Dboss Yash: ಅಭಿಮಾನಿಗಳ ಊಹೆಯನ್ನೇ ತಪ್ಪು ಮಾಡಿದ್ರು ಜೋಡೆತ್ತುಗಳು. ಡಿ ಬಾಸ್ ಯಶ್ ಫ್ರೆಂಡ್ಶಿಪ್ ಜೋರು.

Dboss Yash ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಬೇರೆ ನಟರನ್ನು ಹೀನಾಯವಾಗಿ ಬಯ್ಯುವುದು ಹಾಗೂ ಟೀಕಿಸುವುದನ್ನು ಮಾಡುತ್ತಲೇ ಬಂದಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಬೇರೆ ಸಿನಿಮಾರಂಗದ ಅಭಿಮಾನಿಗಳಿಗಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ(Kannada Film Industry) ಅಭಿಮಾನಿಗಳಿಗೆ ಈ ರೀತಿಯ ಅಭ್ಯಾಸಗಳು ಹೆಚ್ಚು ಎಂದು ಹೇಳಬಹುದಾಗಿದೆ.

ಅದರಲ್ಲೂ ಮೊದಲಿನಿಂದಲೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಅಭಿಮಾನಿಗಳು ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಕಂಡರೆ ಆಗದಷ್ಟು ಮಟ್ಟದಲ್ಲಿ ಟೀಕೆ ಮಾಡುತ್ತಾರೆ. ಇದು ಕನ್ನಡ ಚಿತ್ರರಂಗದ ಸೌಹಾರ್ದತೆಯನ್ನು ಹಾಳು ಮಾಡಿದೆ.

ಇಬ್ಬರ ಜೊತೆಯಾಗಿ ಸೇರಿಕೊಂಡು ಸುಮಲತಾ ಅಂಬರೀಶ್(Sumalatha Ambareesh) ಅವರ ಪರವಾಗಿ ಜೋಡೆತ್ತುಗಳಂತೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಿದ ನಂತರವೂ ಕೂಡ ಇವರೊಬ್ಬರ ನಡುವೆ ಏನು ಸರಿ ಇಲ್ಲ ಹೀಗಾಗಿ ನಾವು ಕೂಡ ದ್ವೇಷತ್ವವನ್ನು ಕಾಯ್ದುಕೊಳ್ಳುತ್ತೇವೆ ಎಂಬ ರೀತಿಯಲ್ಲಿ ಆಡುತ್ತಿದ್ದರು.

ಆದರೆ ಈಗ ಅಭಿಷೇಕ್ ಅಂಬರೀಶ್ ಅವರ ರಿಸೆಪ್ಶನ್ ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಾಗಿ ಸ್ಟೆಪ್ ಹಾಕೋ ಮೂಲಕ ಸಹೋದರತ್ವಕ್ಕಿಂತಲೂ ಹೆಚ್ಚಿನ ಬಾಂಧವ್ಯವನ್ನು ಹೊಂದಿದ್ದೇವೆ ಎಂಬುದನ್ನು ಮತ್ತೆ ಚಿತ್ರರಂಗಕ್ಕೆ ಸಾಬೀತುಪಡಿಸುವ ಮೂಲಕ ಅಭಿಮಾನಿಗಳನ್ನು ಕೂಡ ನೀವು ಮಾಡುತ್ತಿರುವುದು ತಪ್ಪು ಎನ್ನುವುದನ್ನು ನೇರವಾಗಿ ಡಿ ಬಾಸ್ ಹಾಗೂ ಯಶ್(Yash) ಹೇಳಿದ್ದಾರೆ ಎಂದು ಹೇಳಬಹುದಾಗಿದೆ

Leave A Reply

Your email address will not be published.

error: Content is protected !!