆ ವಿಶೇಷ ಆಮಂತ್ರಣವನ್ನು ನೀಡಲಾಗಿದೆ!

ಹೌದು ಕೇನ್ಸ್ ಫಿಲ್ಮ್ ಫೆಸ್ಟಿವಲ್ ವಿಶ್ವದ ಟಾಪ್‌ ಫಿಲ್ಮ್‌ ಇವೆಂಟ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಬಾಲಿವುಡ್ ನ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಈ ಬಾರಿ ಜ್ಯೂರಿಯಾಗಿ ಭಾಗವಹಿಸುತ್ತಿದ್ದಾರೆ. ಭಾರತದ ಪ್ರತಿನಿಧಿಯಾಗಿ ತೀರ್ಪಿಗಾರರಾಗಿ ಕೇನ್ಸ್ ನಲ್ಲಿ ಭಾಗಿಯಾಗಿದ್ದಾರೆ ನಟಿ ದೀಪಿಕಾ. ಕೇವಲ ಅತಿಥಿಯಗಿ ಆಹ್ವಾನ ಪಡೆದುಕೊಳ್ಳುತ್ತಿದ್ದ ದೀಪಿಕಾ ಇದೀಗ ಇಂಥ ದೊಡ್ಡ ಇವೆಂಟ್ ನಲ್ಲಿ ಜಡ್ಜ್ ಆಗುವುದು ಅಂದ್ರೆ ಸಣ್ಣ ವಿಚಾರವೇನೂ ಅಲ್ಲ. ಇದು ಭಾರತೀಯರಿಗೂ ಹೆಮ್ಮೆಯ ವಿಚಾರ.

ಇನ್ನು ಕೇನ್ಸ್ ಫೆಸ್ಟ್ ನಲ್ಲಿ ಭಾಗವಹಿಸಿರುವ ಎಲ್ಲರೂ ವೀಶೇಷವಾದ ಉಡುಗೆ ತೊಡುಗೆಯಿಂದ ಗಮನ ಸೆಳೆಯುತ್ತಾರೆ. ಈ ಬಾರಿ ರೆಡ್ ಕಾರ್ಪೇಟ್ ಮೇಲೆ ಯಾವ ನಟಿಯರು ಹೆಚ್ಚು ಆಕರ್ಷಣೀಯವಾಗಿ ಕಾಣುತ್ತಿದ್ದರು ಎಂದರೆ ಕೇಳಿ ಬರುವ ಹೆಸರು ದೀಪಿಕಾ ಪಡುಕೋಣೆ. ಹೌದು ಕೇನ್ಸ್ ನಲ್ಲಿ ಇರುವಷ್ಟು ದಿನವೂ ಟಾಪ್ ಡಿನೈಸರ್ ಬಟ್ಟೆಗಳಗಳನ್ನು ತೊಟ್ಟು ಮಿಂಚಲಿದ್ದಾರೆ ದೀಪಿಕ. ಈಗಾಗಲೇ ಅವರ ವೇಷ ಭೂಷಣಗಳು ಸಾಕಷ್ಟು ಗಮನ ಸೆಳೆದಿವೆ. ಕೇನ್ಸ್ ನ ಮೊದಲ ದಿನ ದೀಪಿಕಾ ಹಸಿರು ಬಣ್ಣದ ಪ್ಯಾಂಟ್ ಹಾಗೂ ಅದಕ್ಕೆ ಪ್ರಿಂಟೆಡ್ ಶರ್ಟ್ ಧರಿಸಿ ಕಂಗೊಳಿಸುತ್ತಿದ್ದರು. ಎರಡನೇ ದಿನ ರೆಟ್ರೋ ಲುಕ್ ನಲ್ಲಿ ಮಿಂಚಿದ್ದರು ದೀಪಿಕಾ. ಸಭ್ಯಸಾಚಿ ಡೈಸೈನ್ ಮಾಡಿದ ಕಪ್ಪು ಬಣ್ಣದ ಮೇಲೆ ಚಿನ್ನದ ಬಣ್ಣದ ಗೆರೆಗಳಿರುವ ಸೀರೆ, ಹಳೇಯ ಸಿನಿಮಾ ಲುಕ್ ನ ಹೇರ್ ಸ್ಟ್ರೈಲ್ ಎಲ್ಲವೂ ವಿಶೇಷವಾಗಿತ್ತು.

