ಹತ್ತು ವರ್ಷಗಳ ಹಿಂದೆ ನಡೆದ ಜ್ಯೂ. ಎನ್ ಟಿ ಆರ್ ಮದುವೆಗೆ ಬಂದ ಅತಿಥಿಗಳ ಸಂಖ್ಯೆ ಮತ್ತು ಮದುವೆಯ ಒಟ್ಟೂ ಖರ್ಚು ಎಷ್ಟು ಗೊತ್ತಾ

ಸೌತ್ ಸಿನಿಮಾರಂಗದಲ್ಲಿ ಸೂಪರ್ ಸ್ಟಾರ್ ನಟ ಜೂ. ಎನ್ ಟಿ ಆರ್ ಗೊತ್ತಿಲ್ಲ ಅನ್ನೋರೇ ಇಲ್ಲ. ಅದರಲ್ಲೂ ಇತ್ತೀಚಿಗೆ ಆರ್ ಆರ್ ಆರ್ ಸಿನಿಮಾದ ಮೂಲಕ ಜೂ. ಎನ್ ಟಿ ಆರ್ ವಿದೇಶದ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಹೌದು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಜೂ. ಎನ್ ಟಿ ಆರ್ ಸಿನಿಮಾಕ್ಕೆ ಬೇರೆಯದೆ ಲೆವೆಲ್ ನಲ್ಲಿ ಬೇಡಿಕೆಯಿದೆ. ಅವರು ಯಾವುದೇ ಚಿತ್ರ ತೆರೆಕಾಣುತ್ತಿದೆ ಅಂದ್ರೆ ಜೂ. ಎನ್ ಟಿ ಆರ್ ಅವರ ಅಭಿಮಾನಿ ಬಳಗ ಅದಕ್ಕಾಗಿ ಕಾಯುತ್ತಾ ಇರುತ್ತೆ.

ಇಂದು ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಜೂ. ಎನ್ ಟಿ ಆರ್ ಅವರ ಸಿನಿಮಾಕ್ಕೆ ನೂರಾರು ಕೋಟಿ ಬಂಡವಾಳ ಹಾಕಿ ಸಿನಿಮಾ ನಿರ್ಮಾಣ ಮಾಡಲಾಗುತ್ತದೆ. ಜೂ. ಎನ್ ಟಿ ಆರ್ ಅವರ ನಟನೆಯ ಯಾವುದೇ ಚಿತ್ರವನ್ನು ನೋಡಿ, ಒಂದು ರೇಂಜಿಗೆ ಅದ್ದೂರಿಯಾದ ಸೆಟ್ ನಲ್ಲಿ ನಿರ್ಮಾಣವಾಗುವ ಸಿನಿಮಾ ಅದಾಗಿರುತ್ತೆ. ಖ್ಯಾತ ನಿರ್ದೇಶಕ, ನಿರ್ಮಾಪಕರ ಜೊತೆಗೆ ಕೆಲಸ ಮಾಡಿದ ಖ್ಯಾತಿ ಜೂ. ಎನ್ ಟಿ ಆರ್ ಅವರದ್ದು.

