ಮೂರನೇ ಮದುವೆ ಆಗೋಕೆ ಹೊರಟಿದ್ದಾರೆ ಚಿರಂಜೀವಿ ಪುತ್ರಿ ಶ್ರೀಜಾ

ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿಯವರಿಗೆ ದೊಡ್ಡ ಹೆಸರಿದೆ. ಸಾಕಷ್ಟು ವರ್ಷಗಳ ಕಾಲ ಸಿನಿಮಾರಂಗವನ್ನು ಆಗಿದ ನಟ ಚಿರಂಜೀವಿ. ಅಲ್ಲದೇ ಕನ್ನಡದ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದ ಚಿರಂಜೀವಿ ಅವರಿಗೆ ಫ್ಯಾನ್ ಬಳಗವು ಅಷ್ಟೇ ಹೆಚ್ಚು. ಈಗಲೂ ಒಂದಿಲ್ಲೊಂದು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಚಿರಂಜೀವಿ ಸದ್ಯ ಮಗಳ ಕುರಿತಾಗಿನ ಗಾಸಿಪ್ ಎದುರಿಸುವಂತಾಗಿದೆ.

ಹೌದು, ಚಿರಂಜೀವಿ ಪುತ್ರಿ ಶ್ರೀಜಾ ಈಗ ಮೂರನೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾ. ಇವರು ಈ ಹಿಂದೆ ಮನೆಯವರ ವಿರೋಧವಿದ್ದರೂ ಪ್ರೇಮ ವಿವಾಹವನ್ನು ಆಗಿದ್ದರು. 2007ರಲ್ಲಿ ಶ್ರೀಜಾ ತಾನು ಪ್ರೀತಿಸಿದ ಸಿರೀಶ್ ಎನ್ನುವ ಹುಡುಗನ ಜೊತೆ ಮನೆಯವರು ಬೇಡವೆಂದರೂ ಕೇಳದೇ ಮದುವೆಯಾಗಿದ್ದರು. ಇವರಿಗೆ ಒಂದು ಮಗುವೂ ಇದೆ. ಆದರೆ ಈ ಪ್ರೇಮ ವಿವಾಹ ಬಹಳ ಕಾಲ ಹಾಗೆಯೇ ಉಳಿಯಲಿಲ್ಲ. ಶ್ರೀಜಾ ಜೀವನದಲ್ಲಿ ಆಗಲೇ ಬಿರುಗಾಳಿ ಎದ್ದಿತ್ತು.

ಸುಮಾರು ಐದಾರು ವರ್ಷ ಒಟ್ಟಿಗೆ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದ ಶ್ರೀಜಾ ಹಾಗೂ ಸಿರೀಶ್ ಜೋಡಿ ಕೊನೆಗೆ ಕಾರಣಾಂತರಗಳಿಂದ ವಿಚ್ಛೇದನವನ್ನು ಪಡೆದುಕೊಂಡಿತ್ತು. ಇದಾದ ಬಳಿಕ 2016ರಲ್ಲಿ ಮನೆಯವರು ನೋಡಿದ ಕಲ್ಯಾಣ ದೇವ ಎನ್ನುವ ಹುಡುಗನೊಂದಿಗೆ ಶ್ರೀಜಾ ಮದುವೆಯಾದರು. ಮೆಗಾಸ್ತಾರ್ ಚಿರಂಜೀವಿಯೇ ಮುಂದೆ ನಿಂತು ಕಲ್ಯಾಣ್ ಜೊತೆ ತಮ್ಮ ಪುತ್ರಿ ಶ್ರೀಜಾ ಅವರ ವಿವಾಹ ಮಾಡಿಸಿದ್ದರು. ಇದೀಗ ಮತ್ತೆ ಶ್ರೀಜಾ ಅವರ ವಿವಾಹದ ಬಗ್ಗೆ ನಾನಾ ಬಗೆಯ ಮಾತುಗಳು ಕೇಳಿಬರುತ್ತಿವೆ. ಕಲ್ಯಾಣ ದೇವ ಅವರೊಂದಿಗೆ ಸಂಸಾರ ಮಾಡುತ್ತಿದ್ದ ಶ್ರೀಜಾ ಇದೀಗ ಅವರಿಗೆ ವಿಚ್ಛೇದನ ನೀಡುತ್ತಿರುವ ವಿಷಯ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಅಷ್ಟೇ ಅಲ್ಲ ಮೆಗಾಸ್ಟಾರ್ ಚಿರಂಜೀವಿಯವರ ಮಗಳು ಶ್ರೀಜಾ ಇದೀಗ ಮತ್ತೆ ಇನ್ನೊಂದು ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ತನ್ನ ಬಹುಕಾಲದ ಗೆಳೆಯನೊಂದಿಗೆ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಮೆಗಾಸ್ಟಾರ್ ಚಿರಂಜೀವಿ ಪುತ್ರಿ! ಹೌದು ಶ್ರೀಜಾ ಇನ್ನೊಂದು ಮದುವೆಯಾಗುವುದಕ್ಕೆ ಹೊರಟಿದ್ದಾರೆ ಎಂದು ಟಾಲಿವುಡ್ ಸುದ್ದಿ ಮಾಡಿದೆ. ಇದು ಕೇವಲ ಊಹಾಪೋಹವೂ ಆಗಿರಬಹುದು. ಯಾಕೆಂದರೆ ಈ ವಿಷಯದ ಕುರಿತು ಯಾವುದೇ ಅಧಿಕೃತ ಮಾಹಿತಿಯೂ ಸಿಕ್ಕಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಶ್ರೀಜಾ ಅವರ ವಿವಾಹದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿವೆ.

ಅಂದಹಾಗೆ ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಕುಟುಂಬವಾಗಲಿ, ಶ್ರೀಜಾ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಪುತ್ರಿಯ ವಿಚ್ಛೇದನ ಹಾಗೂ ಇನ್ನೊಂದು ವಿವಾಹದ ಕುರಿತಂತೆ ಮೆಗಾಸ್ಟಾರ್ ಚಿರಂಜೀವಿ ಏನು ಹೇಳುತ್ತಾರೆ ಎಂದು ಸದ್ಯ ಟಾಲಿವುಡ್ ಕಾಯ್ತಾ ಇದೆ. ಒಟ್ಟಿನಲ್ಲಿ ಚಿರಂಜೀವಿ ಅವರ ಪುತ್ರಿ ವಿವಾಹಕ್ಕೆ ಸಂಬಂಧಿಸಿದ ವಿಷಯಗಳು ಕೇವಲ ಗಾಸಿಪ್ ಮಾತ್ರನಾ ಅಥವಾ ನಿಜವಾದ ಸುದ್ದಿಯೋ ಎಂಬುದು ಅಧಿಕೃತವಾಗಿ ತಿಳಿಯಬೇಕಷ್ಟೇ.

Leave A Reply

Your email address will not be published.

error: Content is protected !!