ತನ್ನನ್ನು ಬ್ಯಾನ್ ಮಾಡಿದ ಎಲ್ಲಾ ನ್ಯೂಸ್ ಚಾನೆಲ್ ಗಳಿಗೆ ತನ್ನದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟ ಡಿ ಬಾಸ್

ಡಿ ಬಾಸ್ ಹೆಸರು ಡಿ ಕರ್ನಾಟಕದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಕನ್ನಡದ ನಟರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರೆಂದರೆ ಅದು ಡಿ ಬಾಸ್. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವ ಅಭಿಮಾನಿಗಳನ್ನು ದರ್ಶನ್ ಅವರ ಸಂಪಾದನೆ ಮಾಡಿದ್ದಾರೆ. ಹಾಗೆ ಪ್ರೀತಿಯಿಂದ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಗಳು ಎಂದು ಕರೆಯುತ್ತಾರೆ. ದರ್ಶನ್ ಅವರಿಗೆ ಇರುವ ಕ್ರೇಜ್ ಮತ್ತು ಜನಪ್ರಿಯತೆಯನ್ನು ಯಾರಿಂದಲೂ ಕೂಡ ಕುಗ್ಗಿಸೋಕೆ ಸಾಧ್ಯವಿಲ್ಲ.

ದರ್ಶನ್ ಅವರನ್ನು ಇತ್ತೀಚೆಗೆ ನ್ಯೂಸ್ ಚಾನೆಲ್ ಗಳು ಬ್ಯಾನ್ ಮಾಡಿರುವ ವಿಚಾರ ನಿಮಗೆಲ್ಲ ತಿಳಿದಿರಬಹುದು. ದರ್ಶನ್ ಅವರು ನ್ಯೂಸ್ ಚಾನೆಲ್ಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋ ವೈರಲ್ ಆಗಿತ್ತು.. ಇದೇ ಕಾರಣದಿಂದ ನ್ಯೂಸ್ ಚಾನೆಲ್ ಗಳು ದರ್ಶನ್ ಅವರ ಮೇಲೆ ಕೋಪಗೊಂಡು ಅವರನ್ನು ಬ್ಯಾನ್ ಮಾಡಿದ್ದಾರೆ. ಕನ್ನಡದ ನ್ಯೂಸ್ ಚಾನೆಲ್ ಗಳು ದರ್ಶನ್ ಅವರ ಸುದ್ದಿಯನ್ನು ಪ್ರಚಾರ ಮಾಡದೆ ಸುಮಾರು ಒಂದು ವರ್ಷಗಳು ಕಳೆದಿವೆ. ದರ್ಶನ್ ಅವರ ಮುಂದಿನ ಯಾವುದೇ ಸಿನಿಮಾಗಳ ಪ್ರಚಾರಗಳನ್ನು ಗುಡ್ ನ್ಯೂಸ್ ಚಾನಲ್ ಗಳು ಪ್ರಚಾರ ಮಾಡೋಕೆ ರೆಡಿ ಇಲ್ಲ.

ದರ್ಶನ್ ಅವರು ಈಗಾಗಲೇ ಕ್ರಾಂತಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಒಂದು ದಿನ ಕೂಡ ದರ್ಶನ್ ಅವರ ಈ ಹೊಸ ಸಿನಿಮಾದ ಬಗ್ಗೆ ನ್ಯೂಸ್ ಚಾನೆಲ್ ಗಳು ಯಾವುದೇ ಮಾಹಿತಿ ಅಥವಾ ಪ್ರಚಾರ ನೀಡಿಲ್ಲ. ದರ್ಶನ್ ಅವರ ಜನಪ್ರಿಯತೆಯನ್ನು ಕುಗ್ಗಿಸುವ ಪ್ರಯತ್ನದಲ್ಲಿ ನ್ಯೂಸ್ ಚಾನೆಲ್ ಗಳು ಮುಂದಾಗಿದ್ದಾರೆ. ಆದರೆ ವಿಪರ್ಯಾಸವೆಂದರೆ ದರ್ಶನ್ ಅವರ ಜನಪ್ರಿಯತೆಯನ್ನು ಕುಗ್ಗಿಸುವಲ್ಲಿ ನ್ಯೂಸ್ ಚಾನೆಲ್ ಗಳ ಕೈಯಿಂದ ಸಾಧ್ಯವಾಗುತ್ತಿಲ್ಲ. ದರ್ಶನ್ ಅವರ ಕ್ರೇಜ್ ಇನ್ನೂ ಕೂಡ ಜಾಸ್ತಿನೇ ಇದೆ.