ಸಿನಿಮಾ ಮೂಲಕ ಮಾತ್ರವಲ್ಲ, ಅವರ ಜೀವನದಲ್ಲಿ ನಡೆದ ಮಹತ್ವದ ಇನ್ನೊಂದು ಘಟನೆ ಅಂದ್ರೆ ಅವರ ಮದುವೆ. ಜೂ. ಎನ್ ಟಿ ಆರ್ ಅವರ ಮದುವೆ ಕಳೆದು ಕೆಲವು ವರ್ಷಗಳೇ ಸಂದಿವೆ. ಆದರೆ ಅವರ ಮದುವೆಯ ಬಗ್ಗೆ ಈಗ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ? ಇಂದು ಕೋಟಿ ಕೋಟಿ ಸಂಭಾವನೆಯನ್ನು ಪಡೆಯುತ್ತಿರುವ ಜೂ. ಎನ್ ಟಿ ಆರ್ ತಮ್ಮ ಮದುವೆಗೆ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಎನ್ನುವುದು. ಒಬ್ಬ ಸ್ಟಾರ್ ನಟರ ಮದುವೆ ಅಂದ್ರೆ ಅದರ ಬಗ್ಗೆ ಜನರಿಗೆ ಕುತೂಹಲವು ಇರುತ್ತೆ, ಜೊತೆಗೆ ಅಂತಹ ಮದುವೆಗಳಿಗೆ ಸಾಕಷ್ಟು ವಿಐಪಿಗಳು, ಸ್ಟಾರ್ ನಟ ನಟಿಯರು ಭಾಗವಹಿಸುತ್ತಾರೆ. ಹಾಗಾಗಿ ಸಹಜವಾಗಿಯೇ ಸ್ಟಾರ್ ನಟರ ಮದುವೆ ಅದ್ದೂರಿಯಾಗಿರುತ್ತೆ.

ಅದರ ಖರ್ಚು ಕೂಡ ಅಷ್ಟೇ ಹೆಚ್ಚಾಗಿರುತ್ತೆ. ಇದೀಗ ಜೂ. ಎನ್ ಟಿ ಆರ್ ಅವರ ಮದುವೆಗೆ ಆಗಲೇ ನೂರು ಕೋಟಿ ಖರ್ಚು ಮಾಡಿ ಮದುವೆ ಮಾಡಲಾಗಿತ್ತು ಎಂಬ ಸುದ್ದಿ ಟಾಲಿವುಡ್ ತುಂಬಾ ಹರಿದಾಡುತ್ತಿದೆ. ಅಷ್ಟೇ ಅಲ್ಲ ಜೂ. ಎನ್ ಟಿ ಆರ್ ಅವರ ಮದುವೆಗೆ ಭಾಗವಹಿಸಿದವರು ಎಷ್ಟು ಜನ ಗೊತ್ತೆ! ಕನಿಷ್ಠ ಅಂದ್ರೂ ಸುಮಾರು ಹದಿನೈದು ಸಾವಿರ ಜನ ಭಾಗವಹಿಸಿ ಜೂ. ಎನ್ ಟಿ ಆರ್ ದಂಪತಿಗಳಿಗೆ ಶುಭ ಹಾರೈಸಿದರು.

ಇದರಲ್ಲಿ ಇಂಟರೆಸ್ಟಿಂಗ್ ವಿಷಯ ಏನಂದ್ರೆ ಭಾಗವಹಿಸಿದವರ ಪೈಕಿ ಸುಮಾರು ಹನ್ನೆರಡು ಸಾವಿರ ಜನ ಜೂ. ಎನ್ ಟಿ ಆರ್ ಅವರ ಅಭಿಮಾನಿಗಳೇ ಅಂದರೆ ಅವರ ವರ್ಚಸ್ಸು ಎಷ್ಟರಮಟ್ಟಿಗೆ ಇರಬಹುದು ನೀವೇ ಊಹಿಸಿಕೊಳ್ಳಿ. 2011ರಲ್ಲಿ ನಟ ಜೂ. ಎನ್ ಟಿ ಆರ್ ಅವರು ಲಕ್ಷ್ಮಿ ಪ್ರಣತಿ ಎಂಬವರನ್ನು ವಿವಾಹವಾಗಿದ್ದರು. ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದ ಜೂ. ಎನ್ ಟಿ ಆರ್ 10 ವರ್ಷದ ಹಿಂದೆಯೇ ನೂರು ಕೋಟಿ ಖರ್ಚು ಮಾಡಿ ಮದುವೆಯಾಗಿದ್ದರೂ ಅಂದ್ರೆ ನೀವು ನಂಬಲೇಬೇಕು.

Leave a Comment

error: Content is protected !!