
ಕತ್ರಿನಾ ಕೈಫ್ ಮತ್ತು ಶಾರುಖ್ ಖಾನ್ ಗೆ ಕೊ ರೋನಾ ಪಾಸಿಟಿವ್. ಉಳಿದ ಬಾಲಿವುಡ್ ನಟನಟಿಯರಿಗೆ ಇದೀಗ ನಡುಕ ಶುರುವಾಗಿದೆ ಯಾಕೆ ಗೊತ್ತಾ
ಇದೀಗ ಮತ್ತೆ ಕೊರೋನಾ ಅಲೆ ಶುರುವಾಗಿದೆ. ಇದು ನಾಲ್ಕನೇ ಅಲೆಯ ಪ್ರಾರಂಭ ಹಂತ ಇರಬಹುದು ಎಂಬ ಅಂದಾಜು ಮಾಡಲಾಗುತ್ತಿದೆ. ಜನಸಾಮಾನ್ಯರಿಗಿಂತ ಹೆಚ್ಚಾಗಿ ಸೆಲೆಬ್ರಿಟಿಗಳಲ್ಲಿ ಇದೀಗ ಕೊರೋನಾ ನಾಲ್ಕನೇ ಅಲೆ ಆವರಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಇದೀಗ ಬಾಲಿವುಡ್ ಸೆಲೆಬ್ರಿಟಿಗಳು ಇದಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಬಾಲಿವುಡ್ ನ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರ ಹೆಸರು ಇದೀಗ ಕೇಳಿ ಬರುತ್ತಿದೆ.
ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಮತ್ತು ಖ್ಯಾತ ನಟಿ ಕತ್ರಿನಾ ಕೈಫ್ ಗೆ ಕೊರೋನಾ ಪಾಸಿಟಿವ್ ಇದೆಯೆಂದು ಈಗಾಗಲೇ ಖಾತ್ರಿ ಪಡಿಸಿದ್ದಾರೆ. ಕತ್ರಿನಾ ಕೈಫ್ ಅವರು ಇದೇ ವಾರ IIFA 2022 ರ ಪ್ರಶಸ್ತಿ ಸ್ವೀಕರಿಸಲು ದುಬೈಗೆ ಹೋಗಬೇಕಾಗಿತ್ತು .ಆದರೆ ಕತ್ರಿನಾ ಕೈಫ್ ಅವರಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಇವರು ಕ್ವಾರಂಟೈನ್ ನಲ್ಲಿ ಬಂಧಿಯಾಗಿದ್ದಾರೆ. ನಟ ಶಾರುಖ್ ಖಾನ್ ಅವರಿಗೆ ಕೂಡ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಸಿನೆಮಾ ಶೂಟಿಂಗ್ ಗೆ ತೆರಳದೆ ಕ್ವಾರಂಟೈನ್ ನಲ್ಲಿ ಸಮಯ ಕಳೆಯುತ್ತಿದ್ದಾರೆ.
ಇದೀಗ ಕತ್ರಿನಾ ಕೈಫ್ ಮತ್ತು ಶಾರುಖ್ ಖಾನ್ ಗೆ ಪಾಸಿಟಿವ್ ಕಂಡು ಬಂದಿದ್ದು ಉಳಿದ ಬಾಲಿವುಡ್ ಖ್ಯಾತ ನಟ ನಟಿಯರಿಗೆ ಹೆದರಿಕೆ ಶುರುವಾಗಿದೆ. ಯಾಕೆಂದರೆ ಇದಕ್ಕಿಂತ ಒಂದು ವಾರದ ಮುಂಚೆ ಬಾಲಿವುಡ್ ನ ಎಲ್ಲಾ ನಟ ನಟಿಯರು ಕರಣ್ ಜೋಹರ್ ಅವರ ಬರ್ತ್ ಡೇ ಪಾರ್ಟಿಗೆ ಸೇರಿದ್ದರು. ಈ ಸಮಯದಲ್ಲಿ ಯಾರೂ ಕೂಡ ಮಾಸ್ಕ್ ಧರಿಸಿರಲಿಲ್ಲ ಮತ್ತು ಕೋವಿಡ್ ನಿಯಮಗಳನ್ನು ಪಾಲಿಸಲಿಲ್ಲ ಮನಬಂದಂತೆ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದರು. ಇದೀಗ ಇವರೆಲ್ಲಾ ಮಾಡಿದ ತಪ್ಪಿಗೆ ಬೆಲೆ ತೆರಬೇಕಾದ ಪರಿಸ್ಥಿತಿ ಬಂದಿದೆ.
ಇದೀಗ ಕರಣ್ ಜೋಹರ್ ಬರ್ತಡೇ ಗೆ ಬಂದಿದ್ದ ಬಾಲಿವುಡ್ ನ ಎಲ್ಲಾ ಸೆಲೆಬ್ರಿಟಿಗಳನ್ನು ಪರೀಕ್ಷೆಗೆ ಒಳಪಡಿಸಲಿದ್ದಾರೆ. ಇನ್ನೊಂದು ವಿಚಾರ ಏನೆಂದರೆ ಕರಣ್ ಜೋಹರ್ ಬರ್ತಡೇ ಪಾರ್ಟಿಗೆ ಆಗಮಿಸಿದ್ದ ಕಾರ್ತಿಕ್ ಆರ್ಯನ್ ಮತ್ತು ಆದಿತ್ಯ ರಾಯ್ ಕಪೂರ್ ಗೆ ಕೂಡ ಪಾಸಿಟಿವ್ ಕಂಡುಬಂದಿದೆ. ಕರಣ್ ಜೋಹರ್ ಅವರ ಪಾರ್ಟಿ ತುಂಬಾ ಜೋರಾಗಿತ್ತು ಕೇವಲ ಬಾಲಿವುಡ್ ನಟನಟಿಯರು ಅಷ್ಟೆ ಅಲ್ಲದೆ ದಕ್ಷಿಣ ಭಾರತದ ಖ್ಯಾತ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ,ತಮನ್ನಾ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದೀಗ ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲಾ ನಟ ನಟಿಯರಿಗೂ ಕೊರೋನಾ ಭಯ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.