ದರ್ಶನ್ ಅವರನ್ನು ಬ್ಯಾನ್ ಮಾಡಿದ ಮೇಲಿಂದ ನ್ಯೂಸ್ ಚಾನೆಲ್ ಗಳ ಟಿಆರ್ ಪಿ ಕೂಡ ಕಡಿಮೆಯಾಗಿದೆ. ದರ್ಶನ್ ಅವರ ಅಭಿಮಾನಿಗಳು ನ್ಯೂಸ್ ಚಾನೆಲ್ ಗಳನ್ನು ಅನ್ ಸಬ್ ಸ್ಕ್ರೈಬ್ ಮಾಡಿ ದ್ದಾರೆ. ಇದೀಗ ಸ್ವತಃ ದರ್ಶನ್ ಅವರು ಕೂಡ ನ್ಯೂಸ್ ಚಾನೆಲ್ ಗಳು ಬ್ಯಾನ್ ಮಾಡಿರುವ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಖಡಕ್ಕಾಗಿ ನ್ಯೂಸ್ ಚಾನೆಲ್ ಗಳಿಗೆ ಖಡಕ್ ಆಗಿ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳ ಅಕೌಂಟ್ ನಲ್ಲಿ ದರ್ಶನ್ ಅವರು ಈ ಕೆಳಗಿನ ಎರಡು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ಬರೆದು ಪೋಸ್ಟ್ ಮಾಡಿರೋ ಫೋಟೋ ಒಂದನ್ನು ದರ್ಶನ್ ಅವರು ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಬರೆದಿರುವ ಹಾಗೆ.. ” ಡಿ ಬಾಸ್ ಅವರ ಕ್ರಾಂತಿ ಚಿತ್ರಕ್ಕೆ ಪ್ರಚಾರದ ಸಂಕಷ್ಟ ಎದುರಾಗಬಹುದು. ಒಂದು ಕಡೆ ಕನ್ನಡ ನ್ಯೂಸ್ ಚಾನೆಲ್ ಗಳು ದರ್ಶನ್ ಅವರನ್ನು ಬೆಂಬಲಿಸುತ್ತಿಲ್ಲ. ಮತ್ತು ದರ್ಶನ್ ಅವರಿಗೆ ಯಾವುದೇ ರೀತಿಯ ಪ್ರಚಾರ ತಂಡವು ಕೂಡ ಇಲ್ಲ. ನಾವು ದರ್ಶನ್ ಅಭಿಮಾನಿಗಳು ಅವರ ಜೊತೆ ನಿಲ್ಲಬೇಕು ಮತ್ತು ಕ್ರಾಂತಿ ಚಿತ್ರವನ್ನು ಯಶಸ್ವಿಗೊಳಿಸಬೇಕು.ದರ್ಶನ್ ಅವರ ಕ್ರಾಂತಿ ಚಿತ್ರ ಡಿ ಬಾಸ್ ಅಭಿಮಾನಿಗಳ ಸ್ವಾಭಿಮಾನದ ಗೆಲುವು ಆಗಬೇಕು” ಎಂದು ಡಿ ಬಾಸ್ ಅಭಿಮಾನಿಗಳು ಹೊಸ ಅಭಿಯಾನವೊಂದನ್ನು ಶುರು ಮಾಡಿದ್ದಾರೆ ಇದಕ್ಕೆ ಸ್ವತಃ ದರ್ಶನ್ ಅವರು ಕೂಡ ಬೆಂಬಲ ಸೂಚಿಸಿದ್ದು ನನಗೆ ನನ್ನ ಅಭಿಮಾನಿಗಳ ಸಪೋರ್ಟ್ ಒಂದು ಇದ್ದರೆ ಸಾಕು ಯಾವ ಮಾಧ್ಯಮಗಳು ಬೇಡ ಎಂದು ಹೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!