D ಬಾಸ್ ದರ್ಶನ್ ಅವರ ಮೊದಲ ಸಂಭಾವನೆ ಎಷ್ಟು ಗೊತ್ತಾ? ದರ್ಶನ್ ಈ ಮಟ್ಟಕ್ಕೆ ಬೆಳೆಯಲು ಅವರ ಶ್ರಮವೇ ಕಾರಣ, ಅಣಜಿನಾಗರಾಜ್ ಬಿಚ್ಚಿಟ್ಟ ಸತ್ಯ ನೋಡಿ..

ಸಿನಿಮಾ ಕ್ಷೇತ್ರ ಎಂದರೆ ಎಷ್ಟೋ ಜನ ಕಲಾವಿದರು ಬರುತ್ತಾರೆ ಹೋಗುತ್ತಾರೆ. ಆದರೆ ನಿಜವಾದ ಪ್ರತಿಭೆಯಿದ್ದವರು ಮಾತ್ರ ಉಳಿದುಕೊಳ್ಳುತ್ತಾರೆ. ಅಂತವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಕರ್ನಾಟಕದಲ್ಲಿ ಡಿ ಬಾಸ್ ನ್ನು ಇಷ್ಟಪಡದೇ ಇರುವ ಜನರೇ ಇಲ್ಲ. ನಟ ದರ್ಶನ್ ಅವರ ತಂದೆ ಕನ್ನಡದ ಖ್ಯಾತ ಕಲಾವಿದ ತೂಗುದೀಪ್ ಶ್ರೀನಿವಾಸ್. ಇವರು ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತ ಅಭಿನಯಕ್ಕೆ ಹೆಸರಾದವರು. ಆದರೆ ಇಂದು ಡಿ ಬಾಸ್ ನ ಗೆಲುವಿಗೆ ಇದು ಕಾರಣವಲ್ಲ. ತಮ್ಮ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯಿಂದ ಮೇಲೆ ಬಂದವರು ಚಾಲೆಂಜಿಂಗ್ ಸ್ಟಾರ್ ದರ್ಶನ್.

ದರ್ಶನ್ ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಅದರ ಹಿಂದೆ ಇರುವ ಪರಿಶ್ರಮವನ್ನು ನಾವು ಅಲ್ಲಗಳೆಯುವಂತಿಲ್ಲ. ಅದೆಷ್ಟೋ ಸಮಸ್ಯೆಗಳನ್ನ ಎದುರಿಸಿ, ಇಂದು ಇತರರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಮಟ್ಟಿಗೆ ದರ್ಶನ್ ತಲೆ ಎತ್ತಿ ನಿಂತಿದ್ದಾರೆ. ಕರುನಾಡ ಕರ್ಣ ದರ್ಶನ್ ಅವರನ್ನು ಪ್ರೀತಿಸದೆ ಇರುವವರೇ ಇಲ್ಲ. ಅದೆಷ್ಟು ಜನ ಇಂದಿಗೂ ದರ್ಶನ್ ಅವರ ಚಿತ್ರ ಬರುವುದನ್ನೇ ಕಾಯುತ್ತಿರುತ್ತಾರೆ. ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕಾಗಿ ಕಾತುರರಾಗಿರುತ್ತಾರೆ. ಹೀಗೆ ತಮ್ಮ ಅಭಿಮಾನಿಗಳಿಗೆ ರಸದೌತಣವನ್ನು ನೀಡುವುದಕ್ಕಾಗಿ ಕ್ರಾಂತಿಯ ಮೂಲಕ ಬರಲಿದ್ದಾರೆ ದರ್ಶನ್.