ಇನ್ನು ಮೂರನೇಯ ದಿನವೂ ದೀಪಿಕಾ ಕಡೆಗಿನ ನೋಟವನ್ನು ಯಾರೂ ಬದಲಾಯಿಸುವ ಹಾಗೇ ಇಲ್ಲ. ಯಾಕಂದ್ರೆ ಕಪ್ಪುಬಣ್ಣದ ಡ್ರೆಸ್ ಹಾಕಿದ್ದ ದೀಪಿಕಾ ವಿಶೇಷವಾಗ ನೆಕ್ಸ್ಲೆಸ್ ಒಂದನ್ನು ಧರಿಸಿದ್ದರು. ಶಲೀನಾ ನತ್ಲಾನಿ ಶೈಲಿಯ ಕಪ್ಪು ಬಣ್ಣದ ನೆರಿಗೆ ಇರುವ ಉದ್ದ ತೋಳಿನ ಜಾಕೆಟ್ ಅದಕ್ಕೆ ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದರು. ಇದರ ಮೇಲೆ ಅಟ್ರಾಕ್ಟಿವ್ ಆಗಿರುವ ನೆಕ್ಲೆಸ್.

ಇದು ಪ್ಯಾಂಥೆರೆ ಡಿ ಕಾರ್ಟಿಯರ್’ ಹಾರ. 18 ಕ್ಯಾರೇಟ್ ಬಿಳಿ ಚಿನ್ನವನ್ನು ಹೊಂದಿದ್ದು, ಪಚ್ಚೆ ಕಣ್ಣುಗಳು, ಓನಿಕ್ಸ್ ಕಲೆಗಳು ಈ ಹಾರದಲ್ಲಿವೆ. ಇನ್ನು 19.05 ಕ್ಯಾರೆಟ್‌ ವಜ್ರಗಳ ಬಳಕೆಯನ್ನು ಇಲ್ಲಿ ಕಾಣಬಹುದು. ಇಷ್ಟು ಅದ್ಭುತವಗಿ ವಿನ್ಯಾಸಗೊಳಿಸಲಾದ ಈ ನೆಕ್ಲೈಸ್ ಬೆಲೆ ಎಷ್ಟಿರಬಹುದು ಊಹಿಸಬಲ್ಲಿರಾ? ನಾವೇ ಹೇಳ್ತೀವಿ ಕೇಳಿ. ಕೇನ್ಸ್ ನಲ್ಲಿ ದೀಪಿಕಾ ಪಡುಕೋಣೆಯನ್ನು ಇನ್ನಷ್ಟು ಸುಂದರವಾಗಿಸಿದ ಈ ನೆಕ್ಲೆಸ್ ಬೆಲೆ ಬರೋಬ್ಬರಿ ಮೂರು ಕೋಟಿ ಎಂಬತ್ತು ಲಕ್ಷ ಕೋಟಿ ರೂಪಾಯಿಗಳು! ಹೌದು ಪ್ಯಾಂಥೆರ್ ಪ್ರಾಣಿ ಪೌರಾಣಿಕ ಕಾಲದ್ದು ಎನ್ನುವ ದಾಖಲೆಯಿದೆ. ಅದರ ಸಾಂಕೇತಿಕವಾಗಿ ಸಿದ್ಧಪಡಿಸಲಾದ ಈ ನೆಕ್ಲೈಸ್ ಕೂಡ ಅಷ್ಟೇ ದುಬಾರಿ. ಕೇನ್ಸ್ ನ 75 ನೇ ಆವೃತ್ತಿಯಲ್ಲಿ ಭಾಗಿಯಾಗಿರುವ ದೀಪಿಕಾ ವಿಶ್ವದ ಗಮನ ಸೆಳೆಯುತ್ತಿರುವುದಂತೂ ಸುಳ್ಳಲ್ಲ.

Leave a Comment

error: Content is protected !!