ಇಂತಹ ಇಳಿ ವಯಸ್ಸಿನಲ್ಲಿಯೂ ಆರೋಗ್ಯ ಲೆಕ್ಕಿಸದೆ ಕಾವೇರಿ ನೀರಿಗಾಗಿ ಲೀಲಾವತಿ ಅವರು ಏನ್ ಮಾಡಿದ್ದಾರೆ ಗೊತ್ತಾ..

Cauvery Strike Leelavathi entry: ಸ್ನೇಹಿತರೆ, ಇಂದು ರಾಜ್ಯದಾದ್ಯಂತ ಕಾವೇರಿ( ತಾಯಿಯನ್ನು ನಮ್ಮಲ್ಲೆ ಉಳಿಸಿಕೊಳ್ಳುವ ಸಲುವಾಗಿ ರೈತರು ಹಾಗೂ ಹೋರಾಟಗಾರರೆಲ್ಲರೂ ಬಂದ್ಗೆ ಕರೆ ನೀಡಿ ಕಾವೇರಿಯನ್ನು ತಮಿಳಿಯವರಿಗೆ ಬಿಟ್ಟು ಕೊಡದಂತೆ ಹೋರಾಟ ನಡೆಸುತ್ತಿದ್ದಾರೆ. ಹೀಗಿರುವಾಗ ನೆನ್ನೆ ಕನ್ನಡ ಸಿನಿಮಾ ರಂಗದ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಭಾಗದಲ್ಲಿ ನಡೆದಂತಹ ಸಭೆಗಳಲ್ಲಿ ಭಾಗಿಯಾಗಿ ಕಾವೇರಿಗಾಗಿ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದರು.

ಅದೇ ರೀತಿ 86 ವರ್ಷದ ಲೀಲಾವತಿ(Leelavathi) ಅಮ್ಮನವರು ಕೂಡ ತಮ್ಮ ಮಗ ವಿನೋದ್ ರಾಜ್ ಅವರೊಟ್ಟಿಗೆ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನಡೆದಂತಹ ಸಭೆಯಲ್ಲಿ ಭಾಗಿಯಾಗುವ ಮೂಲಕ ಇಂತಹ ಇಳಿಯ ವಯಸ್ಸಿನಲ್ಲಿ ತಮ್ಮ ಸಂಪೂರ್ಣ ಬೆಂಬಲ ನೆಲ ಜಲ ಹಾಗೂ ನುಡಿಗಾಗಿ ಇದ್ದೇ ಇರುತ್ತದೆ ಎಂಬುದನ್ನು ಸಾರಿದ್ದಾರೆ.

ಹೌದು ಗೆಳೆಯರೇ ಸಿನಿಮಾ ರಂಗವನ್ನು ತೊರೆದು ಸೋಲದೇವನಹಳ್ಳಿಯಲ್ಲಿ ಜಮೀನನ್ನು ಖರೀದಿಸಿ ರೈತ ಕುಟುಂಬಸ್ಥರಾಗಿ ಬದುಕುತ್ತಿರುವಂತಹ ಲೀಲಾವತಿ ಮತ್ತು ವಿನೋದ್ ರಾಜ್ ಅವರಿಗೆ ನಮ್ಮ ರಾಜ್ಯಕ್ಕೆ ಕಾವೇರಿ ಎಷ್ಟು ಮುಖ್ಯ ಎಂಬುದರ ಅರಿವಿದೆ. ಹೀಗಾಗಿ ರೈತರ ಪರವಾಗಿ ಬೆಂಬಲವನ್ನು ವ್ಯಕ್ತಪಡಿಸುವುದರ ಜೊತೆಗೆ “ನಾನು ಸಹ ಕಾವೇರಿ ಹೋರಾಟಕ್ಕೆ ಹೋರಾಡುವೆ ನಮ್ಮ ಜಲ, ನಮ್ಮ ನೆಲ, ನಮ್ಮ ನುಡಿ ಎಲ್ಲಾ ಕನ್ನಡಕ್ಕೋಸ್ಕರ ಕಾವೇರಿ ನೀರಿಗಾಗಿ ನಾನು ಹೋರಾಟಕ್ಕೆ ಬರುವೆ”

ಎಂದು ಲೀಲಾವತಿ ಅಮ್ಮನವರು ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ. ಇಂತಹ ವಯಸ್ಸಿನಲ್ಲಿಯೂ ಲೀಲಾವತಿ(Leelavathi) ಅಮ್ಮನವರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕನ್ನಡಕ್ಕಾಗಿ, ಕನ್ನಡ ನೆಲಕ್ಕಾಗಿ, ಕಾವೇರಿಗಾಗಿ ಹೋರಾಟ ನಡೆಸುತ್ತಾ ತಮ್ಮ ನೆಲಮಂಗಲದ ನಿವಾಸದಿಂದ ಮಂಡ್ಯ(Mandya)ಗೆ ಪ್ರತಿಭಟನೆ ಮಾಡಲು ತಮ್ಮ ಮಗ ವಿನೋದ್ ರಾಜ್(Vinod Raj) ಅವರೊಂದಿಗೆ ತೆರಳಿದ್ದಾರೆ.

ಇದನ್ನೂ ಓದಿ ಅಪ್ಪ ಅಮ್ಮನ ಜೊತೆ ರಾಧಿಕಾ ಪಂಡಿತ್ ಅಪರೂಪದ ಫೋಟೋಸ್! ಇಲ್ಲಿವೆ

Leave A Reply

Your email address will not be published.

error: Content is protected !!