ಎಸ್ ನಾರಾಯಣ್ ಅವರು ಮಹಾಭಾರತ ಸಿನಿಮಾದಲ್ಲಿ ನಟಿಸಲು ದರ್ಶನ್‌ಗೆ ಅವಕಾಶ ನೀಡಿದ್ದರು. ಈ ಚಿತ್ರ 1997, ಆಗಸ್ಟ್ 11ರಂದು ರಿಲೀಸ್ ಆಗಿತ್ತು. 2000ರಲ್ಲಿ ಡಿ ರಾಜೇಂದ್ರ ಸಿಂಗ್ ಬಾಬು ಅವರ ದೇವರ ಮಗ, ಎಲ್ಲರ ಮನೆ ದೋಸೆನೂ ತೂತೇನೇ, ಭೂತಯ್ಯನ ಮಕ್ಕಳು, ಹರಿಶ್ಚಂದ್ರ ಮುಂತಾದ ಚಿತ್ರಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಆಗ ಅವರಿಗೆ ಚಿಕ್ಕ ಚಿಕ್ಕ ಪಾತ್ರಗಳು ಸಿಗುವುದು ಕೂಡ ಕಷ್ಟವಾಗುತ್ತಿತ್ತು.

2002ರಲ್ಲಿ ಪಿ ಎನ್ ಸತ್ಯ ನಿರ್ದೇಶನದ ಮೆಜೆಸ್ಟಿಕ್ ಸಿನಿಮಾದಲ್ಲಿ ದರ್ಶನ್ ನಾಯಕರಾಗಿ ಕಾಣಿಸಿಕೊಂಡರು. ಈ ಚಿತ್ರದ ನಂತರ ದರ್ಶನ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. 2005ರಲ್ಲಿ ಶಾಸ್ತ್ರಿ ಸಿನಿಮಾ ತೆರೆಕಂಡಿತ್ತು. ಶಾಸ್ತ್ರಿ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗಿ ಮಾನ್ಯ ಕಾಣಿಸಿಕೊಂಡಿದ್ದರು. ಈ ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್‌, ನಿರ್ದೇಶಕ ಪಿ.ಎನ್‌. ಸತ್ಯ, ಸಂಗೀತ ನಿರ್ದೇಶಕ ಸಾಧು ಕೋಕಿಲ, ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅಣಜಿ ನಾಗರಾಜ್ ಅವರು ಶಾಸ್ತ್ರಿ ಸಿನೆಮಾ ಮಾಡಿದ್ದಕ್ಕೆ ದರ್ಶನ್ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ. ಹಾಗೆ ಅವರ ಮೊದಲ ನಟನೆಗೆ ಪಡೆದ ಹಣ ಕೇವಲ 90 ರೂಪಾಯಿ ಆಗಿತ್ತು ಎಂದಿದ್ದಾರೆ. ನಂತರ ಕರಿಯ, ನಮ್ಮ ಪ್ರೀತಿಯ ರಾಮು, ದಾಸ, ಕಲಾಸಿಪಾಳ್ಯ, ಅಯ್ಯ, ಸುಂಟರಗಾಳಿ, ಮಂಡ್ಯ, ಗಜ, ಯೋಧ, ಪೊರ್ಕಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇಂದು ದರ್ಶನ್ ಅವರ ಸಂಭಾವನೆ ಕೂಡ ದೊಡ್ಡ ಮೊತ್ತದಲ್ಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಅಫೀಸ್ ಸುಲ್ತಾನ್ ಅಂತ ಬ್ರಾಂಡ್ ಆಗಿರೋ ನಟ. ಸದ್ಯಕ್ಕೆ ಕ್ರಾಂತಿ ಸಿನಿಮಾದ ಬಿಡುಗಡೆಯ ತಯಾರಿಯಲ್ಲಿರುವ ಸಾರಥಿಯ ಸಂಭಾವನೆ ಮತ್ತೆ ಗಗನಕ್ಕೆ ಏರಿದೆ. ಅಷ್ಟಕ್ಕೂ ಚಾಲೆಂಜಿಂಗ್ ಸ್ಟಾರ್ ಸಂಭಾವನೆ ಕೇಳಿದ್ರೆ ಫ್ಯಾನ್ಸ್ ಥ್ರಿಲ್ ಆಗೋದು ಗ್ಯಾರಂಟಿ. ಆದರೆ ದರ್ಶನ್ ಇವತ್ತು ಕೋಟಿ ಕೋಟಿ ಸಂಭಾವನೆ ತೆಗೆದುಕೊಳ್ಳುವುದರ ಹಿಂದೆ ಗೆಲ್ಲುವ ಹಠ, ಒಂದಿಷ್ಟು ಹಸಿವು ಹಾಗೂ ಅವಮಾನಗಳು, ಒಬ್ಬ ಲೈಟ್ ಬಾಯ್’ನ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದೆ.

