ಇದ್ದಕ್ಕಿದ್ದಂತೆ ಟೋಪಿ ಶಾಲು ಹಾಕಿಕೊಂಡು ಜಮೀರ್ ಅಹ್ಮದ್ ಜೊತೆ ಕಾಣಿಸಿಕೊಂಡ ಡಿ ಬಾಸ್. ಕಾರಣವೇನು ಗೊತ್ತಾ ?

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ನಾನಾ ರೀತಿಯ ಕ್ಷೇತ್ರಗಳಲ್ಲಿ ಸ್ನೇಹಿತರಿದ್ದಾರೆ. ದರ್ಶನ್ ಅವರು ಸ್ನೇಹ ಜೀವಿ ಎಂಬುದು ನಮಗೆಲ್ಲ ಗೊತ್ತಿರುವ ವಿಷಯ ಸ್ನೇಹಿತರನ್ನು ಎಂದಿಗೂ ಕೈಬಿಡುವ ಮನುಷ್ಯ ಇವರಲ್ಲ. ತನ್ನೊಂದಿಗೆ ತನ್ನ ಸ್ನೇಹಿತರು ಕೂಡ ಬೆಳೆಯಬೇಕು ಎನ್ನುವ ಮನೋಭಾವ ಹೊಂದಿರುವ ಡಿ ಬಾಸ್ ದೊಡ್ಡದಾದ ಸ್ನೇಹ ಬಳಗ ವಿದೆ. ಡಿ ಬಾಸ್ ಅವರಿಗೆ ಚಿತ್ರರಂಗ ಕ್ಕಿಂತ ಹೆಚ್ಚಾಗಿ ರಾಜಕೀಯ ರಂಗದಲ್ಲಿ ಸ್ನೇಹಿತರ ಜೊತೆ ಒಡನಾಟ ಹೆಚ್ಚಿದೆ.

ಇತ್ತೀಚೆಗೆ ಡಿ ಬಾಸ್ ಅವರು MLA ಜಮೀರ್ ಅಹ್ಮದ್ ಖಾನ್ ಮತ್ತು ಬೀಸಿ ಪಾಟೀಲ್ ಅವರ ಜತೆ ಹೆಚ್ಚು ಒಡನಾಟ ಬೆಳೆಸುತ್ತಿರುವ ದೃಶ್ಯಗಳು ಕಾಣಸಿಗುತ್ತಿವೆ. ಅದರಲ್ಲೂ ವಿಶೇಷವಾಗಿ ಜಮೀರ್ ಅಹ್ಮದ್ ಖಾನ್ ಅವರ ಜೊತೆ ಡಿ ಬಾಸ್ ಅವರಿಗೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ. ಜಮೀರ್ ಅಹ್ಮದ್ ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ಸಮಾರಂಭಗಳು ನಡೆದರೂ ಡಿ ಬಾಸ್ ಅವರು ಹೋಗಿ ಭಾಗಿಯಾಗುತ್ತಾರೆ.

ಹಾಗೆ ಡಿ ಬಾಸ್ ಅವರ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಅವರು ಕೂಡ ಭಾಗಿಯಾಗುತ್ತಾರೆ. ಇತ್ತೀಚೆಗೆ ಜಮೀರ್ ಅಹ್ಮದ್ ಖಾನ್ ಅವರ ಮಗನ ಹುಟ್ಟುಹಬ್ಬವನ್ನು ಆಚರಿಸಲಿಕ್ಕೆ ಡಿ ಬಾಸ್ ಅವರು ಜಮೀರ್ ಅಹಮ್ಮದ್ ಖಾನ್ ಅವರ ಮನೆಗೆ ಹೋಗಿದ್ದರು ನಂತರ ಅಲ್ಲಿ ಕೇಕ್ ಕಟ್ ಮಾಡಿ ಜಮೀರ್ ಪುತ್ರನಿಗೆ ಹುಟ್ಟುಹಬ್ಬದ ಶುಭ ಕೋರಿದರು.

ಇದೀಗ ಡಿ ಬಾಸ್ ಅವರು ಮತ್ತೆ ಜಮೀರ್ ಅಹಮ್ಮದ್ ಖಾನ್ ಅವರ ಮನೆಯ ಸಮಾರಂಭವೊಂದಕ್ಕೆ ಭಾಗಿಯಾಗಿರುವ ದೃಶ್ಯ ಕಂಡುಬಂದಿದೆ. ಡಿ ಬಾಸ್ ಅವರು ಟೋಪಿ ಹಾಗೂ ಶಾಲು ಹಾಕಿಕೊಂಡು ಜಮೀರ್ ಅಹ್ಮದ್ ಅವರ ಜೊತೆ ಫೋಟೋ ತೆಗೆಸಿಕೊಂಡಿರುವ ಚಿತ್ರಗಳು ಇದೀಗ ವೈರಲ್ ಆಗುತ್ತಿದೆ. ದರ್ಶನ್ ಅವರ ಅವತಾರ ನೋಡಿ ಹಲವಾರು ಜನರಲ್ಲಿ ಕುತೂಹಲ ಮೂಡಿದೆ. ದರ್ಶನ್ ಅವರು ಯಾಕೆ ಟೋಪಿ ಶಾಲು ಹಾಕಿಕೊಂಡು ಜಮೀರ್ ಅವರ ಜೊತೆ ಕೂತಿದ್ದಾರೆ ಎಂದು ಪ್ರಶ್ನೆ ಮೂಡಿದೆ.

ಇದಕ್ಕೆ ಕಾರಣವೇನೆಂದರೆ ಏಪ್ರಿಲ್ ಎರಡರಿಂದ ಮುಸ್ಲಿಂ ಧರ್ಮದವರ ರಮ್ಜಾನ್ ಹಬ್ಬ ಶುರುವಾಗಿದೆ. ಆದಕಾರಣ ಜಮೀರ್ ಅಹಮ್ಮದ್ ಖಾನ್ ಅವರ ಮನೆಯಲ್ಲಿ ರಮ್ಜಾನ್ ಹಬ್ಬದ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು.ಇಫ್ತಾರ್ ಕೂಟಕ್ಕೆ ಡಿ ಬಾಸ್ ಅವರನ್ನು ಅತಿಥಿಯಾಗಿ ಕರೆದಿದ್ದರು. ಡಿ ಬಾಸ್ ಅವರು ಇಫ್ತಾರ್ ಕೂಟಕ್ಕೆ ಜಮೀರ್ ಅಹಮ್ಮದ್ ಖಾನ್ ಅವರ ಜೊತೆ ನೆಲದ ಮೇಲೆ ಕೂತುಕೊಂಡು ಭೋಜನವನ್ನು ಸವಿದಿದ್ದಾರೆ. ಝಮೀರ್ ಅಹ್ಮದ್ ಖಾನ್ ಅವರ ಮನೆಗೆ ಬಂದು ಅವರ ಸಂಪ್ರದಾಯದಂತೆ ಭೋಜನವನ್ನು ಮಾಡಿದ್ದಾರೆ. ಪದೇ ಪದೆ ಡಿ ಬಾಸ್ ಅವರು ಸರ್ವಧರ್ಮ ಪ್ರೇಮಿ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ.

Leave A Reply

Your email address will not be published.

error: Content is protected !!