ಅಪ್ಪಟ ರೈತನಾಗಿ ಹೊಸ ಟ್ರಾಕ್ಟರ್ ಓಡಿಸಿದ ಡಿ ಬಾಸ್‌. ಡಿ ಬಾಸ್‌ ಖರೀದಿಸಿದ ಹೊಸ ಟ್ರಾಕ್ಟರ್ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಸೆಲೆಬ್ರಿಟಿಗಳು ಅಥವ ಸ್ಟಾರ್ನ ಟರು ಅಂದ ಮೇಲೆ ಸಾಮಾನ್ಯ ಮನುಷ್ಯರಂತೆ ಬದುಕುವುದಿಲ್ಲ. ತಮ್ಮ ಸ್ಟೇಟಸ್ ಅನ್ನು ತೋರ್ಪಡಿಸುವುದಕ್ಕೆ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ದೊಡ್ಡದಾದ ಬಂಗಲೆ ದುಬಾರಿ ಕಾರುಗಳನ್ನು ಹೊಂದಿರುತ್ತಾರೆ. ಇತರೆ ಕೆಲವು ನಟರು ಹಾಗಲ್ಲ ಸಾಮಾನ್ಯ ಜನರಂತೆ ತುಂಬಾ ಸಿಂಪಲ್ಲಾಗಿ ಬದುಕುತ್ತಿದ್ದಾರೆ. ಇಂಥವರಲ್ಲಿ ನಮ್ಮ ಡಿ ಬಾಸ್ ಅವರೂ ಕೂಡ ಒಬ್ಬರು.

ನಟ ದರ್ಶನ್ ಅವರು ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ನಟ. ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಕೂಡ ಇವರೇ. ಪ್ರತಿ ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಕೂಡ ಕೋಟಿ ಕೋಟಿ ಹಣವನ್ನು ಸಂಭಾವನೆಯಾಗಿ ಮೂಲಕ ಪಡೆಯುತ್ತಾರೆ. ನಟ ದರ್ಶನ್ ಅವರು ಮನಸ್ಸು ಮಾಡಿದ್ದರೆ ದೊಡ್ಡದಾದ ಬಂಗಲೆಯಲ್ಲಿ ಕುಳಿತುಕೊಂಡು ಕೈಕಾಲುಗಳಿಗೆ ಆಳುಗಳನ್ನಿಟ್ಟುಕೊಂಡು ಆರಾಮವಾಗಿ ಜೀವನ ನಡೆಸಬಹುದಿತ್ತು. ಆದರೆ ದರ್ಶನ್ ಅವರು ಹಾಗಲ್ಲ.

ಮೈಸೂರಿನಲ್ಲಿ ಫಾರ್ಮ್ ಹೌಸ್ ಅನ್ನು ಖರೀದಿ ಮಾಡಿ ಕೃಷಿ ಮಾಡಿಕೊಂಡು ಸಾಧಾರಣ ರೈತ ನ ಹಾಗೆ ಜೀವನ ನಡೆಸುತ್ತಿದ್ದಾರೆ. ಸಿನಿಮಾಗಳ ಶೂಟಿಂಗ್ ಇಲ್ಲದೇ ಇದ್ದಲ್ಲಿ ಬಿಡುವಿನ ಸಮಯದಲ್ಲಿ ದರ್ಶನ್ ಅವರು ಗೆಸ್ಟ್ ಹೌಸ್ ಗೆ ಬಂದು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ತಾರೆ. ಪ್ರಾಣಿ ಪಕ್ಷಿಗಳನ್ನು ಸಾಕುವುದು ಹೊಲವನ್ನು ಉಳುವುದು ಇಂಥ ಕೆಲಸಗಳನ್ನು ಮಾಡಿ ಮಾಡಿಕೊಂಡಿರುತ್ತಾರೆ.

ದರ್ಶನ್ ಅವರು ಟ್ರ್ಯಾಕ್ಟರ್ ಮೇಲೆ ಕುಳಿತುಕೊಂಡು ತಮ್ಮ ಹೊಲದಲ್ಲಿ ಉಳುಮೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮಹೀಂದ್ರ ಕಂಪನಿ ಹೊಸದಾಗಿ ಟ್ರ್ಯಾಕ್ಟರನ್ನು ಡಿ ಬಾಸ್ ಖರೀದಿ ಮಾಡಿದ್ದಾರೆ. ಡಿ ಬಾಸ್ ಅವರು ಕೋಟಿ ಕೋಟಿ ಕೊಟ್ಟು ಕಾರು ಗಳನ್ನು ಖರೀದಿ ಮಾಡುತ್ತಾರೆ. ಹೊಸದಾದ ಟ್ರ್ಯಾಕ್ಟರನ್ನು ಖರೀದಿ ಮಾಡಿದ ದರ್ಶನ್ ಅವರು ಎಷ್ಟು ಹಣವನ್ನು ಕೊಟ್ಟಿರ ಬಹುದು ಎಂದು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತೆ.

ದರ್ಶನ್ ಮಹಿಂದ್ರಾ ಕಂಪೆನಿಯ ಅಲ್ಟ್ರಾ 605 DI ಮಾಡೆಲ್ ಟ್ರ್ಯಾಕ್ಟರ್ ಅನ್ನು ಖರೀದಿಸಿದ್ದಾರೆ. ಈ ಟ್ರ್ಯಾಕ್ಟರ್ 57 Hp ಎಂಜಿನ್ ಹೊಂದಿದೆ. 8 ಫಾರ್ವರ್ಡ್ ಗೇರ್, ಪವರ್ ಸ್ಟೀರಿಂಗ್ ,1500 -2000 kg ತೂಕವನ್ನು ಹೊರಬಲ್ಲ ಕೆಪ್ಯಾಸಿಟಿ ಈ ಟ್ರ್ಯಾಕ್ಟರ್ ಗಿದೆ. ಹಾಗೆ ಏರ್ ಫಿಲ್ಟರ್ ಮತ್ತು ಕೂಲಿಂಗ್ ಸಿಸ್ಟಮ್ ಕೂಡ ಇದೆ. ಮೂವತ್ತರಿಂದ ನಲವತ್ತು ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಶಕ್ತಿಯಿದೆ. ಮಹೀಂದ್ರ ಕಂಪೆನಿಯ ಈ ಹೈಟೆಕ್ ಟ್ರ್ಯಾಕ್ಟರ್ ನ ಬೆಲೆ 8 ಲಕ್ಷ ದಿಂದ ಶುರು ಆಗಿ ಹನ್ನೆರಡು ಲಕ್ಷದ ವರೆಗೂ ಇರುತ್ತೆ. ದಾಸ ದರ್ಶನ್ ಅವರು ಹತ್ತು ಲಕ್ಷ ರೂಪಾಯಿಗಳನ್ನು ಕೊಟ್ಟು ಈ ಟ್ರ್ಯಾಕ್ಟರನ್ನು ಖರೀದಿ ಮಾಡಿದ್ದಾರಂತೆ.

Leave a Comment

error: Content is protected !!