ಕರಿಯ ಸಿನಿಮಾದಿಂದ ಹಿಡಿದು ಕುರುಕ್ಷೇತ್ರ ಸಿನಿಮಾವರೆಗೂ ದರ್ಶನ್ ಲಕ್ಷ ಹಾಗೂ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರೆ. ಅದರಲ್ಲಿ ಬಾಕ್ಸ್ ಆಫೀಸ್ ಹಿಟ್ ಆದ ಸಿನಿಮಾ ಕಲಾಸಿಪಾಳ್ಯ. ಈ ಸಿನಿಮಾಕ್ಕೆ ದರ್ಶನ್ 72 ಲಕ್ಷ ಸಂಭಾವನೆಯನ್ನ ಪಡೆದಿದ್ದರು. ದರ್ಶನ್ ಖಾಕಿ ತೊಟ್ಟು ಫಸ್ಟ್ ಟೈಮ್ ಖಡಕ್ ಪೊಲೀಸ್ ಆಗಿ ಕಾಣಿಸಿಕೊಂಡ ಸಿನಿಮಾ ಅಯ್ಯ. ಈ ಸಿನಿಮಾಕ್ಕೆ ಬರೋಬ್ಬರಿ 75 ಲಕ್ಷ ಸಂಭಾವನೆ ಪಡೆದಿದ್ದರು.

2008ರಲ್ಲಿ ದರ್ಶನ್’ಗೆ ಬಿಗ್ ಹಿಟ್ ಕೊಟ್ಟ ಸಿನಿಮಾ ಗಜ. ಮಾಸ್ ಅಂಡ್ ಕ್ಲಾಸ್ ಅವತಾರದಲ್ಲಿ ಕಾಣಿಸಿಕೊಂಡು ದರ್ಶನ್ ಈ ಚಿತ್ರಕ್ಕಾಗಿ ಪಡೆದ ಸಂಭಾವನೆ 80 ಲಕ್ಷ. ಮಾಸ್ ಹೀರೋ ಅಂತ ಬ್ರಾಂಡ್ ಆಗಿದ್ದ ದರ್ಶನ್ ಫಸ್ಟ್ ಟೈಮ್ ಐತಿಹಾಸಿಕ ಸಿನಿಮಾ ಮಾಡಿ ಬೆಳ್ಳಿ ತೆರೆ ಮೇಲೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನಾಗಿ ಮಿಂಚಿದರು. ನಿರ್ಮಾಪಕ ಆನಂದ್ ಅಪ್ಪುಗೊಳ್ ದರ್ಶನ್ ಕೊಟ್ಟ ಸಂಭಾವನೆ ಕೇಳಿದ್ರೆ ಆಶ್ಚರ್ಯಪಡೋದು ಗ್ಯಾರಂಟಿ.

