ಸ್ಯಾಂಡಲ್ ವುಡ್ ಖ್ಯಾತ ನಟ ದಿಗಂತ್ ಗೆ ಅಪಘಾತ! ಪರಿಸ್ಥಿತಿ ತುಂಬಾ ಗಂಭೀರ

ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ನಟ ದಿಗಂತ್ ಅವರ ಮುಖ ಪರಿಚಯ ಪ್ರತಿಯೊಬ್ಬರಿಗು ಇದೆ. ನಟ ದಿಗಂತ್ ಅವರ ಪರಿಸ್ಥಿತಿ ಗಂಭೀರವಾಗಿದೆ. ಇದ್ದಕ್ಕಿದ್ದಂತೆ ಅನಾಹುತವನ್ನು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನಟ ದಿಗಂತ್ ಅವರ ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಹಾಗೆ ಗಾಳಿಪಟ-೨ ಚಿತ್ರದ ಶೂಟಿಂಗ್ ಗಳಲ್ಲಿ ಕೂಡ ದಿಗಂತ್ ಅವರು ಭಾಗಿಯಾಗಿದ್ದರು.

ಹಾಗಾದರೆ ದಿಗಂತ್ ಅವರಿಗೆ ಇದ್ದಕ್ಕಿದ್ದಂತೆ ಏನಾಯ್ತು ಅವರ ಸ್ಥಿತಿ ಈಗ ತುಂಬ ಕಷ್ಟಕರವಾಗಿದೆ. ಕಳೆದ 23ದಿನಗಳ ಹಿಂದೆ ನಟ ದಿಗಂತ್ ಅವರು ತಮ್ಮ ಸ್ನೇಹಿತರೊಂದಿಗೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ಈ ಸಮಯದಲ್ಲಿ ನಟ ದಿಗಂತ್ ಅವರಿಗೆ ಅಪಘಾತವಾಗಿ ಎಡವಟ್ಟಾಗಿದೆ. ನಟ ದಿಗಂತ್ ಅವರು ಗೋವಾದಲ್ಲಿ ಟ್ರೆಕ್ಕಿಂಗ್ ಮತ್ತು ಇನ್ನಿತರ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು. ಮುಂಚೆಯಿಂದಲೂ ನಟ ದಿಗಂತ್ ಅವರಿಗೆ ಟ್ರೆಕ್ಕಿಂಗ್ ಸೈಕ್ಲಿಂಗ್ ಮತ್ತು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು ಎಂದರೆ ತುಂಬಾ ಅಚ್ಚುಮೆಚ್ಚು.

ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುವ ಸಮಯದಲ್ಲಿ ಸಮ್ಮರ್ ಶಾಟ್ ಮತ್ತು ಬ್ಯಾಕ್ ಪ್ಲಿಫ್ ಮಾಡುವ ಸಂದರ್ಭದಲ್ಲಿ ನಟ ದಿಗಂತ್ ಅವರ ಕುತ್ತಿಗೆಗೆ ಪೆಟ್ಟಾಗಿದೆ. ಅಚಾನಕ್ಕಾಗಿ ಬ್ಯಾಕ್ ಪ್ಲಿಫ್ ಮಾಡುವ ವೇಳೆ ಆಯತಪ್ಪಿ ನಟ ದಿಗಂತ್ ಅವರು ತಲೆ ಕೆಳಗಾಗಿ ಬಿದ್ದು ಕುತ್ತಿಗೆಗೆ ತೀವ್ರವಾಗಿ ಪೆಟ್ಟಾಗಿದೆ ಮತ್ತು ನಟ ದಿಗಂತ್ ಅವರ ಪರಿಸ್ಥಿತಿ ಗಂಭೀರವಾಗಿದ್ದು ಗೋವಾದಿಂದಲೇ ನಟ ದಿಗಂತ್ ಅವರನ್ನು ಏರ್ ಲಿಫ್ಟ್ ಅಥವಾ ಏರ್ ಆಂಬುಲೆನ್ಸ್ ನ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿದೆ.

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೆ ಇನ್ನೊಂದು ಅಶುಭ ಸುದ್ದಿಗಳನ್ನು ಕೇಳಿ ನಾವೆಲ್ಲ ಸಾಕಷ್ಟು ನೊಂದು ಕೊಂಡಿದ್ದೇವೆ. ಈ ರೀತಿಯ ಸುದ್ದಿಗಳನ್ನು ಕೇಳೋಕೆ ತುಂಬಾ ಬೇಸರವಾಗುತ್ತೆ ಮತ್ತು ಮನಸ್ಸು ಭಾರವಾಗಿತ್ತೆ. ನಟರು ಇಂಥ ಸಾಹಸ ದೃಶ್ಯ ಮತ್ತು ಕ್ರೀಡೆಗಳನ್ನು ಆಡಬೇಕಿದ್ದರೆ ಮುಂಜಾಗ್ರತೆ ಕ್ರಮವನ್ನು ತೆಗೆದುಕೊಳ್ಳುವುದು ಉತ್ತಮ. ದಿಗಂತ್ ಬಹಳ ಗಟ್ಟಿಮುಟ್ಟಾಗಿರುವ ನಟ , ಹಲವು ಸಾಹಸಗಳನ್ನು ಯಾವುದೇ ಡ್ಯೂಪ್ ಇಲ್ಲದೆ ಮಾಡುವಂಥಹವರಾಗಿದ್ದಾರೆ. ಈ ಹಿಂದೆಯೂ ಕೂಡ ಹಲವಾರು ಸಲ ಇಂತಹದ್ದೇ ಅಪಾಯಕಾರಿ ಬ್ಲಾಕ್ ಫ್ಲಿಪ್‌ಗಳನ್ನು ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಈಗ ಇದೇ ಸಾಹಸ ಕ್ರೀಡೆ ನಟ ದಿಗಂತ್ ಅವರಿಗೆ ಕಂಟಕ ತಂದಿದೆ. ಈಗಾಗಲೇ ದಿಗಂತ್ ನಟಿಸಿರುವ ಗಾಳಿಪಟ-೨,ಮಾರಿಗೋಲ್ಡ್, ಎಡಗೈ ಅಪಘಾತಕ್ಕೆ ಕಾರಣ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ ಇಂತಹ ಸಮಯದಲ್ಲಿ ನಟ ದಿಗಂತ್ ಅವರು ಈ ರೀತಿಯ ರೀತಿಯಾಗಿ ಅನಾಹುತವನ್ನು ಮಾಡಿಕೊಂಡಿರುವುದು ನಿಜಕ್ಕೂ ಬೇಸರದ ವಿಷಯ. ನಟ ದಿಗಂತ್ ಅವರು ಯಾವುದೇ ಅಪಾಯವಿಲ್ಲದೆ ಬೇಗ ಗುಣಮುಖರಾಗಿ ವಾಪಸ್ಸು ಬರಲಿ ಎನ್ನುವುದು ಅಭಿಮಾನಿಗಳ ಬೇಡಿಕೆಯಾಗಿದೆ

Leave a Comment

error: Content is protected !!