
Darshan Thoogudeepa: ಟೆನ್ನಿಸ್ ಕೃಷ್ಣ ಅವರ ಕಷ್ಟದ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ್ದೇನು ಗೊತ್ತಾ?
Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕಳೆದ 25 ವರ್ಷಗಳಿಂದಲೂ ಕೂಡ ಕನ್ನಡ ಕಲಾ ದೇವಿಯ ಕಲಾ ಪೂಜೆಯನ್ನು ಮಾಡಿಕೊಂಡು ಬರುತ್ತಿರುವಂತಹ ಕಲಾರಾಧಕ.
ಯಾವುದೇ ಸಿನಿಮಾಗಳು ಇರಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳಿಗೆ ಇದ್ದಷ್ಟು ಕ್ರೇಜ್ ಖಂಡಿತವಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಮುಂದೆ ಇರಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳಿಗೆ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಕೂಡ ಕ್ರೇಜಿದೆ. ಇನ್ನು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ 90ರ ದಶಕದ ಫೇವರೆಟ್ ಕಾಮಿಡಿಯನ್ ಆಗಿದ್ದ ಟೆನ್ನಿಸ್ ಕೃಷ್ಣ(Tennis Krishna) ಅವರ ಬಗ್ಗೆ.

ಕೃಷ್ಣ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಒಂದೇ ಒಂದು ಸಿನಿಮಾದ ಅವಕಾಶ ಕೂಡ ಸಿಗುತ್ತಿಲ್ಲ ಹೀಗಾಗಿ ಅವರ ಜೀವನ ನಡೆಸುವುದು ಕೂಡ ದುಸ್ತರವಾಗಿದೆ ಎಂಬುದಾಗಿ ತಿಳಿದುಬಂದಿದೆ. ಅದನ್ನು ಇತ್ತೀಚಿಗಷ್ಟೇ ಅವರ ಮಗನಿಗೆ ಶಾಲೆಯ ಫೀಸ್ ಕಟ್ಟಲು ಕೂಡ ಅವರ ಬಳಿ ದುಡ್ಡಿರಲಿಲ್ಲ. ಹೀಗಾಗಿ ಮಾಧ್ಯಮದವರು ಕನ್ನಡದ ಸ್ಟಾರ್ ನಟರ ಬಳಿ ಹೋಗಿ ಕೇಳಿ ನಿಮಗೆ ಹಣ ಸಿಗಬಹುದೇ ಎಂಬುದಾಗಿ ಹೇಳಿದ್ದರು.
ಆದರೆ ಯಾರ ಬಳಿ ಕೇಳಿದರೂ ಕೂಡ ಟೆನಿಸ್ ಕೃಷ್ಣ ಅವರಿಗೆ ಹಣ ಸಿಗಲಿಲ್ಲ ಡಿ ಬಾಸ್(Dboss) ರವರ ಬಳಿ ಹೋಗಿ ಕೇಳಿದಾಗ ಮಾತ್ರ ಅವರು ಹಿಂದು ಮುಂದು ಯೋಚಿಸದೆ ಸೋಮವಾರ ಬರಲು ಹೇಳಿ ನೇರವಾಗಿ ಹಣವನ್ನು ನೀಡಿ ಬಿಡುತ್ತಾರೆ. ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹಿರಿಯ ಕಲಾವಿದರ ಮೇಲೆ ತೋರಿಸುವಂತಹ ಗೌರವ ಹಾಗೂ ಪ್ರೀತಿಯ ನಿದರ್ಶನ.