ಪುನೀತ್ ಅವರಿಗೆ ಡಾಕ್ಟರೇಟ್ ನೀಡಿದ ನಂತರ ಭಾವುಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಹೇಳಿದ್ದೇನು ಗೊತ್ತಾ!

ಪುನೀತ್ ರಾಜ್ ಕುಮಾರ್ ಅವರು ಕರುನಾಡಿನ ಪ್ರತೀ ಮನೆಯಲ್ಲಿ ಇಂದು ಕೂಡ ಜೀವಂತವಾಗಿದ್ದಾರೆ. ಅವರು ನಮ್ಮನ್ನೆಲ್ಲ ಬಿಟ್ಟು ಹಲವು ತಿಂಗಳುಗಳು ಕಳೆದರೂ ಸಹ ಯಾರೂ ಕೂಡ ಅವರನ್ನು ಇಂದು ಕೂಡ ಮರೆತಿಲ್ಲ. ಅವರನ್ನು ಪ್ರೀತಿಸುವ ಜನರು ಕರ್ನಾಟಕದಲ್ಲಿ ಅಲ್ಲದೆ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಇದ್ದಾರೆ. ಪುನೀತ್ ಅವರು ಇದ್ದಾಗ ಕೂಡ ಇವರಿಗೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿತ್ತು ಅವರು ನಮ್ಮನ್ನೆಲ್ಲ ಅಗಲಿ ಹೋದ ನಂತರವೂ ಅವರಿಗೆ ಬಹಳ ದೊಡ್ಡ ಮಟ್ಟದ ಗೌರವ ಗಳನ್ನು ನೀಡಲಾಗುತ್ತಿದೆ.

ಇಂದು ಮೈಸೂರು ವಿಶ್ವವಿದ್ಯಾನಿಲಯ ಪುನೀತ್ ರಾಜ್ ಕುಮಾರ್ ಅವರಿಗೆ ಡಾಕ್ಟರೇಟ್ ಪದವಿ ಅನ್ನು ಘೋಷಿಸಿದೆ. ಈ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಸ್ವತಃ ಮೈಸೂರು ವಿಶ್ವವಿದ್ಯಾಲಯದವರು ಮನೆಗೆ ತೆರಳಿ ಈ ಕಾರ್ಯಕ್ರಮಕ್ಕೆ ಬರಬೇಕು ಎಂದು ಆಹ್ವಾನವನ್ನೂ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಗಳು ಸ್ವತಃ ಸದಾಶಿವ ನಗರದಲ್ಲಿರುವ ಅಶ್ವಿನಿ ಅವರ ಮನೆಗೆ ತೆರಳಿ ಅವರನ್ನು ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಿದ್ದಾರೆ. ಈ ಸಮಯದಲ್ಲಿ ಅಶ್ವಿನಿ ಅವರು ಹಳೆಯ ಘಟನೆಗಳನ್ನು ಮೆಲುಕು ಹಾಕಿದ್ದಾರೆ.

ಈ ಹಿಂದೆ ಹಲವಾರು ಬಾರಿ ಪುನೀತ್ ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಲು ಆಯೋಜಿಸಲಾಗಿತ್ತು, ಆದರೆ ಅವರು ಅದನ್ನು ವಿನಮ್ರವಾಗಿ ನಿರಾಕರಿಸಿದ್ದರು, ಈ ಪ್ರಶಸ್ತಿಯನ್ನು ಸ್ವೀಕರಿಸುವ ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ ಎಂಬ ಮಾತನ್ನು ಹೇಳಿದ್ದರು ಎಂದು ಅಶ್ವಿನಿ ಅವರು ಗದ್ಗದಿತರಾದರು. ಹಾಗೆ ಹಲವಾರು ಬಾರಿ ವಿಶ್ವವಿದ್ಯಾನಿಲಯದವರು ನಿಮ್ಮ ತಂದೆಯವರಿಗೂ ನಾವು ಗೌರವ ಡಾಕ್ಟರೇಟ್ ಪದವಿಯಿಂದ ನೀಡಿದ್ದೇವೆ, ನಿಮಗೂ ಸಹ ನಾವು ಅದನ್ನು ನೀಡಬೇಕು ಎಂಬುದಾಗಿ ಹೇಳಿದ್ದರು. ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮ ತಂದೆ ತೂಕವೇ ಬೇರೆ, ನನ್ನದೇ ಬೇರೆ ನಾನು ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲ ಎಂಬ ಮಾತನ್ನು ಅವರು ಹೇಳಿದ್ದರು ಎಂದು ಅಶ್ವಿನಿಯವರು ಮೆಲುಕು ಹಾಕಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದರೂ ಸಹ ಅವರು ತುಂಬಾನೇ ನಯವಾಗಿ ವಿನಮ್ರವಾಗಿ ಮಾತನಾಡುತ್ತಿದ್ದರು. ತಾನು ದೊಡ್ಡ ನಟನ ಮನೆಯಲ್ಲಿ ಬೆಳೆದವನು ಎಂಬ ತರ್ಕವನ್ನು ಅವರು ಎಂದೂ ಕೂಡ ತೋರಿಸಿಲ್ಲ ಹಾಗೆ ನಂತರ ಅವರು ಕೂಡ ದೊಡ್ಡ ನಟರಾಗಿ ಬಹಳಷ್ಟು ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ ಮೇಲೆ ಕೂಡ ಅವರು ತಾವು ದೊಡ್ಡ ಸ್ಟಾರ್ ಎಂದು ಎಲ್ಲಿಯೂ ಕೂಡ ತೋರಿಸಿಕೊಳ್ಳುತ್ತಿರಲಿಲ್ಲ. ಜನ ಸಾಮಾನ್ಯರಂತೆ ತಮ್ಮ ಉಡುಪುಗಳನ್ನು ಅವರು ಧರಿಸುತ್ತಿದ್ದರು.

Leave a Comment

error: Content is protected !!