ಲಕ್ಷ , ಒಂದು ಕೋಟಿ ಅಂತಾ ಇದ್ದ ದರ್ಶನ್ ಸಂಭಾವನೆ ಹೆಚ್ಚಾಗಿದ್ದು ಇಲ್ಲಿದಂಲೇ. ಈ ಸಿನಿಮಾಕ್ಕಾಗಿ ದರ್ಶನ್ ಬರೋಬ್ಬರಿ 4 ಕೋಟಿ. ದರ್ಶನ್ ಪ್ರೀತಿಸುವ ಹುಡ್ಗನಾಗಿ ಕಾಣಿಸಿಕೊಂಡ ಸಿನಿಮಾ ಬುಲ್ ಬುಲ್. ಈ ಸಿನಿಮಾಕ್ಕೆ ದರ್ಶನ್ ಪಡೆದ ಸಂಭಾವನೆ ನಾಲ್ಕುವರೆ ಕೋಟಿ. ಡಾನ್ ಪಾತ್ರದಲ್ಲಿ ಜಗ್ಗುದಾದನಾಗಿ ದರ್ಶನ್ ಮಿಂಚಿದ ಸಿನಿಮಾ ಜಗ್ಗುದಾದ. ಈ ಚಿತ್ರಕ್ಕಾಗಿ ದರ್ಶನ್ ಬರೋಬ್ಬರಿ ಐದೂವರೆ ಕೋಟಿ ತೆಗೆದುಕೊಂಡಿದ್ದರು. ಈ ಸಿನಿಮಾ ನಂತರ ದರ್ಶನ್ ಸಂಭಾವನೆ ಏಕಾಏಕಿ ಆಕಾಶದ ಎತ್ತರಕ್ಕೆ ಏರಿತ್ತು. ದರ್ಶನ್ ಸಿನಿಮಾ ಕರಿಯರ್’ನ 50 ನೇ ಸಿನಿಮಾವಾಗಿರೋ ಕುರುಕ್ಷೇತ್ರ ಸಿನಿಮಾಕ್ಕೆ ದರ್ಶನ್ ಬಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ. ನಿರ್ಮಾಪಕ ಮುನಿರತ್ನ ಆಪ್ತರ ಪ್ರಕಾರ ದರ್ಶನ್ 7 ಕೋಟಿ ಸಂಭಾವನೆ ಪಡೆದಿದ್ದಾರೆ.

ದರ್ಶನ್ ಎಂಥ ಅದ್ಭುತ ಕಲಾವಿದ ಅಂತ ಎಲ್ಲರಿಗೂ ಗೊತ್ತು. ತಮ್ಮ ಮೊದಲ ಸಿನಿಮಾ ಮೆಜೆಸ್ಟಿಕ್ನಲ್ಲಿ ಕನ್ನಡಿಗರ ಹಾರ್ಟ್ ಗೆದ್ದವರು ದರ್ಶನ್. ದಾಸನ ಯಾವುದೇ ಸಿನಿಮಾ ಬರುತ್ತೆ ಅಂದ್ರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಇನ್ನು ಸಿನಿಮಾದಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲಿ ಹೀರೋ ಆಗಿದ್ದಾರೆ ದರ್ಶನ್. ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಾಕಷ್ಟು ಶ್ರಮಪಟ್ಟು ಇಂದು ಕರ್ನಾಟಕದ ಜನತೆ ಗುರುತಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ ಎಂದರೆ ಅದು ಅವರ ಪರಿಶ್ರಮದ ಫಲ. ಸಾವಿರದಿಂದ ಲಕ್ಷ, ಲಕ್ಷದಿಂದ ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿರುವುದು ನಿಜವಾಗಿಯೂ ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ.

ಚಿತ್ರರಂಗದ ಅನೇಕ ಯುವ ಕಲಾವಿದರು, ನಿರ್ದೇಶಕರು, ತಂತ್ರಜ್ಞರಿಗೆ ದರ್ಶನ್ ಪ್ರೋತ್ಸಾಹ ನೀಡುತ್ತಾರೆ, ಅವರ ಕೈಲಾದಷ್ಟು ಸಹಾಯ ಕೂಡ ಮಾಡುತ್ತಾರೆ. ಇಂದು ಚಿತ್ರರಂಗದ ಬಹುತೇಕರು ದರ್ಶನ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ಆರಾಧ್ಯ ದೈವ ಮುಂತಾದ ಹೆಸರುಗಳಿಂದ ದರ್ಶನ್ ಇಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ಇಂದು ಇಷ್ಟು ದೊಡ್ಡ ಸ್ಟಾರ್ ನಟನಾಗಿ ಬೆಳೆದರೂ ಕೂಡ ದರ್ಶನ್ ಅವರು ಬೆಳೆದು ಬಂದ ಹಾದಿಯನ್ನು ಮರೆತಿಲ್ಲ. ಇವರ ಸರಳತೆ ಚಿತ್ರರಂಗದ ಬಹುತೇಕರಿಗೆ ಇಷ್ಟವಾಗುತ್ತದೆ.

Leave a Comment

error: Content is protected !!