Dhruva Sarja: ಧ್ರುವ ಸರ್ಜಾ ಮಗಳ ಹುಟ್ಟು ಹಬ್ಬದ ಸಂಭ್ರಮ, ಗ್ರಾಂಡ್ ಬರ್ತಡೇ ಸೆಲೆಬ್ರೇಶನ್ ಹೇಗಿತ್ತು ನೋಡಿ.

ಸ್ನೇಹಿತರೆ, ನವೆಂಬರ್ 25ನೇ ತಾರೀಕು 2019 ರಂದು ಪ್ರೇರಣಾ ಶಂಕರ್ (Prerana Shankar) ಮತ್ತು ಧ್ರುವ ಸರ್ಜಾ(Dhruva Sarja) ಜೋಡಿಗಳು ಬಹಳ ಅದ್ದೂರಿಯಾಗಿ ಸಪ್ತಪದಿ ಗೆಲುವು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮುದ್ದಾದ ಜೋಡಿಗಳ ಮದುವೆ ಸಂಭ್ರಮಕ್ಕೆ ಸ್ಯಾಂಡಲ್ವುಡ್ನ ಸಿನಿ ತಾರೆಗಳ ಜೊತೆಗೆ ರಾಜಕೀಯ ಗಣ್ಯರು ಹಾಜರಾಗಿ ನವ ವಧು ವರರನ್ನು ಹರಸಿ ಆಶೀರ್ವದಿಸಿದರು. ಹಲವು ವರ್ಷಗಳ ಕಾಲ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಬಹಳ ಗ್ರಾಂಡ್ ಆಗಿ ಹೊಸ ಬದುಕಿಗೆ ಕಾಲಿಟ್ಟ ಜೋಡಿಗಳು

ಅಕ್ಟೋಬರ್ ಎರಡನೇ ತಾರೀಕು 2022 ರಂದು ಮನೆಗೆ ಪುಟ್ಟ ರಾಜಕುಮಾರಿಯನ್ನು ಬರ ಮಾಡಿಕೊಳ್ಳುತ್ತಾರೆ. ಹೌದು ಗೆಳೆಯರೇ ಮಗಳ ಆಗಮನವು ಧ್ರುವ ಸರ್ಜಾ(Dhruva Sarja) ಅವರ ಬದುಕಿನಲ್ಲಿ ಎಲ್ಲಿಲ್ಲದಂತಹ ಸಂತಸ ಹರುಷ ಹಾಗೂ ಸಂಭ್ರಮವನ್ನು ತಂದಿತ್ತು. ಮಗಳಿಗೆ ಒಂದು ವರ್ಷ ತುಂಬಿದರು ಕೂಡ ಧ್ರುವ ಸರ್ಜಾ ಅವರಾಗಲಿ ಪ್ರೇರಣಾ ಅವರಾಗಲಿ ಆಕೆಯ ಹೆಸರನ್ನು ಎಲ್ಲಿಯೂ ರಿವಿಲ್ ಮಾಡಿಲ್ಲ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಮಗಳ ಜೊತೆಗಿನ ಫೋಟೋಗಳನ್ನು ಹಾಗೂ

ಕೆಲ ಮುದ್ದಾದ ವಿಡಿಯೋಗಳನ್ನು ಹಂಚಿಕೊಳ್ಳುವ ಧ್ರುವ ಮತ್ತು ಪ್ರೇರಣಾ ದಂಪತಿಗಳು ಮಗಳನ್ನು ಪುಟಾಣಿ ರಾಜಕುಮಾರಿ ಹಾಗೂ ಸನ್‌ಶೈನ್ ಎಂಬ ನಾಮದಿಂದ ಕರೆಯುತ್ತಿರುತ್ತಾರೆ. ಪುಟ್ಟ ರಾಜಕುಮಾರಿಯ ಹುಟ್ಟು ಹಬ್ಬದ ದಿನವು ಸನ್‌ಶೈನ್ ಎಂಬ ಹೆಸರಿನಿಂದ ಬಹಳ ಅದ್ದೂರಿಯಾಗಿ ಖಾಸಗಿ ರೆಸಾರ್ಟ್ ಒಂದರಲ್ಲಿ ಬರ್ತಡೆ ಸೆಲೆಬ್ರೇಟ್ ಮಾಡಿದ ಧ್ರುವ ದಂಪತಿಗಳು ತಮ್ಮ ಆತ್ಮೀಯ ಕುಟುಂಬಸ್ಥರು ಹಾಗೂ ಕನ್ನಡ ಚಿತ್ರರಂಗದ ಕೆಲ ಮಿತ್ರರನ್ನು ಆಹ್ವಾನಿಸಿದ್ದರು.

ಮಗಳಿಗೆ ಬಿಳಿ ಹಾಗೂ ಗುಲಾಬಿ ಮಿಶ್ರಿತವಿರುವ ಪುಟ್ಟ ಫ್ರಾಕ್ ಅನ್ನು ಹಾಕಿ ಏಂಜಲ್ನಂತೆ ಸಿಂಗರಿಸಿ ವಿಶೇಷ ಥೀಮ್ನಲ್ಲಿ ಅದ್ದೂರಿ ಬರ್ತಡೆ ಸೆಲೆಬ್ರೇಟ್ ಮಾಡಿದರು. ಈ ಒಂದು ವಿಶೇಷ ಕಾರ್ಯಕ್ರಮಕ್ಕೆ ಮೇಘನ ರಾಜ್ ಅವರ ಮಗ ರಾಯನ್ ರಾಜ್ ಸರ್ಜಾ (Rayan Raj Sarja) ಹಾಗೂ ತಂದೆ ತಾಯಿಗಳಾದ ಸುಂದರ್ ರಾಜ್(Sundar Raj) ಮತ್ತು ಪ್ರಮೀಳಾ ಜೋಷಾಯಿ(Pramila Joshai) ದಂಪತಿಗಳು ಕೂಡ ಆಗಮಿಸಿ. ಪುಟಾಣಿಯನ್ನು ಹರಸಿ ಆಶೀರ್ವದಿಸಿದರು. ಸೆಪ್ಟೆಂಬರ್ 18ನೇ ತಾರೀಕು ಗೌರಿ ಗಣೇಶ ಹಬ್ಬದಂದೆ ಪ್ರೇರಣಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಧ್ರುವ ಸರ್ಜಾ ಮನೆಯ ಸಂಭ್ರಮ ದುಪ್ಪಟ್ಟಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!